ಪ್ರಧಾನ ಮಂತ್ರಿಯವರ ಕಛೇರಿ
ಎಸ್.ಸಿ.ಒ. ಶೃಂಗಸಭೆಯ ಸಂದರ್ಭದಲ್ಲಿ ಮ್ಯಾನ್ಮಾರ್ ನ ರಾಷ್ಟ್ರೀಯ ಭದ್ರತೆ ಮತ್ತು ಶಾಂತಿ ಆಯೋಗದ ಅಧ್ಯಕ್ಷರಾದ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಪ್ರಧಾನಮಂತ್ರಿ ಅವರು ಭೇಟಿ ಮಾಡಿದರು
Posted On:
31 AUG 2025 4:50PM by PIB Bengaluru
ಟಿಯಾಂಜಿನ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ನ ರಾಷ್ಟ್ರೀಯ ಭದ್ರತೆ ಮತ್ತು ಶಾಂತಿ ಆಯೋಗದ ಅಧ್ಯಕ್ಷರಾದ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಭೇಟಿಯಾದರು.
ಭಾರತವು ತನ್ನ ನೆರೆಹೊರೆಯವರು ಮೊದಲು ಎಂಬ ತತ್ವ ಹೊಂದಿದೆ, ಇದಕ್ಕೆ ಪೂರ್ವ ದೇಶಗಳ ನೀತಿಗಳ ಕ್ರಮವಾಗಿ ಮತ್ತು ಇಂಡೋ-ಪೆಸಿಫಿಕ್ ನೀತಿಗಳ ಭಾಗವಾಗಿ ಮ್ಯಾನ್ಮಾರ್ ನೊಂದಿಗಿನ ಸಂಬಂಧಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಭಿವೃದ್ಧಿ ಪಾಲುದಾರಿಕೆ, ರಕ್ಷಣೆ ಮತ್ತು ಭದ್ರತೆ, ಗಡಿ ನಿರ್ವಹಣೆ ಮತ್ತು ಗಡಿ ವ್ಯಾಪಾರ ಸಮಸ್ಯೆಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ಹಲವಾರು ಅಂಶಗಳ ಕುರಿತು ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ಮುಂದಿನ ದಾರಿಯ ಬಗ್ಗೆ ಕೂಡ ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಚರ್ಚಿಸಿದರು. ದ್ವಿದೇಶಗಳ ನಡುವೆ ನಡೆಯುತ್ತಿರುವ ಸಂಪರ್ಕ ಯೋಜನೆಗಳಲ್ಲಿನ ಪ್ರಗತಿಯು, ಎರಡೂ ದೇಶಗಳ ಜನರ ನಡುವೆ ಹೆಚ್ಚಿನ ಸಂವಹನವನ್ನು ಬೆಳೆಸುತ್ತದೆ ಮತ್ತು ಭಾರತದ ಪೂರ್ವದಡೆಗೆ ಕ್ರಮ ನೀತಿಯಲ್ಲಿ ಕಲ್ಪಿಸಲಾಗಿರುವಂತೆ ಪ್ರಾದೇಶಿಕ ಸಹಕಾರ ಮತ್ತು ಏಕೀಕರಣವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಮ್ಯಾನ್ಮಾರ್ ನಲ್ಲಿ ಮುಂಬರುವ ಚುನಾವಣೆಗಳು ಎಲ್ಲಾ ಪಾಲುದಾರರನ್ನು ಒಳಗೊಂಡ ನ್ಯಾಯಯುತ ಮತ್ತು ಸಮಗ್ರ ರೀತಿಯಲ್ಲಿ ನಡೆಯಲಿವೆ ಎಂಬ ಆಶಯವನ್ನು ಪ್ರಧಾನಮಂತ್ರಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮ್ಯಾನ್ಮಾರ್ ನೇತೃತ್ವದ ಮತ್ತು ಮ್ಯಾನ್ಮಾರ್ ಒಡೆತನದ ಶಾಂತಿ ಎಲ್ಲಾ ರೀತಿಯ ಪ್ರಕ್ರಿಯೆಯನ್ನು ಭಾರತ ಬೆಂಬಲಿಸುತ್ತದೆ, ಶಾಂತಿಯುತ ಸಂವಾದ ಮತ್ತು ಸಮಾಲೋಚನೆ ಮಾತ್ರ ಮುಂದಿನ ದಾರಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಮ್ಯಾನ್ಮಾರ್ ನ ಅಭಿವೃದ್ಧಿ ಅಗತ್ಯಗಳನ್ನು ಬೆಂಬಲಿಸಲು ಭಾರತದ ಸಿದ್ಧತೆಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
*****
(Release ID: 2162493)
Visitor Counter : 2
Read this release in:
Malayalam
,
Khasi
,
English
,
Urdu
,
Hindi
,
Marathi
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu