ಪ್ರಧಾನ ಮಂತ್ರಿಯವರ ಕಛೇರಿ
ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
ಭಾರತದ ಯಶಸ್ಸಿನ ಹಾದಿ ಆತ್ಮನಿರ್ಭರ ಭಾರತದ ಜೊತೆ ಬಾಹ್ಯಾಕಾಶ ಗುರಿಗಳನ್ನು ಅನುಸರಿಸುವುದರಲ್ಲಿದೆ: ಪ್ರಧಾನಮಂತ್ರಿ
ಭವಿಷ್ಯದ ಕಾರ್ಯಾಚರಣೆಗಳನ್ನು ಮುನ್ನಡೆಸಲು ಭಾರತವು 40–50 ಸಿದ್ಧ ಗಗನಯಾತ್ರಿಗಳ ತಂಡವನ್ನು ರೂಪಿಸುವ ಅಗತ್ಯವಿದೆ: ಪ್ರಧಾನಮಂತ್ರಿ
ಭಾರತವು ಈಗ ಎರಡು ಕಾರ್ಯತಂತ್ರದ ಮಿಷನ್ ಗಳನ್ನು ಹೊಂದಿದೆ - ಅವೆಂದರೆ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾನ: ಪ್ರಧಾನಮಂತ್ರಿ
ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಲ್ಲಿ ಗಗನಯಾತ್ರಿ ಶುಕ್ಲಾ ಪಯಣವು ಕೇವಲ ಮೊದಲ ಹೆಜ್ಜೆಯಾಗಿದೆ: ಪ್ರಧಾನಮಂತ್ರಿ
Posted On:
19 AUG 2025 11:32AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಿನ್ನೆ ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ಸಂವಾದ ನಡೆಸಿದರು. ಬಾಹ್ಯಾಕಾಶ ಪಯಣದ ಪರಿವರ್ತನಾತ್ಮಕ ಅನುಭವಗಳ ಬಗ್ಗೆ ಬೆಳಕು ಚೆಲ್ಲಿದ, ಪ್ರಧಾನಮಂತ್ರಿ ಅವರು, ಇಂತಹ ಮಹತ್ವದ ಪ್ರಯಾಣವನ್ನು ಕೈಗೊಂಡ ನಂತರ, ಒಬ್ಬರ ಬದಲಾವಣೆಯನ್ನು ಅನುಭವಿಸಬೇಕು ಎಂದು ಹೇಳಿದರು ಮತ್ತು ಗಗನಯಾತ್ರಿಗಳು ಈ ಪರಿವರ್ತನೆಯನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಅನುಭವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಪ್ರಧಾನಮಂತ್ರಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಶುಭಾಂಶು ಶುಕ್ಲಾ, ಬಾಹ್ಯಾಕಾಶದಲ್ಲಿನ ಪರಿಸರವು ಅತ್ಯಂತ ವಿಭಿನ್ನವಾಗಿದೆ, ಗುರುತ್ವಾಕರ್ಷಣೆಯ ಅನುಪಸ್ಥಿತಿಯು ಪ್ರಮುಖ ಅಂಶವಾಗಿದೆ ಎಂದು ಹೇಳಿದರು.
ಪ್ರಯಾಣದ ಸಮಯದಲ್ಲಿ ಆಸನ ವ್ಯವಸ್ಥೆ ಹಾಗೆಯೇ ಇರಲಿದೆಯೇ ಎಂದು ಪ್ರಧಾನಮಂತ್ರಿ ಕೇಳಿದರು. ಶುಕ್ಲಾ ಅದನ್ನು ದೃಢಪಡಿಸುತ್ತಾ, "ಹೌದು ಸರ್, ಅದು ಹಾಗೆಯೇ ಉಳಿದಿರುತ್ತದೆ" ಎಂದು ಹೇಳಿದರು. ಗಗನಯಾತ್ರಿಗಳು 23-24 ಗಂಟೆಗಳ ಕಾಲ ಒಂದೇ ವ್ಯವಸ್ಥೆ (ಸೆಟಪ್‌ನಲ್ಲಿ)ಯಲ್ಲಿ ಕಳೆಯಬೇಕಾಗುತ್ತದೆಯೇ ಎಂದು ಶ್ರೀ ನರೇಂದ್ರ ಮೋದಿ ಕೇಳಿದರು. ಶುಕ್ಲಾ ಇದನ್ನು ದೃಢಪಡಿಸಿದರು ಮತ್ತು ಒಮ್ಮೆ ಬಾಹ್ಯಾಕಾಶದಲ್ಲಿ, ಗಗನಯಾತ್ರಿಗಳು ತಮ್ಮ ಆಸನಗಳು ಮತ್ತು ಸರಕುಗಳನ್ನು ಬಿಚ್ಚಿ ಕ್ಯಾಪ್ಸುಲ್ ಒಳಗೆ ಮುಕ್ತವಾಗಿ ಓಡಾಡಬಹುದು ಎಂದು ಹೇಳಿದರು.
ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗಿನ ಸಂವಾದವನ್ನು ಮುಂದುವರೆಸಿದ ಪ್ರಧಾನಮಂತ್ರಿ, ಬಾಹ್ಯಾಕಾಶ ಪ್ರಯಾಣದ ದೈಹಿಕ ಮತ್ತು ಮಾನಸಿಕ ಪ್ರಭಾವದ ಬಗ್ಗೆ ಕೇಳುತ್ತಾ ಕ್ಯಾಪ್ಸುಲ್ ಸಾಕಷ್ಟು ಜಾಗವನ್ನು ನೀಡುತ್ತದೆಯೇ ಎಂದು ವಿಚಾರಿಸಿದರು. ಶುಭಾಂಶು ಶುಕ್ಲಾ ಪ್ರತಿಕ್ರಿಯಿಸಿ, “ಅದು ತುಂಬಾ ವಿಶಾಲವಾಗಿಲ್ಲದಿದ್ದರೂ, ಸ್ವಲ್ಪ ಸ್ಥಳಾವಕಾಶ ಲಭ್ಯವಿದೆ’’ ಎಂದರು. ಕ್ಯಾಪ್ಸುಲ್, ಫೈಟರ್ ಜೆಟ್ ಕಾಕ್‌ಪಿಟ್‌ಗಿಂತ ಹೆಚ್ಚು ಆರಾಮದಾಯಕವಾಗಿದೆಯೇ ಎಂದು ಪ್ರಧಾನಮಂತ್ರಿ ಪ್ರಶ್ನಿಸಿದರು. ಶುಕ್ಲಾ, "ಹೌದು ಅದು ಅದಕ್ಕಿಂತಲೂ ಉತ್ತಮವಾಗಿದೆ ಸರ್" ಎಂದು ದೃಢಪಡಿಸಿದರು.
ಅಲ್ಲದೆ, ಬಾಹ್ಯಾಕಾಶ ತಲುಪಿದ ನಂತರ ಆಗುವ ಶಾರೀರಿಕ ಬದಲಾವಣೆಗಳ ಬಗ್ಗೆ ಶ್ರೀ ನರೇಂದ್ರ ಮೋದಿ ಅವರಿಗೆ ವಿವರಿಸಲಾಯಿತು. ಹೃದಯದ ಬಡಿತ ಗಮನಾರ್ಹವಾಗಿ ನಿಧಾನವಾಗುತ್ತದೆ ಮತ್ತು ದೇಹವು ಹಲವು ಬಗೆಯ ಹೊಂದಾಣಿಕೆಗಳಿಗೆ ಒಳಗಾಗುತ್ತದೆ ಎಂದು ಶುಕ್ಲಾ ಒತ್ತಿ ಹೇಳಿದರು. ಆದರೂ ನಾಲ್ಕರಿಂದ ಐದು ದಿನಗಳಲ್ಲಿ, ದೇಹವು ಬಾಹ್ಯಾಕಾಶದ ಪರಿಸರಕ್ಕೆ ಒಗ್ಗಿಕೊಳ್ಳುತ್ತದೆ ಮತ್ತು ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದ ಅವರು, ಭೂಮಿಗೆ ಹಿಂದಿರುಗಿದ ನಂತರ, ದೇಹವು ಮತ್ತೆ ಅದೇ ರೀತಿಯ ಬದಲಾವಣೆಗಳನ್ನು ಅನುಭವಿಸುತ್ತದೆ ಎಂದು ಶುಕ್ಲಾ ವಿವರಿಸಿದರು. ಒಬ್ಬರ ದೈಹಿಕ ಕ್ಷಮತೆ (ಫಿಟ್ನೆಸ್ ಮಟ್ಟವನ್ನು) ಲೆಕ್ಕಿಸದೆ ಆರಂಭದಲ್ಲಿ ನಡೆಯುವುದು ಕಷ್ಟಕರವಾಗುತ್ತದೆ ಎಂದರು. ಅವರು ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಾ, ನನಗೆ ಚೆನ್ನಾಗಿದ್ದರೂ, ತನ್ನ ಮೊದಲ ಹೆಜ್ಜೆಗಳನ್ನು ಇಡುವಾಗ ಎಡವಿ ಬಿದ್ದಿದ್ದೆ ಮತ್ತು ಇತರೆಯವರ ಸಹಾಯ ಪಡೆಯಬೇಕಾಯಿತು ಎಂದು ಹೇಳಿದರು. ಒಬ್ಬರಿಗೆ ಹೇಗೆ ನಡೆಯಬೇಕೆಂದು ತಿಳಿದಿದ್ದರೂ, ಮೆದುಳು ಹೊಸ ಪರಿಸರಕ್ಕೆ ತನ್ನನು ತಾನು ಮರುಹೊಂದಿಸಲು ಮತ್ತು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಬಾಹ್ಯಾಕಾಶ ಪ್ರಯಾಣಕ್ಕೆ ದೈಹಿಕ ತರಬೇತಿ ಮಾತ್ರವಲ್ಲದೆ ಮಾನಸಿಕ ಸ್ಥಿತಿಸ್ಥಾಪಕತ್ವವೂ ಅಗತ್ಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅದನ್ನು ಒಪ್ಪಿಕೊಂಡ ಶುಕ್ಲಾ, ದೇಹ ಮತ್ತು ಸ್ನಾಯುಗಳು ಶಕ್ತಿಯನ್ನು ಹೊಂದಿದ್ದರೂ, ಹೊಸ ಪರಿಸರವನ್ನು ಗ್ರಹಿಸಲು ಮತ್ತು ಸಾಮಾನ್ಯವಾಗಿ ನಡೆಯಲು ಮತ್ತು ಕಾರ್ಯನಿರ್ವಹಿಸಲು ಅಗತ್ಯವಾದ ಪ್ರಯತ್ನವನ್ನು ಮರು ಮಾಪನಾಂಕ ನಿರ್ಣಯಿಸಲು ಮೆದುಳಿಗೆ ರಿವೈರಿಂಗ್ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡರು.
ಗಗನಯಾತ್ರೆ ಅವಧಿಯಲ್ಲಿನ ಅನ್ವೇಷಣೆಗಳ ಕುರಿತು ಚರ್ಚಿಸುತ್ತಾ ಶ್ರೀ ನರೇಂದ್ರ ಮೋದಿ ಅವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಳೆದ ಅತ್ಯಂತ ದೀರ್ಘಾವಧಿಯ ಬಗ್ಗೆ ವಿಚಾರಿಸಿದರು. ಶುಭಾಂಶು ಶುಕ್ಲಾ ಅವರು ಸದ್ಯ ವ್ಯಕ್ತಿಗಳು ಏಕಕಾಲದಲ್ಲಿ ಎಂಟು ತಿಂಗಳವರೆಗೆ ಇರುತ್ತಾರೆ, ಇದು ಪ್ರಸ್ತುತ ಕಾರ್ಯಾಚರಣೆಯೊಂದಿಗೆ ಆರಂಭವಾದ ಮೈಲಿಗಲ್ಲು ಎಂದು ಮಾಹಿತಿ ನೀಡಿದರು. ಶುಕ್ಲಾ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಭೇಟಿಯಾದ ಗಗನಯಾತ್ರಿಗಳ ಬಗ್ಗೆ ಪ್ರಧಾನಮಂತ್ರಿ ವಿಚಾರಿದರು. ಅವರಲ್ಲಿ ಕೆಲವರು ಡಿಸೆಂಬರ್‌ನಲ್ಲಿ ಹಿಂತಿರುಗಲಿದ್ದಾರೆ ಎಂದು ಶುಕ್ಲಾ ದೃಢಪಡಿಸಿದರು.
ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಸರು(ಮೂಂಗ್) ಮತ್ತು ಮೇಥಿ ಬೆಳೆಯುವ ಕುರಿತು ಶುಕ್ಲಾ ಅವರ ಪ್ರಯೋಗಗಳ ಮಹತ್ವದ ಬಗ್ಗೆ ಶ್ರೀ ನರೇಂದ್ರ ಮೋದಿ ಒಳನೋಟಗಳನ್ನು ವಿವರಿಸುವಂತೆ ಕೋರಿದರು. ಕೆಲವು ಬೆಳವಣಿಗೆಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲದಿಲ್ಲ ಎಂದು ಶುಕ್ಲಾ ಆಶ್ಚರ್ಯ ವ್ಯಕ್ತಪಡಿಸಿದರು. ಸೀಮಿತ ಸ್ಥಳ ಮತ್ತು ದುಬಾರಿ ಸರಕುಗಳಿಂದಾಗಿ ಬಾಹ್ಯಾಕಾಶ ಕೇಂದ್ರಗಳಲ್ಲಿ ಆಹಾರವು ಒಂದು ಪ್ರಮುಖ ಸವಾಲಾಗಿ ಉಳಿದಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಕನಿಷ್ಠ ಜಾಗದಲ್ಲಿ ಗರಿಷ್ಠ ಕ್ಯಾಲೊರಿಗಳು ಮತ್ತು ಪೌಷ್ಟಿಕಾಂಶವನ್ನು ಪ್ಯಾಕ್ ಮಾಡುವತ್ತ ಗಮನ ಹರಿಸಲಾಗಿದೆ. ವಿವಿಧ ಪ್ರಯೋಗಗಳು ನಡೆಯುತ್ತಿವೆ ಮತ್ತು ಕೆಲವು ಆಹಾರಗಳನ್ನು ಬಾಹ್ಯಾಕಾಶದಲ್ಲಿ ಬೆಳೆಯುವುದು ಅತ್ಯಂತ ಸುಲಭವಾಗಿದೆ ಎಂದು ಅವರು ವಿವರಿಸಿದರು. ಸಣ್ಣ ತಟ್ಟೆ ಮತ್ತು ಸ್ವಲ್ಪ ನೀರಿನಂತಹ ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು, ಎಂಟು ದಿನಗಳಲ್ಲಿ ಮೊಳಕೆ ಹೊರಹೊಮ್ಮಲು ಆರಂಭಿಸಿತು, ಇದನ್ನು ಶುಕ್ಲಾ ಬಾಹ್ಯಾಕಾಶ ನೆಲೆಯಲ್ಲಿ ಖುದ್ದಾಗಿ ಈ ಪ್ರಯೋಗವನ್ನು ವೀಕ್ಷಿಸಿದರು. ಭಾರತದ ವಿಶಿಷ್ಟ ಕೃಷಿ ನಾವೀನ್ಯತೆಗಳು ಈಗ ಸೂಕ್ಷ್ಮ ಗುರುತ್ವಾಕರ್ಷಣೆಯ ಸಂಶೋಧನಾ ವೇದಿಕೆಗಳನ್ನು ತಲುಪುತ್ತಿವೆ ಎಂದು ಶುಕ್ಲಾ ಪ್ರಮುಖವಾಗಿ ಪ್ರಸ್ತಾಪಿಸಿದರು. ಗಗನಯಾತ್ರಿಗಳಿಗೆ ಮಾತ್ರವಲ್ಲದೆ ಭೂಮಿಯ ಮೇಲಿನ ದುರ್ಬಲ ಜನಸಂಖ್ಯೆಗೂ ಆಹಾರ ಭದ್ರತಾ ಸವಾಲುಗಳನ್ನು ಎದುರಿಸಲು ಈ ಪ್ರಯೋಗಗಳ ಸಾಮರ್ಥ್ಯವನ್ನು ಅವರು ಉಲ್ಲೇಖಿಸಿದರು.
ಭಾರತೀಯ ಗಗನಯಾತ್ರಿಯನ್ನು ಭೇಟಿಯಾದಾಗ ಅಂತಾರಾಷ್ಟ್ರೀಯ ಗಗನಯಾತ್ರಿಗಳು ಹೇಗೆ ಪ್ರತಿಕ್ರಿಯಿಸಿದರು ಎಂದು ಪ್ರಧಾನಮಂತ್ರಿ ಕೇಳಿದರು. ಆ ಕುರಿತು ವಿವರ ಹಂಚಿಕೊಂಡ ಶುಕ್ಲಾ, ಕಳೆದ ವರ್ಷದಲ್ಲಿ ಅವರು ಎಲ್ಲಿಗೆ ಹೋದರೂ ಜನರು ಅವರನ್ನು ಭೇಟಿ ಮಾಡಲು ನಿಜವಾಗಿಯೂ ಸಂತೋಷ ಮತ್ತು ಉತ್ಸುಕರಾಗಿದ್ದರು ಎಂದರು. ಅವರು ಆಗಾಗ್ಗೆ ಭಾರತದ ಬಾಹ್ಯಾಕಾಶ ಚಟುವಟಿಕೆಗಳ ಬಗ್ಗೆ ಕೇಳಿದರು ಮತ್ತು ದೇಶದ ಪ್ರಗತಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆಂದರು. ಗಗನಯಾನ ಮಿಷನ್ ಬಗ್ಗೆ ಅನೇಕರು ವಿಶೇಷವಾಗಿ ಉತ್ಸಾಹಭರಿತರಾಗಿದ್ದರು, ಅದರ ನಿರ್ದಿಷ್ಟ ಸಮಯದ ಬಗ್ಗೆ ವಿಚಾರಿಸಿದರು. ಶುಕ್ಲಾ ಅವರ ಸಿಬ್ಬಂದಿ ಸಹ ಸಹಿ ಮಾಡಿದ ಟಿಪ್ಪಣಿಗಳನ್ನು ಸಹ ಹಂಚಿಕೊಂಡರು, ಭಾರತದ ಬಾಹ್ಯಾಕಾಶ ಉಡಾವಣೆಗೆ ಆಹ್ವಾನಿಸಲು ಮತ್ತು ನೌಕೆಯಲ್ಲಿ ಪ್ರಯಾಣಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ತಮ್ಮನ್ನು ಇತರರು ಮಹಾನ್ ಪ್ರತಿಭೆ (ಜೀನಿಯಸ್) ಎಂದು ಇತರರು ಏಕೆ ಕರೆಯುತ್ತಾರೆ ಎಂದು ಶುಕ್ಲಾ ಅವರನ್ನು ಕೇಳಿದರು. ಜನರು ತಮ್ಮ ಹೇಳಿಕೆಗಳಲ್ಲಿ ದಯೆ ತೋರುತ್ತಾರೆ ಎಂದು ಶುಕ್ಲಾ ವಿನಮ್ರವಾಗಿ ಪ್ರತಿಕ್ರಿಯಿಸಿದರು. ತಮ್ಮ ಕಠಿಣ ತರಬೇತಿಗೆ ಮೊದಲು ಭಾರತೀಯ ವಾಯುಪಡೆಯಲ್ಲಿ ಮತ್ತು ನಂತರ ಬಾಹ್ಯಾಕಾಶ ಪೈಲಟ್ ಆಗಿ ತಮ್ಮ ಮೆಚ್ಚುಗೆಯನ್ನು ಕಾರಣವೆಂದು ಹೇಳಿದರು. ಆರಂಭದಲ್ಲಿ ಶೈಕ್ಷಣಿಕ ಅಧ್ಯಯನವು ಕಡಿಮೆ ಎಂದು ನಂಬಿದ್ದ ಶುಕ್ಲಾ, ಈ ಹಾದಿಯಲ್ಲಿ ವ್ಯಾಪಕವಾದ ಕಲಿಕೆಯ ಅಗತ್ಯವಿದೆ ಎಂದು ಕಂಡುಕೊಂಡರು. ಬಾಹ್ಯಾಕಾಶ ಪೈಲಟ್ ಆಗುವುದು ಎಂಜಿನಿಯರಿಂಗ್ ವಿಭಾಗದಲ್ಲಿ ಕರಗತ ಮಾಡಿಕೊಳ್ಳುವುದಕ್ಕೆ ಹೋಲುತ್ತದೆ ಎಂದು ಅವರು ವಿವರಿಸಿದರು. ಅವರು ಭಾರತೀಯ ವಿಜ್ಞಾನಿಗಳಿಂದ ಹಲವು ವರ್ಷಗಳ ತರಬೇತಿಯನ್ನು ಪಡೆದರು ಮತ್ತು ಮಿಷನ್‌ಗೆ ಚೆನ್ನಾಗಿ ಸಿದ್ಧರಾಗಿದ್ದಾರೆಂದು ಭಾವಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಈ ಹಿಂದೆ ನೀಡಿದ್ದ "ಹೋಮ್ ವರ್ಕ್’’ ಪ್ರಗತಿಯನ್ನು ಪರಿಶೀಲಿಸಿದರು. ಪ್ರಗತಿ ಅತ್ಯುತ್ತಮವಾಗಿದೆ ಎಂದು ಶುಕ್ಲಾ ತಿಳಿಸಿದ್ದಾರೆ. ಆ ಕೆಲಸವನ್ನು ನಿಜವಾಗಿಯೂ ನೀಡಲಾಗಿದೆ ಮತ್ತು ಅದು ಬಹಳ ಮುಖ್ಯ ಎಂದು ಅವರು ದೃಢಪಡಿಸಿದರು, ತಮ್ಮ ಪಯಣವು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು ಎಂದು ಹೇಳಿದರು. ಮಿಷನ್ ಯಶಸ್ವಿಯಾಗಿದೆ ಮತ್ತು ತಂಡವು ಸುರಕ್ಷಿತವಾಗಿ ಮರಳಿದೆ, ಆದರೆ ಅದು ಅಂತ್ಯವಲ್ಲ - ಇದು ಕೇವಲ ಆರಂಭ ಎಂದು ಅವರು ಒತ್ತಿ ಹೇಳಿದರು. ಇದು ಮೊದಲ ಹೆಜ್ಜೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಅವರ ಭಾವನೆಗಳನ್ನು ಪುಷ್ಠೀಕರಿಸುತ್ತಾ ಶುಕ್ಲಾ, "ಹೌದು ಸರ್, ಇದು ಮೊದಲ ಹೆಜ್ಜೆ" ಎಂದು ಹೇಳಿದರು. ಈ ಉಪಕ್ರಮದ ಪ್ರಮುಖ ಉದ್ದೇಶ ಸಾಧ್ಯವಾದಷ್ಟು ಕಲಿಯುವುದು ಮತ್ತು ಆ ಒಳನೋಟಗಳನ್ನು ಮರಳಿ ತರುವುದು ಎಂದು ಅವರು ಒತ್ತಿ ಹೇಳಿದರು.
ಭಾರತದಲ್ಲಿ ಗಗನಯಾತ್ರಿಗಳ ದೊಡ್ಡ ಗುಂಪನ್ನು ನಿರ್ಮಿಸುವ ಅಗತ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, 40-50 ವ್ಯಕ್ತಿಗಳು ಅಂತಹ ಕಾರ್ಯಾಚರಣೆಗಳಿಗೆ ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು. ಈವರೆಗೆ, ಕೆಲವೇ ಮಕ್ಕಳು ಗಗನಯಾತ್ರಿಗಳಾಗಲು ಯೋಚಿಸಿರಬಹುದು, ಆದರೆ ಶುಕ್ಲಾ ಅವರ ಪ್ರಯಾಣವು ಹೆಚ್ಚಿನ ನಂಬಿಕೆ ಮತ್ತು ಆಸಕ್ತಿಯನ್ನು ಪ್ರೇರೇಪಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋದಾಗ, ರಾಷ್ಟ್ರೀಯ ಕಾರ್ಯಕ್ರಮದ ಅನುಪಸ್ಥಿತಿಯಿಂದಾಗಿ ಗಗನಯಾತ್ರಿಯಾಗುವ ಆಲೋಚನೆ ಎಂದಿಗೂ ಬಂದಿರಲಿಲ್ಲ ಎಂದು ಶುಕ್ಲಾ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಆದರೂ ಅವರ ಇತ್ತೀಚಿನ ಕಾರ್ಯಾಚರಣೆಯ ಸಮಯದಲ್ಲಿ ಅವರು ಮೂರು ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸಿದರು - ಒಮ್ಮೆ ನೇರ ಕಾರ್ಯಕ್ರಮದ ಮೂಲಕ ಮತ್ತು ಎರಡು ಬಾರಿ ರೇಡಿಯೋ ಮೂಲಕ. ಈ ಪ್ರತಿಯೊಂದು ಕಾರ್ಯಕ್ರಮದಲ್ಲೂ, ಕನಿಷ್ಠ ಒಂದು ಮಗುವಾದರೂ ಅವರನ್ನು “ಸರ್, ನಾನು ಗಗನಯಾತ್ರಿಯಾಗುವುದು ಹೇಗೆ?" ಎಂದು ಕೇಳಿತು. ಈ ಸಾಧನೆಯು ದೇಶಕ್ಕೆ ಒಂದು ಪ್ರಮುಖ ಯಶಸ್ಸು ಎಂದು ಗಗನಯಾತ್ರಿ ಶುಕ್ಲಾ ಹೇಳಿದರು. ಇಂದಿನ ಭಾರತವು ಇನ್ನು ಮುಂದೆ ಕೇವಲ ಕನಸು ಕಾಣುವ ಅಗತ್ಯವಿಲ್ಲ - ಬಾಹ್ಯಾಕಾಶ ಹಾರಾಟ ಸಾಧ್ಯ, ಆಯ್ಕೆಗಳು ಅಸ್ತಿತ್ವದಲ್ಲಿವೆ ಮತ್ತು ಗಗನಯಾತ್ರಿಯಾಗುವುದನ್ನು ಸಾಧಿಸಬಹುದಾದದ್ದು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಒತ್ತಿ ಹೇಳಿದರು. "ಬಾಹ್ಯಾಕಾಶದಲ್ಲಿ ಭಾರತವನ್ನು ಪ್ರತಿನಿಧಿಸುವುದು ಒಂದು ಉತ್ತಮ ಅವಕಾಶವಾಗಿತ್ತು, ಮತ್ತು ಈಗ ಹೆಚ್ಚಿನ ಜನರು ಈ ಮೈಲಿಗಲ್ಲು ತಲುಪಲು ಸಹಾಯ ಮಾಡುವುದು ತಮ್ಮ ಜವಾಬ್ದಾರಿಯಾಗಿದೆ" ಎಂದು ಶುಕ್ಲಾ ಹೇಳಿದರು.
ಭಾರತದ ಮುಂದೆ ಈಗ ಎರಡು ಪ್ರಮುಖ ಮಿಷನ್ ಗಳಿವೆ – ಅವುಗಳೆಂದರೆ ಬಾಹ್ಯಾಕಾಶ ನಿಲ್ದಾಣ ಮತ್ತು ಗಗನಯಾನ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು ಮತ್ತು ಮುಂಬರುವ ಈ ಪ್ರಯತ್ನಗಳಲ್ಲಿ ಶುಕ್ಲಾ ಅವರ ಅನುಭವವು ಹೆಚ್ಚಿನ ಮೌಲ್ಯವನ್ನು ತಂದುಕೊಡಲಿದೆ ಎಂದು ಒತ್ತಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರದ ನಿರಂತರ ಬದ್ಧತೆಯನ್ನು ಗಮನಿಸಿದರೆ, ಇದು ದೇಶಕ್ಕೆ ಒಂದು ಪ್ರಮುಖ ಅವಕಾಶ ಎಂದು ಶುಕ್ಲಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಚಂದ್ರಯಾನ -2 ಯಶಸ್ವಿಯಾಗದಿರುವಂತಹ ಹಿನ್ನಡೆಗಳ ಹೊರತಾಗಿಯೂ ಕೇಂದ್ರ ಸರ್ಕಾರವು ಸ್ಥಿರವಾದ ಬಜೆಟ್‌ನೊಂದಿಗೆ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಬೆಂಬಲಿಸುವುದನ್ನು ಮುಂದುವರೆಸಿದೆ, ಇದು ಚಂದ್ರಯಾನ -3 ರ ಯಶಸ್ಸಿಗೆ ಕಾರಣವಾಯಿತು ಎಂದು ಅವರು ಗಮನಸೆಳೆದರು. ವೈಫಲ್ಯಗಳ ನಂತರವೂ ಅಂತಹ ಬೆಂಬಲವನ್ನು ಜಾಗತಿಕವಾಗಿ ಗಮನಿಸಲಾಗುತ್ತಿದೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಮತ್ತು ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಭಾರತವು ನಾಯಕತ್ವದ ಪಾತ್ರವನ್ನು ವಹಿಸಬಹುದು ಮತ್ತು ಇತರ ರಾಷ್ಟ್ರಗಳ ಭಾಗವಹಿಸುವಿಕೆಯೊಂದಿಗೆ ಭಾರತ ನೇತೃತ್ವದ ಬಾಹ್ಯಾಕಾಶ ನಿಲ್ದಾಣವು ಪ್ರಬಲ ಸಾಧನವಾಗಿರುತ್ತದೆ ಎಂದು ಶುಕ್ಲಾ ಹೇಳಿದರು.
ಸ್ವಾತಂತ್ರ್ಯ ದಿನದಂದು ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು ಬಾಹ್ಯಾಕಾಶ ವಲಯದಲ್ಲಿ ಆತ್ಮನಿರ್ಭರ ಭಾರತ ಸಾಧಿಸುವ ಕುರಿತ ಹೇಳಿಕೆಗಳನ್ನು ಶುಕ್ಲಾ ಉಲ್ಲೇಖಿಸಿದರು ಮತ್ತು ಈ ಎಲ್ಲಾ ಅಂಶಗಳು ಗಗನಯಾನ, ಬಾಹ್ಯಾಕಾಶ ನಿಲ್ದಾಣ ಮತ್ತು ಚಂದ್ರನ ಮೇಲೆ ಇಳಿಯುವ ದೂರದೃಷ್ಟಿ ಯೋಜನೆ ಇವೆಲ್ಲಾ ಪರಸ್ಪರ ಸಂಬಂಧ ಹೊಂದಿವೆ - ಇದು ವಿಶಾಲ ಮತ್ತು ಮಹತ್ವಾಕಾಂಕ್ಷೆಯ ಕನಸನ್ನು ರೂಪಿಸುತ್ತದೆ ಎಂದು ಹೇಳಿದರು. ಭಾರತವು ಸ್ವಾವಲಂಬನೆಯೊಂದಿಗೆ ಈ ಗುರಿಗಳನ್ನು ಸಾಧಿಸಿದರೆ, ಅದು ಯಶಸ್ವಿಯಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಖಚಿತಪಡಿಸಿದರು.
*****
(Release ID: 2157888)
Read this release in:
English
,
Urdu
,
Marathi
,
Hindi
,
Nepali
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam