ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತಕ್ಕಾಗಿ ಕ್ರಿಯಾ ಯೋಜನೆ - ಜಪಾನ್ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಯೋಗ

Posted On: 29 AUG 2025 6:54PM by PIB Bengaluru

5 ವರ್ಷಗಳಲ್ಲಿ 5,00,000 ಸಿಬ್ಬಂದಿಯ ದ್ವಿಪಕ್ಷೀಯ ವಿನಿಮಯ, ಇದರಲ್ಲಿ 50,000 ನುರಿತ ಸಿಬ್ಬಂದಿ ಮತ್ತು ಭಾರತದಿಂದ ಜಪಾನ್ ಗೆ ಸಂಭಾವ್ಯ ಪ್ರತಿಭೆಗಳು ಸೇರಿವೆ.

2025ರ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ಸಮಯದಲ್ಲಿ, ಭಾರತ ಮತ್ತು ಜಪಾನ್ನ ಪ್ರಧಾನ ಮಂತ್ರಿಗಳು ಭೇಟಿ ನೀಡುವುದು ಮತ್ತು ವಿನಿಮಯಗಳ ಮೂಲಕ ತಮ್ಮ ನಾಗರಿಕರ ನಡುವೆ ಆಳವಾದ ತಿಳುವಳಿಕೆಯನ್ನು ಹೆಚ್ಚಿಸುವ ಅಗತ್ಯವನ್ನು  ಮನಗಂಡರು  ಮತ್ತು ಮೌಲ್ಯಗಳನ್ನು  ಜೊತೆಯಾಗಿ ಸೃಷ್ಟಿಸಲು ಮತ್ತು ಸಂಬಂಧಿತ ದೇಶದ ಆದ್ಯತೆಗಳಿಗೆ ಪರಿಹಾರ ಮತ್ತು  ತಮ್ಮ ಮಾನವ ಸಂಪನ್ಮೂಲಗಳಿಗೆ ಸಹಯೋಗದ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.

ಅದರಂತೆ, ಭಾರತ ಮತ್ತು ಜಪಾನ್ ನ ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಭವಿಷ್ಯದ ಪೀಳಿಗೆಯಲ್ಲಿ ಎರಡೂ ದೇಶಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿ ವಿನಿಮಯವನ್ನು ವಿಸ್ತರಿಸಲು ಪ್ರಯತ್ನಿಸುತ್ತವೆ. ಮುಂದಿನ ಐದು ವರ್ಷಗಳಲ್ಲಿ ಎರಡೂ ಕಡೆಯಿಂದ  5,00,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಿನಿಮಯ ಮಾಡಿಕೊಳ್ಳುವ ಮಹತ್ವಾಕಾಂಕ್ಷೆಯ ಗುರಿಯನ್ನು ಎರಡೂ ದೇಶಗಳು ಹೊಂದಿವೆ, ಇದರಲ್ಲಿ 50,000 ನುರಿತ ಸಿಬ್ಬಂದಿ ಮತ್ತು ಭಾರತದಿಂದ ಜಪಾನ್ಗೆ ಸಂಭಾವ್ಯ ಪ್ರತಿಭೆಗಳು ಸೇರಿವೆ, ಇದರಿಂದಾಗಿ ಭಾರತ ಮತ್ತು ಜಪಾನ್ ನಡುವೆ ಜನರಿಂದ ಜನರಿಗೆ ವಿನಿಮಯದ ಹೊಸ ಹರಿವು ಸೃಷ್ಟಿಯಾಗುತ್ತದೆ. ಅಂತಹ ಪ್ರಯತ್ನಗಳನ್ನು ಈ ಕೆಳಗಿನ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುವುದು:

i. ಸಂಬಂಧಿತ ದೃಷ್ಟಿಕೋನಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಭಾರತದಿಂದ ಜಪಾನ್ ಗೆ ಕೌಶಲ್ಯಪೂರ್ಣ ಸಿಬ್ಬಂದಿ ಮತ್ತು ಸಂಭಾವ್ಯ ಪ್ರತಿಭೆಗಳನ್ನು ಆಕರ್ಷಿಸುವುದು.

ii. ಎರಡೂ ದೇಶಗಳಲ್ಲಿ ಜಂಟಿ ಸಂಶೋಧನೆ, ವಾಣಿಜ್ಯೀಕರಣ ಮತ್ತು ಆರ್ಥಿಕ ಮೌಲ್ಯ ಸೃಷ್ಟಿಗಾಗಿ ಮಾನವಶಕ್ತಿ ಸಂಪನ್ಮೂಲವನ್ನು ಬಳಸಿಕೊಳ್ಳುವುದು.

iii. ಭಾರತದಲ್ಲಿ ಜಪಾನೀಸ್ ಭಾಷಾ ಶಿಕ್ಷಣವನ್ನು ಉತ್ತೇಜಿಸುವುದು, ಹಾಗೆಯೇ ಭವಿಷ್ಯದ ಹೂಡಿಕೆಯಾಗಿ ದ್ವಿಮುಖ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ತಳಮಟ್ಟದ ವಿನಿಮಯವನ್ನು ಉತ್ತೇಜಿಸುವುದು.

iv. ಕೌಶಲ್ಯ ಅಭಿವೃದ್ಧಿಯನ್ನು ವೇಗಗೊಳಿಸುವ ಮತ್ತು ಅದರ ಉತ್ಪಾದನಾ ವಲಯವನ್ನು ಬಲಪಡಿಸುವ ಗುರಿಯೊಂದಿಗೆ ಐಟಿ ಸಿಬ್ಬಂದಿ ಸೇರಿದಂತೆ ಮಾನವಶಕ್ತಿಯ ಕೊರತೆಯನ್ನು ಎದುರಿಸುತ್ತಿರುವ ಜಪಾನ್ ಮತ್ತು ಭಾರತ ಎರಡಕ್ಕೂ ಆರ್ಥಿಕವಾಗಿ ಪ್ರಯೋಜನಕಾರಿ ಅಂಶಗಳನ್ನು  ಬಳಸಿಕೊಳ್ಳುವುದು.

v. ಜಪಾನಿನ ಕಂಪನಿಗಳು ಮತ್ತು ಭಾರತೀಯ ವಿದ್ಯಾರ್ಥಿಗಳ ನಡುವಿನ ಸಂಪರ್ಕದ ಕೊಂಡಿಗಳನ್ನು ಬಲಪಡಿಸುವುದು.

ಈ ದಿಕ್ಕಿನಲ್ಲಿ, ಭಾರತ ಮತ್ತು ಜಪಾನ್ ಜಂಟಿಯಾಗಿ ಈ ಕೆಳಗಿನ ಕ್ರಿಯಾ ಯೋಜನೆಯನ್ನು ಪ್ರಾರಂಭಿಸುತ್ತವೆ, ಇದು ಮುಂದಿನ ಐದು ವರ್ಷಗಳಲ್ಲಿ ಭಾರತದಿಂದ ಜಪಾನ್ ಗೆ 50,000 ಕೌಶಲ್ಯಪೂರ್ಣ ಸಿಬ್ಬಂದಿ ಮತ್ತು ಸಂಭಾವ್ಯ ಪ್ರತಿಭೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ, ಕೈಗಾರಿಕಾ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ವಿವಿಧ ಸಂಸ್ಥೆಗಳ ಪ್ರಯತ್ನಗಳನ್ನು ಉತ್ತೇಜಿಸುತ್ತದೆ.

(1) ಉನ್ನತ ಕೌಶಲ್ಯ ಹೊಂದಿರುವ ಸಿಬ್ಬಂದಿ:

ಮುಂದಿನ 5 ವರ್ಷಗಳಲ್ಲಿ ಜಪಾನ್ಗೆ ಭಾರತೀಯ ಎಂಜಿನಿಯರಿಂಗ್ ವೃತ್ತಿಪರರು ಮತ್ತು ಶೈಕ್ಷಣಿಕ ಸಿಬ್ಬಂದಿಯ ಹರಿವನ್ನು ಈ ಕೆಳಗಿನ ಅಂಶಗಳ ಮೂಲಕ ಹೆಚ್ಚಿಸಲಾಗುವುದು ಹಾಗು ಇದನ್ನು ಸುಗಮಗೊಳಿಸಲಾಗುವುದು :

ಎ) ಸೆಮಿಕಂಡಕ್ಟರ್ಗಳು ಮತ್ತು ಕೃತಕ ಬುದ್ಧಿಮತ್ತೆ (ಎ.ಐ.) ಸೇರಿದಂತೆ ಉದ್ದೇಶಿತ ಕ್ಷೇತ್ರಗಳಲ್ಲಿ ಜಪಾನಿನ ಕಂಪನಿಗಳಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಜಪಾನಿನ ಕಂಪನಿಗಳ ವಿಶೇಷ ಮಿಷನ್.

ಬಿ) ಜಪಾನ್ ನಲ್ಲಿ ಭಾರತೀಯ ವೃತ್ತಿಪರರ ಉದ್ಯೋಗ ಸಮೀಕ್ಷೆಯನ್ನು ನಡೆಸುವುದು, ಉತ್ತಮ ಅಭ್ಯಾಸಗಳು/ಯಶಸ್ಸಿನ ಕಾರ್ಯಗಳನ್ನು ಗುರುತಿಸುವುದು, ಜಾಗೃತಿ ಮೂಡಿಸುವುದು ಮತ್ತು ಉದ್ಯೋಗವನ್ನು ಸುಗಮಗೊಳಿಸುವುದು. ಇದರಿಂದಾಗಿ ಜಪಾನ್ನಲ್ಲಿ ಹೆಚ್ಚಿನ ಉದ್ಯೋಗ ನಿಯೋಜನೆಯನ್ನು ಖಚಿತಪಡಿಸುವುದು ಮತ್ತು ಭಾರತೀಯ ಪ್ರತಿಭೆಯನ್ನು ಉಳಿಸಿಕೊಳ್ಳುವುದು. 

ಸಿ) ಜಪಾನ್ ವಿನಿಮಯ ಮತ್ತು ಬೋಧನೆ (ಜೆ.ಇ.ಟಿ.) ಕಾರ್ಯಕ್ರಮದ ಅಡಿಯಲ್ಲಿ ಜಪಾನ್ ನಲ್ಲಿ ಭಾರತದ ಇಂಗ್ಲಿಷ್ ಭಾಷಾ ಸಹಾಯಕ ಶಿಕ್ಷಕರ ಉದ್ಯೋಗವನ್ನು ಉತ್ತೇಜಿಸುವುದು.

(2) ವಿದ್ಯಾರ್ಥಿಗಳು ಮತ್ತು ಸಂಶೋಧಕರು:

ಮುಂದಿನ 5 ವರ್ಷಗಳಲ್ಲಿ ಈ ಕೆಳಗಿನ ಅಂಶಗಳಿಂದ ಜಪಾನ್ ದೇಶಕ್ಕೆ  ಭಾರತೀಯ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಸಂಶೋಧಕರ ಭೇಟಿಯನ್ನು ಹೆಚ್ಚಿಸುವುದು:  

ಎ) ಎಂ.ಇ.ಎಕ್ಸ್.ಟಿ (MEXT) ಜಪಾನ್ ಮತ್ತು ಭಾರತದ ಶಿಕ್ಷಣ ಸಚಿವಾಲಯದ ನಡುವಿನ ದ್ವಿಪಕ್ಷೀಯ ಉನ್ನತ ಮಟ್ಟದ ಶಿಕ್ಷಣ ನೀತಿ ಸಂವಾದದ ಮೂಲಕ  ಭಾರತ ಮತ್ತು ಜಪಾನ್ ನಡುವಿನ ವಿದ್ಯಾರ್ಥಿ ವಿನಿಮಯವನ್ನು ಉತ್ತೇಜಿಸಲು ಮತ್ತು ಜಪಾನ್ನಲ್ಲಿ ಭಾರತೀಯ ಪ್ರತಿಭೆಗಳ ಶಿಕ್ಷಣದ ನಂತರದ ಇಂಟರ್ನ್ಶಿಪ್ ಮತ್ತು ಉದ್ಯೋಗವನ್ನು ಸುಗಮಗೊಳಿಸುವ ಕ್ರಮಗಳ ಮೇಲೆ ಹೆಚ್ಚಿನ ಗಮನ ಹರಿಸುವುದು.

ಬಿ) ಭಾರತದಲ್ಲಿನ ಪಾಲುದಾರ ವಿಶ್ವವಿದ್ಯಾಲಯಗಳೊಂದಿಗೆ ಖಚಿತ ಗುಣಮಟ್ಟದ ಅಂತರರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು/ನಡೆಸಲು ಜಪಾನಿನ ವಿಶ್ವವಿದ್ಯಾಲಯಗಳನ್ನು ಬೆಂಬಲಿಸುವ MEXT ನಿಂದ ಅಂತರ-ವಿಶ್ವವಿದ್ಯಾಲಯ ವಿನಿಮಯ ಯೋಜನೆಯನ್ನು ಉತ್ತೇಜಿಸುವುದು.

ಸಿ) ಜಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಜೆ.ಎಸ್.ಟಿ.- JST) ಸಕುರಾ ವಿಜ್ಞಾನ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಜಪಾನ್ ದೇಶಕ್ಕ ಭಾರತೀಯ ವಿದ್ಯಾರ್ಥಿಗಳು ಮತ್ತು ಸಂಶೋಧಕರ ಭೇಟಿಗಳು, ಮಹಿಳಾ ಸಂಶೋಧಕರು ಭಾಗವಹಿಸಲು ಪ್ರೋತ್ಸಾಹಿಸುವುದು.

ಡಿ) ಜಪಾನ್ ನಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಜಪಾನ್ ಸರ್ಕಾರದ (MEXT) ವಿದ್ಯಾರ್ಥಿವೇತನದ ಮೂಲಕ ನಿರಂತರ ಬೆಂಬಲ.

ಇ) ಜಪಾನ್  ವಿದೇಶಾಂಗ ಸಚಿವಾಲಯವು ಹೊಸದಾಗಿ ಪ್ರಾರಂಭಿಸಿರುವ ಎಂ.ಐ.ಆರ್.ಎ.ಐ- ಸೇತು (MIRAI- Setu) ಕಾರ್ಯಕ್ರಮವು ಭಾರತೀಯ ವಿಶ್ವವಿದ್ಯಾಲಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಜಪಾನಿನ ಕಂಪನಿಗಳಿಗೆ ಭೇಟಿ ನೀಡಲು ಮತ್ತು ಒಂದು ತಿಂಗಳ ಅವಧಿಯ ಇಂಟರ್ನ್ಶಿಪ್ ತರಬೇತಿಗಾಗಿ ಆಹ್ವಾನಿಸುವುದು.

ಎಫ್) ಭಾರತೀಯ ಮತ್ತು ಜಪಾನಿನ ಸಚಿವಾಲಯಗಳು ಅಥವಾ ಏಜೆನ್ಸಿಗಳು ಕ್ರಮವಾಗಿ ಸುಗಮಗೊಳಿಸುವ ಅಂತರರಾಷ್ಟ್ರೀಯ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಅಲ್ಪಾವಧಿಯ ವಿನಿಮಯಕ್ಕಾಗಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಜಪಾನಿನ ಸಂಸ್ಥೆಗಳಿಗೆ ನೇರವಾಗಿ ಆಹ್ವಾನಿಸುವುದು ಇದರಿಂದಾಗಿ ಎರಡೂ ದೇಶಗಳ ನಡುವಿನ ದೀರ್ಘಾವಧಿಯ ವೈಜ್ಞಾನಿಕ ಪ್ರತಿಭೆ ವರ್ಗಾವಣೆಯನ್ನು ಮತ್ತಷ್ಟು ಹೆಚ್ಚಿಸುವುದು.

ಜಿ) ಜಪಾನ್ ದೇಶಕ್ಕೆ ಬರುವ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಯುವ ಸಂಶೋಧಕರಿಗೆ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಭಾರತೀಯ ಮತ್ತು ಜಪಾನಿನ ವಿಶ್ವವಿದ್ಯಾಲಯಗಳ ನಡುವೆ ಜಂಟಿ ಸಂಶೋಧನೆಯನ್ನು ಉತ್ತೇಜಿಸಲು ಜಪಾನ್ ನ MEXT ನಿಂದ ಹೊಸದಾಗಿ ಪರಿಚಯಿಸಲಾದ LOTUS ಕಾರ್ಯಕ್ರಮ (ಭಾರತ-ಜಪಾನ್ ವಿಜ್ಞಾನದಲ್ಲಿ ಪ್ರತಿಭಾನ್ವಿತ ಯುವಕರ ಪ್ರಸರಣ ಕಾರ್ಯಕ್ರಮ). ಹೆಚ್ಚುವರಿಯಾಗಿ, ಇಂಟರ್ನ್ಶಿಪ್ಗಳ ಮೂಲಕ ಆಸಕ್ತಿ ಹೊಂದಿರುವವರಿಗೆ ಜಪಾನಿನ ಕಂಪನಿಗಳೊಂದಿಗೆ  ಹೊಂದಿಕೊಳ್ಳಲು  ಅನುಕೂಲವಾಗುವಂತೆ ಎಂ.ಇ.ಟಿ.ಐ. (METI) ಕಾರ್ಯಕ್ರಮವನ್ನು ಬೆಂಬಲಿಸುತ್ತದೆ ಇದು  ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ಸಹಯೋಗವನ್ನು ಮತ್ತಷ್ಟು ಹೆಚ್ಚಿಸುತ್ತದೆ.

(3) ನಿರ್ದಿಷ್ಟಪಡಿಸಿದ ಕೌಶಲ್ಯಪೂರ್ಣ ಕೆಲಸಗಾರ (SSW) ವ್ಯವಸ್ಥೆ/ತಾಂತ್ರಿಕ ಇಂಟರ್ನ್ ತರಬೇತಿ ಕಾರ್ಯಕ್ರಮ (TITP):

3) ನಿರ್ದಿಷ್ಟ ಕೌಶಲ್ಯಪೂರ್ಣ ಕೆಲಸಗಾರ (ಎಸ್.ಎಸ್.ಡಬ್ಲ್ಯೂ - SSW) ವ್ಯವಸ್ಥೆ/ತಾಂತ್ರಿಕ ಇಂಟರ್ನ್ ತರಬೇತಿ ಕಾರ್ಯಕ್ರಮ (ಟಿ.ಐ.ಟಿ.ಪಿ - TITP):

ಈ ಕೆಳಗಿನ ಅಂಶಗಳ ಮೂಲಕ ಜಪಾನ್ ನ ಎಸ್.ಎಸ್.ಡಬ್ಲ್ಯೂ  ವ್ಯವಸ್ಥೆಯಡಿಯಲ್ಲಿ 5 ವರ್ಷಗಳಲ್ಲಿ ಭಾರತೀಯ ಸಿಬ್ಬಂದಿಗಳ ಹರಿವನ್ನು ಹೆಚ್ಚಿಸುವುದು, ಇದನ್ನು ಸುಗಮಗೊಳಿಸಲಾಗುವುದು

ಎ) ಭಾರತದಲ್ಲಿ ಎಸ್.ಎಸ್.ಡಬ್ಲ್ಯೂ ಪರೀಕ್ಷೆಗೆ ಎಲ್ಲಾ 16 ವಿಭಾಗಗಳನ್ನು  ಸೇರಿಸಲು  ಪ್ರಯತ್ನಿಸುವುದು.

ಬಿ) ಭಾರತದ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಈಶಾನ್ಯ ಪ್ರದೇಶಗಳನ್ನು ಒಳಗೊಂಡಂತೆ ಕೌಶಲ್ಯ ಪರೀಕ್ಷೆಗಳು ಮತ್ತು ಜಪಾನೀಸ್ ಭಾಷಾ ಪರೀಕ್ಷೆಗಳಿಗೆ ಹೊಸ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವತ್ತ ಪ್ರಯತ್ನಗಳನ್ನು ಮಾಡುವುದು.

ಸಿ) ಭಾರತದ ವಿದೇಶಾಂಗ ಸಚಿವಾಲಯದ (ಎಂ.ಇ.ಎ.) ʼಪ್ರವಾಸಿ ಕೌಶಲ್ ವಿಕಾಸ್ ಯೋಜನೆʼ ಕಾರ್ಯಕ್ರಮದ ಮೂಲಕ ಅರ್ಹ ಭಾರತೀಯ ಎಸ್.ಎಸ್.ಡಬ್ಲ್ಯೂ ಸಿಬ್ಬಂದಿಗೆ ನಿರ್ಗಮನ ಪೂರ್ವ ಔದ್ಯೋಗಿಕ ಭಾಷಾ ತರಬೇತಿಯನ್ನು ಒದಗಿಸುವುದು.

ಡಿ) ಭಾರತದ ಇ-ಮೈಗ್ರೇಟ್ ಪೋರ್ಟಲ್ ನಲ್ಲಿ ಜಪಾನ್ ಅನ್ನು ಗಮ್ಯಸ್ಥಾನ ದೇಶವಾಗಿ ಸೇರಿಸುವುದು ಮತ್ತು ಜಪಾನಿನ ಉದ್ಯೋಗದಾತರಿಂದ ಪ್ರಮಾಣೀಕೃತ ಭಾರತೀಯ ಸಿಬ್ಬಂದಿಯ ಸುರಕ್ಷಿತ, ಕಾನೂನುಬದ್ಧ ಮತ್ತು ಕ್ರಮಬದ್ಧ ನೇಮಕಾತಿಗಾಗಿ ಭಾರತದ ರಾಷ್ಟ್ರೀಯ ವೃತ್ತಿ ಸೇವಾ ವೇದಿಕೆಯಲ್ಲಿ ಮೀಸಲಾದ ಭಾರತ-ಜಪಾನ್ ಕಾರಿಡಾರ್ ಅನ್ನು ರಚಿಸುವುದು.

ಇ) ಒಮ್ಮೆ ಪರಿಚಯಿಸಿದ ನಂತರ  ಟಿ.ಐ.ಟಿ.ಪಿ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಉದ್ಯೋಗ (ಇ.ಎಸ್.ಡಿ.) ಕಾರ್ಯಕ್ರಮದ ಮೂಲಕ ಭಾರತೀಯ ಸಂಭಾವ್ಯ ಪ್ರತಿಭೆಗಳನ್ನು ಜಪಾನ್ ಗೆ ಆಕರ್ಷಿಸುವುದು.

(4) ಕೌಶಲ್ಯ ಅಭಿವೃದ್ಧಿ:

ಭಾರತದಲ್ಲಿ ಕೌಶಲ್ಯ ಮಟ್ಟವನ್ನು ಉನ್ನತೀಕರಿಸಲು ಮತ್ತು ಜಪಾನ್ಗೆ ಸಿದ್ಧವಾಗಿರುವ ಕಾರ್ಯಪಡೆಯನ್ನು ಪ್ರಮಾಣದಲ್ಲಿ ಉತ್ಪಾದಿಸಲು ಜಪಾನ್ನ ನಿರ್ವಹಣಾ, ಕೈಗಾರಿಕಾ ಮತ್ತು ಉತ್ಪಾದನಾ ಸಾಮರ್ಥ್ಯವನ್ನು  ಇವುಗಳ  ಮೂಲಕ ಬಳಸಿಕೊಳ್ಳುವುದು :

ಎ) ಭಾರತ-ನಿಪ್ಪಾನ್ ಅನ್ವಯಿಕ ಸಾಮರ್ಥ್ಯ ತರಬೇತಿ ಕಾರ್ಯಕ್ರಮ (ಐ.ಎನ್.ಪಿ.ಎ.ಟಿ -  INPACT) ದಂತಹ ಉಪಕ್ರಮಗಳ ಅಡಿಯಲ್ಲಿ ಭಾರತದಲ್ಲಿ ಜಪಾನಿನ ಕಂಪನಿಗಳಿಂದ ದತ್ತಿ ಕೋರ್ಸ್ಗಳು ಮತ್ತು ವೃತ್ತಿಪರ ತರಬೇತಿ ಕಾರ್ಯಕ್ರಮಗಳ ವೆಚ್ಚಕ್ಕೆ ಸಬ್ಸಿಡಿಯನ್ನು ಒದಗಿಸುವುದು.

ಬಿ) ಹೊಸದಾಗಿ ಪ್ರಾರಂಭಿಸಲಾದ "ಭಾರತ-ಜಪಾನ್ ಟ್ಯಾಲೆಂಟ್ ಬ್ರಿಡ್ಜ್" ಕಾರ್ಯಕ್ರಮ ಮತ್ತು ಇತರ ಯೋಜನೆಗಳ ಮೂಲಕ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಜೀವನದ ಮಧ್ಯದಲ್ಲಿ ಭಾರತೀಯ ನುರಿತ ವೃತ್ತಿಪರರಿಗೆ ಇಂಟರ್ನ್ಶಿಪ್ ಕಾರ್ಯಕ್ರಮಗಳು ಮತ್ತು ಉದ್ಯೋಗ ಹೊಂದಾಣಿಕೆಯ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.

ಸಿ) ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್.ಎಸ್.ಡಿ.ಸಿ ) ದ ಸಮನ್ವಯದೊಂದಿಗೆ ತಮ್ಮ ನಿವಾಸಿಗಳ ಸಂಬಂಧಿತ ತರಬೇತಿ ಮತ್ತು ನಿಯೋಜನೆಗೆ ಭಾರತದಲ್ಲಿನ ರಾಜ್ಯ ಸರ್ಕಾರಗಳ ಬೆಂಬಲ.

ಡಿ) ಸಾಂಪ್ರದಾಯಿಕ ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಅಭ್ಯಾಸವನ್ನು, ವಿಶೇಷವಾಗಿ ವೃದ್ಧಾಪ್ಯದ ಆರೈಕೆ ಕ್ಷೇತ್ರದಲ್ಲಿ, ಪ್ರೋತ್ಸಾಹಿಸಲು ಜಪಾನ್ ದೇಶದಾದ್ಯಂತ ಯೋಗ ಮತ್ತು ಆಯುರ್ವೇದದಲ್ಲಿ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವುದು.

(5) ಭಾಷಾ ಸಾಮರ್ಥ್ಯ ಅಭಿವೃದ್ಧಿ:

ಕೌಶಲ್ಯ ವಲಯಗಳಿಗೆ ಸಂಬಂಧಿಸಿದ ಜಪಾನೀ ಸ್ ಭಾಷಾ ಶಿಕ್ಷಣವನ್ನು ಉತ್ತೇಜಿಸುವ ಕ್ರಮಗಳು :

ಎ) ಸರ್ಕಾರಿ ಉಪಕ್ರಮಗಳು ಮತ್ತು ಖಾಸಗಿ ವಲಯದ ಪ್ರಯತ್ನಗಳ ಮೂಲಕ ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಯೋಗಿಕ ಜಪಾನೀಸ್ ಭಾಷಾ ಬೋಧನೆಗೆ ಸುಧಾರಿತ ಪ್ರವೇಶ.

ಬಿ) ಜಪಾನೀಸ್ ಕಂಪನಿಗಳು ಒದಗಿಸುವ ಭಾಷಾ ತರಬೇತಿಯ ವೆಚ್ಚಕ್ಕೆ ಸಬ್ಸಿಡಿಗಳು.

ಸಿ) ಜಪಾನೀಸ್ ಭಾಷಾ ಶಿಕ್ಷಕರಿಗೆ ತರಬೇತಿ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ ಜಪಾನೀಸ್ ಭಾಷಾ ಶಿಕ್ಷಣದ ತಜ್ಞರನ್ನು ಕಳುಹಿಸುವ ಮೂಲಕ ಪರಿಣಾಮಕಾರಿ ಪಠ್ಯಕ್ರಮ ಮತ್ತು ಸಾಮಗ್ರಿಗಳನ್ನು ವಿನ್ಯಾಸಗೊಳಿಸಲು ಬೆಂಬಲ ನೀಡುವುದು.

ಡಿ) ಭಾರತದಲ್ಲಿ ನಿಹೊಂಗೊ (NIHONGO) ಕಾರ್ಯಕ್ರಮವನ್ನು (ದೀರ್ಘಾವಧಿ) ಪ್ರಾರಂಭಿಸಿ, ಇದರ ಮೂಲಕ ಸ್ಥಳೀಯ ಜಪಾನೀಸ್ ಭಾಷಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬೆಂಬಲಿಸಲು ಜಪಾನಿನ ಪ್ರಜೆಗಳನ್ನು ಮಾಧ್ಯಮಿಕ ಶಾಲೆಗಳಿಗೆ ಕಳುಹಿಸಲಾಗುತ್ತದೆ.

ಇ) ಉದ್ಯಮ ಮತ್ತು ಕೌಶಲ್ಯಪೂರ್ಣ ಕೆಲಸಗಾರರ ಅಗತ್ಯಗಳನ್ನು ಪೂರೈಸಲು ಜಪಾನ್ ಫೌಂಡೇಶನ್ ಭಾರತದಲ್ಲಿ 360 ಗಂಟೆಗಳ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಅಳವಡಿಸಿಕೊಳ್ಳುವುದು ಮತ್ತು ವಿಸ್ತರಿಸುವುದು.

ಎಫ್) ಜಪಾನೀಸ್ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (ಜೆ.ಎಲ್.ಪಿ.ಟಿ) ಮತ್ತು ಜಪಾನ್ ಫೌಂಡೇಶನ್ ಫಾರ್ ಬೇಸಿಕ್ ಜಪಾನೀಸ್ ಪರೀಕ್ಷೆ (ಜೆಎಫ್ಟಿ-ಬೇಸಿಕ್) ಬೇಡಿಕೆಗೆ ಅನುಗುಣವಾಗಿ ಭಾರತದಲ್ಲಿ ಜಪಾನೀಸ್ ಭಾಷಾ ಪರೀಕ್ಷಾ ಕೇಂದ್ರಗಳ ಸಂಖ್ಯೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವತ್ತ ಪ್ರಯತ್ನಗಳನ್ನು ಮಾಡುವುದು.

(6) ಜಾಗೃತಿ, ಬೆಂಬಲ ಮತ್ತು ಸಮನ್ವಯವನ್ನು ಹೆಚ್ಚಿಸುವುದು:

ಮುಂದಿನ ಐದು ವರ್ಷಗಳ ನಂತರ ಈ ವಿನಿಮಯಗಳ ಸ್ವಯಂ ಸುಸ್ಥಿರತೆಗೆ ಆಧಾರವನ್ನು ಸೃಷ್ಟಿಸಲು ಪಾಲುದಾರರು ಜಾಗೃತಿಯನ್ನು ಉತ್ತೇಜಿಸಲು ಸಕ್ರಿಯವಾಗಿ ಇವುಗಳ ಮೂಲಕ ಕೆಲಸ ಮಾಡುತ್ತಾರೆ:

ಎ) ಉದ್ದೇಶಿತ ಜಾಹೀರಾತು ಅಭಿಯಾನಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂ.ಎಸ್.ಡಿ.ಇ.), ಎನ್.ಎಸ್.ಡಿ.ಸಿ (NSDC) ಮತ್ತು ಇತರ ಪಾಲುದಾರರಿಂದ ಜಪಾನ್ ನಲ್ಲಿ ಉದ್ಯೋಗಾವಕಾಶಗಳು ಮತ್ತು ಜಪಾನೀಸ್ ಭಾಷಾ ಶಿಕ್ಷಣದ ಕುರಿತು ಕಾರ್ಯಕ್ರಮಗಳು ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗ ಮೇಳಗಳ ಏರ್ಪಾಡು. 

ಬಿ) ಜಪಾನಿನ ಪ್ರಾಂತ್ಯಗಳಲ್ಲಿ ಎನ್.ಎಸ್.ಡಿ.ಸಿ  ಆಯೋಜಿಸಿದ ಉದ್ಯೋಗದಾತ-ಉದ್ಯೋಗಿ ಹೊಂದಾಣಿಕೆ ಸಂಕಿರಣಗಳು.

ಸಿ) ಜಪಾನಿನ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ರಾಯಭಾರಿ ಕಚೇರಿ ಮತ್ತು ಹುದ್ದೆಗಳಲ್ಲಿ ದೇಶದೊಳಗೆ ಆಗಮಿಸುವವರಿಗಾಗಿ ಬೆಂಬಲ,  ಹುದ್ದೆಯ ಬಗ್ಗೆ  ಕಾರ್ಯಾಗಾರಗಳು ಮತ್ತು ಕುಂದುಕೊರತೆ ಪರಿಹಾರ.

ಡಿ) ವಲಯಗಳಾದ್ಯಂತ ಎರಡೂ ದೇಶಗಳ ನಡುವೆ ವಿವಿಧ ಚಟುವಟಿಕೆಗಳನ್ನು ಉತ್ತೇಜಿಸುವ ಕುರಿತು ಸಂಬಂಧಿತ ಮಾಹಿತಿಯನ್ನು ಕ್ರೋಢೀಕರಿಸಲು ಮತ್ತು ಪ್ರಸಾರ ಮಾಡಲು ಜಾಲತಾಣ ರಚನೆ.

ಇ) ರಾಜ್ಯ-ಪ್ರಾಂತ್ಯ ಪಾಲುದಾರಿಕೆಗಳ ಮೂಲಕ ಮಾನವ ಸಂಪನ್ಮೂಲ ಮತ್ತು ಪ್ರತಿಭೆಯ ವಿನಿಮಯ, ಜಪಾನ್ ದೇಶದ ಆಯಾ ಪ್ರಾಂತ್ಯಗಳಲ್ಲಿರುವ ಕಂಪನಿಗಳ ನೇಮಕಾತಿ ಅಭಿಯಾನಗಳೊಂದಿಗೆ ಭಾರತೀಯ ರಾಜ್ಯಗಳ ಕೌಶಲ್ಯ ಉಪಕ್ರಮಗಳನ್ನು ಹೊಂದಿಸುವುದು.

ಎಫ್) ಎರಡೂ ದೇಶಗಳ ನಡುವೆ ಸಿಬ್ಬಂದಿ ವಿನಿಮಯವನ್ನು ಉತ್ತೇಜಿಸುವ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮಾನವ ಸಂಪನ್ಮೂಲ ವಿನಿಮಯ ವಿಚಾರ ಸಂಕಿರಣವನ್ನು ಆಯೋಜಿಸುವುದು.

(7) ಅನುಷ್ಠಾನ ಮತ್ತು ಅನುಸರಣಾ ಕ್ರಮಗಳು:

ಭಾರತದ ವಿದೇಶಾಂಗ ಸಚಿವಾಲಯ ಮತ್ತು ಜಪಾನ್ ನ ವಿದೇಶಾಂಗ ಸಚಿವಾಲಯವು ಮೇಲಿನ ಕ್ರಿಯಾ ಯೋಜನೆಯ ಅನುಷ್ಠಾನದ ಒಟ್ಟಾರೆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತವೆ ಮತ್ತು ಇದಕ್ಕಾಗಿ ವಾರ್ಷಿಕ ಜಂಟಿ ಕಾರ್ಯದರ್ಶಿ/ಮಹಾನಿರ್ದೇಶಕರ ಮಟ್ಟದ ಸಮಾಲೋಚನೆಗಳನ್ನು ನಡೆಸುತ್ತವೆ. ಎರಡೂ ದೇಶಗಳ ನಡುವೆ ಮಾನವ ಸಂಪನ್ಮೂಲ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸಲು ಅಗತ್ಯವಿರುವ ಹೆಚ್ಚುವರಿ ಕ್ರಮಗಳನ್ನು ಸಹ ಅವರು ಅನ್ವೇಷಿಸುತ್ತಾರೆ. ಶಿಕ್ಷಣ, ಕೌಶಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆಯಲ್ಲಿ ಅಸ್ತಿತ್ವದಲ್ಲಿರುವ ಸಂವಾದ ಕಾರ್ಯವಿಧಾನಗಳನ್ನು ಸಹ  ಈ ಕಾರ್ಯಗಳಿಗೆ  ಪೂರಕವಾಗಿ ಬಳಸಲಾಗುವುದು.

 

*****
 


(Release ID: 2162111) Visitor Counter : 14
Read this release in: English , Urdu , Hindi , Gujarati