ಪ್ರಧಾನ ಮಂತ್ರಿಯವರ ಕಛೇರಿ
ಆನ್ ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025ರ ಅಂಗೀಕಾರ – ಪ್ರಧಾನಮಂತ್ರಿ ಸ್ವಾಗತ; ಇ-ಕ್ರೀಡೆಗಳಿಗೆ ಉತ್ತೇಜನ ಮತ್ತು ಸಮಾಜದ ರಕ್ಷಣೆ ಎಂದು ಬಣ್ಣನೆ
Posted On:
21 AUG 2025 10:47PM by PIB Bengaluru
ಸಂಸತ್ತಿನ ಉಭಯ ಸದನಗಳು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಅಂಗೀಕರಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ.
ಗೇಮಿಂಗ್, ನಾವಿನ್ಯತೆ ಮತ್ತು ಸೃಜನಶೀಲತೆಯ ಕೇಂದ್ರವಾಗುವ ಭಾರತದ ಬದ್ಧತೆಯನ್ನು ಈ ಮಸೂದೆ ಎತ್ತಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಈ ಮಸೂದೆಯು ಇ-ಕ್ರೀಡೆ ಮತ್ತು ಆನ್‌ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಅದೇ ಸಮಯದಲ್ಲಿ ಆನ್‌ಲೈನ್ ಹಣದ ಆಟಗಳ ದುಷ್ಪರಿಣಾಮಗಳಿಂದ ಸಮಾಜವನ್ನು ರಕ್ಷಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಮಸೂದೆಯ ಅಂಗೀಕಾರದ ಬಗೆಗಿನ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
"ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿರುವ ಈ ಮಸೂದೆಯು, ಭಾರತವನ್ನು ಗೇಮಿಂಗ್, ನಾವಿನ್ಯತೆ ಮತ್ತು ಸೃಜನಶೀಲತೆಯ ತಾಣವನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದು ಇ-ಕ್ರೀಡೆ ಮತ್ತು ಆನ್‌ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುವ ಜೊತೆಜೊತೆಗೆ ನಮ್ಮ ಸಮಾಜವನ್ನು ಆನ್‌ಲೈನ್ ಹಣದ ಆಟಗಳ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತದೆ."
****
(Release ID: 2159628)
Visitor Counter : 5
Read this release in:
Malayalam
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu