ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಕ್ರೀಡಾ ದಿನದಂದು ಬಿಹಾರದ ರಾಜ್ ಗಿರ್ ನಲ್ಲಿ ಪುರುಷರ ಹಾಕಿ ಏಷ್ಯಾ ಕಪ್ 2025 ಆರಂಭ – ಪ್ರಧಾನಮಂತ್ರಿ ಅವರಿಂದ ಶುಭ ಹಾರೈಕೆ
Posted On:
28 AUG 2025 8:25PM by PIB Bengaluru
ಬಿಹಾರದ ಐತಿಹಾಸಿಕ ನಗರಿ ರಾಜ್ ಗಿರ್ ನಲ್ಲಿ ನಾಳೆ, ಆಗಸ್ಟ್ 29ರಂದು ಪುರುಷರ ಹಾಕಿ ಏಷ್ಯಾಕಪ್ 2025 ಪ್ರಾರಂಭವಾಗಲಿದ್ದು, ಏಷ್ಯಾದಾದ್ಯಂತ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ತಂಡಗಳು, ಆಟಗಾರರು, ಅಧಿಕಾರಿಗಳು ಮತ್ತು ಬೆಂಬಲಿಗರಿಗೆ ಕ್ರೀಡಾಕೂಟ ಆರಂಭವಾಗುವ ರಾಷ್ಟ್ರೀಯ ಕ್ರೀಡಾ ದಿನದ ಮುನ್ನಾ ದಿನವಾದ ಇಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕವಾಗಿ ಶುಭ ಕೋರಿದ್ದಾರೆ. ಬಿಹಾರವು ಇತ್ತೀಚಿನ ದಿನಗಳಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2025, ಏಷ್ಯಾ ರಗ್ಬಿ U20 ಸೆವೆನ್ಸ್ ಚಾಂಪಿಯನ್ಶಿಪ್ 2025, ISTAF ಸೆಪಕ್ ಟಕ್ರಾ ವಿಶ್ವಕಪ್ 2024 ಮತ್ತು ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ನಂತಹ ಪ್ರಮುಖ ಪಂದ್ಯಾವಳಿಗಳನ್ನು ಆಯೋಜಿಸುತ್ತಾ ರೋಮಾಂಚಕ ಕ್ರೀಡಾ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಶ್ರೀ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
X ನ ಥ್ರೆಡ್ ಪೋಸ್ಟ್ ನಲ್ಲಿ ಇಂದು ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:
"ಬಿಹಾರದ ಐತಿಹಾಸಿಕ ನಗರಿ ರಾಜ್ ಗಿರ್ ನಲ್ಲಿ ನಾಳೆ, ಆಗಸ್ಟ್ 29ರಂದು (ಇದು ರಾಷ್ಟ್ರೀಯ ಕ್ರೀಡಾ ದಿನ ಮತ್ತು ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯೂ ಆಗಿದೆ) ಪುರುಷರ ಹಾಕಿ ಏಷ್ಯಾ ಕಪ್ 2025 ಪ್ರಾರಂಭವಾಗಲಿದೆ. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಏಷ್ಯಾದಾದ್ಯಂತದ ಎಲ್ಲಾ ತಂಡಗಳು, ಆಟಗಾರರು, ಸಿಬ್ಬಂದಿ ಮತ್ತು ಬೆಂಬಲಿಗರಿಗೆ ನನ್ನ ಶುಭ ಹಾರೈಕೆಗಳು."
"ಭಾರತ ಮತ್ತು ಏಷ್ಯಾದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ಹಾಕಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿದೆ. ಈ ಕ್ರೀಡಾಕೂಟವು ರೋಮಾಂಚಕ ಪಂದ್ಯಗಳು, ಅನನ್ಯ ಪ್ರತಿಭಾ ಪ್ರದರ್ಶನಗಳೊಂದಿಗೆ ಮುಂದಿನ ಪೀಳಿಗೆಯ ಕ್ರೀಡಾ ಪ್ರೇಮಿಗಳನ್ನು ಹುರಿದುಂಬಿಸುವ ಸ್ಮರಣೀಯ ಕ್ಷಣಗಳಿಂದ ಕೂಡಿರಲಿದೆ ಎಂದು ನನಗೆ ವಿಶ್ವಾಸವಿದೆ."
"ಬಿಹಾರವು ಪುರುಷರ ಹಾಕಿ ಏಷ್ಯಾ ಕಪ್ 2025 ಅನ್ನು ಆಯೋಜಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ, ಬಿಹಾರವು ಖೇಲೋ ಇಂಡಿಯಾ ಯೂತ್ ಗೇಮ್ಸ್ 2025, ಏಷ್ಯಾ ರಗ್ಬಿ U20 ಸೆವೆನ್ಸ್ ಚಾಂಪಿಯನ್ ಶಿಪ್ 2025, ISTAF ಸೆಪಕ್ಟಕ್ರಾ ವಿಶ್ವಕಪ್ 2024 ಮತ್ತು ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ನಂತಹ ಪ್ರಮುಖ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ರೋಮಾಂಚಕ ಕ್ರೀಡಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಸ್ಥಿರವಾದ ಆವೇಗವು ಬಿಹಾರದ ಬೆಳೆಯುತ್ತಿರುವ ಮೂಲಸೌಕರ್ಯ,ತಳಮಟ್ಟದ ಉತ್ಸಾಹ ಮತ್ತು ವೈವಿಧ್ಯಮಯ ಕ್ರೀಡಾ ವಿಭಾಗಗಳಲ್ಲಿ ಪ್ರತಿಭಾ ಪೋಷಣೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ."
*****
(Release ID: 2161706)
Visitor Counter : 13