ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಫ್.ಐ.ಡಿ.ಇ ವಿಶ್ವಕಪ್ ಭಾರತಕ್ಕೆ ಮರಳುವುದನ್ನು ಸ್ವಾಗತಿಸಿದ ಪ್ರಧಾನಮಂತ್ರಿ

Posted On: 26 AUG 2025 11:30PM by PIB Bengaluru

ಭಾರತವು ಪ್ರತಿಷ್ಠಿತ ಎಫ್.ಐ.ಡಿ.ಇ ವಿಶ್ವಕಪ್ 2025ನ್ನು ಆಯೋಜಿಸಲು ಸಜ್ಜಾಗುತ್ತಿರುವಾಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಪಾರ ಹೆಮ್ಮೆ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ, ಈ ಪಂದ್ಯಾವಳಿಯು ಎರಡು ದಶಕಗಳ ನಂತರ ಭಾರತದ ನೆಲಕ್ಕೆ ಮರಳಿದೆ.

ಈ ಕುರಿತ ಅಂತಾರಾಷ್ಟ್ರೀಯ ಚೆಸ್ ಒಕ್ಕೂಟದ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರಧಾನಮಂತ್ರಿ ಅವರ ಪ್ರತಿಕ್ರಿಯೆ ಹೀಗಿದೆ:

"ಪ್ರತಿಷ್ಠಿತ ಎಫ್.ಐ.ಡಿ.ಇ ವಿಶ್ವಕಪ್ 2025 ಅನ್ನು ಆಯೋಜಿಸುತ್ತಿರುವುದಕ್ಕೆ ಮತ್ತು ಅದೂ ಎರಡು ದಶಕಗಳ ನಂತರ ಆಯೋಜಿಸುತ್ತಿರುವುದಕ್ಕಾಗಿ ಭಾರತಕ್ಕೆ ಸಂತೋಷವಾಗಿದೆ. ನಮ್ಮ ಯುವಕರಲ್ಲಿ ಚೆಸ್ ಜನಪ್ರಿಯತೆಗಳಿಸುತ್ತಿದೆ. ಈ ಪಂದ್ಯಾವಳಿಯು ರೋಮಾಂಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದೆ ಮತ್ತು ವಿಶ್ವದಾದ್ಯಂತದ ಅಗ್ರ ಆಟಗಾರರ ಪ್ರತಿಭೆಯನ್ನು ಪ್ರದರ್ಶಿಸುತ್ತದೆ ಎಂದು ನನಗೆ ಖಾತ್ರಿಯಿದೆ "ಎಂದು ಹೇಳಿದರು.

 

 

*****

 


(Release ID: 2161111)