ರಾಜ್ಯಸಭಾ ಕಾರ್ಯಾಲಯ
ಪತ್ರಿಕಾ ಪ್ರಕಟಣೆ
प्रविष्टि तिथि:
27 AUG 2025 3:34PM by PIB Bengaluru
ಉಪರಾಷ್ಟ್ರಪತಿ ಚುನಾವಣೆ 2025ಕ್ಕೆ ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನಾಂಕವಾದ 2025ರ ಆಗಸ್ಟ್ 25ರ ಬಳಿಕ ಈ ಕೆಳಗಿನ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
|
ಕ್ರಮ ಸಂಖ್ಯೆ
|
ಹೆಸರು
|
ವಿಳಾಸ
|
|
1
|
ಶ್ರೀ ಬುಚಿರೆಡ್ಡಿ ಸುದರ್ಶನ ರೆಡ್ಡಿ
|
ಸಂ. 8-2-293/82/ಎನ್ ಎಲ್, 12-ಎ, ಸಂಸತ್ ಸದಸ್ಯರ ಕಾಲೋನಿ (ಎಂ ಎಲ್ ಎ ಮತ್ತು ಎಂಪಿ ಕಾಲೋನಿ), ಜ್ಯುಬಿಲಿ ಹಿಲ್ಸ್ ರಸ್ತೆ, ಸಂ. 10ಸಿ ಟಿ ಎಸ್ ಎಸ್ ಪಿ ಗ್ರೇಟರ್ ಹೈದರಾಬಾದ್, ತೆಲಂಗಾಣ - 500033.
|
|
2
|
ಶ್ರೀ ಸಿ.ಪಿ. ರಾಧಾಕೃಷ್ಣನ್
|
ಜಲ ಭೂಷಣ್, ರಾಜಭವನ,
ವಲ್ಕೇಶ್ವರ ರಸ್ತೆ, ಮಲಬಾರ್ ಗುಡ್ಡ, ಮುಂಬೈ-400035
|
ಉಪರಾಷ್ಟ್ರಪತಿ ಚುನಾವಣೆ 2025ರ ಮತದಾನವು ಈ ವರ್ಷದ ಸೆಪ್ಟೆಂಬರ್ 9ರ ಮಂಗಳವಾರ, ನವದೆಹಲಿಯ ಸಂಸತ್ ಭವನ, ವಸುಧಾದಲ್ಲಿರುವ ಕೊಠಡಿ ಸಂಖ್ಯೆ ಎಫ್-101ರಲ್ಲಿ ನಡೆಯಲಿದೆ. ಮತದಾನ ಅಂದು ಬೆಳಗ್ಗೆ 10.00 ಗಂಟೆಗೆ ಪ್ರಾರಂಭವಾಗಿ ಸಂಜೆ 5.00 ಗಂಟೆಗೆ ಮುಕ್ತಾಯಗೊಳ್ಳುತ್ತದೆ.
ಭಾರತದ ಉಪರಾಷ್ಟ್ರಪತಿ ಕಚೇರಿಗೆ ನಡೆಯುವ ಚುನಾವಣೆಗಾಗಿ ಎಲೆಕ್ಟೊರಲ್ ಕಾಲೇಜು (ಚುನಾಯಿತ ಸದಸ್ಯರಿಂದ ನಡೆಯುವ ಮತದಾನ ಪ್ರಕ್ರಿಯೆ) ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡಿದೆ. ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಸಹ ಚುನಾವಣಾ ಕಾಲೇಜಿನಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿರುತ್ತಾರೆ, ಹೀಗಾಗಿ ಮತದಾನದ ಹಕ್ಕನ್ನು ಹೊಂದಿದ್ದಾರೆ.
2025ರ ಉಪರಾಷ್ಟ್ರಪತಿ ಚುನಾವಣೆಗಾಗಿ ಸಂಸತ್ ಭವನದಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಚುನಾವಣಾ ಅಧಿಕಾರಿಯಾದ ರಿಟರ್ನಿಂಗ್ ಆಫೀಸರ್ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ. ಮೋದಿ ಅವರು ಕೈಗೊಂಡಿದ್ದಾರೆ.
ಮತದಾನದ ದಿನ ಸಂಜೆ 6.00 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಎಣಿಕೆ ಕಾರ್ಯ ಮುಗಿದ ತಕ್ಷಣವೇ ಫಲಿತಾಂಶ ಪ್ರಕಟವಾಗಲಿದೆ.
*****
(रिलीज़ आईडी: 2161357)
आगंतुक पटल : 33