ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

79ನೇ ಸ್ವಾತಂತ್ರ್ಯ ದಿನಾಚರಣೆಯಂದು ಶುಭಾಶಯ ಕೋರಿದ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ

Posted On: 16 AUG 2025 5:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಶುಭಾಶಯ ಮತ್ತು ಅಭಿನಂದನೆ ಕೋರಿದ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಉಕ್ರೇನ್ ಅಧ್ಯಕ್ಷರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಅಧ್ಯಕ್ಷ ಜೆಲೆನ್ಸ್ಕಿ ಅವರಿಗೆ ಧನ್ಯವಾದಗಳು. ಭಾರತ ಮತ್ತು ಉಕ್ರೇನ್ ನಡುವೆ ಇನ್ನಷ್ಟು ನಿಕಟ ಸಂಬಂಧಗಳನ್ನು ಬೆಳೆಸುವ ಜಂಟಿ ಬದ್ಧತೆಯನ್ನು ನಾನು ಆಳವಾಗಿ ಗೌರವಿಸುತ್ತೇನೆ. ಉಕ್ರೇನ್ ನಲ್ಲಿರುವ ನಮ್ಮ ಸ್ನೇಹಿತರಿಗೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯಿಂದ ಗುರುತಿಸಲ್ಪಟ್ಟ ಭವಿಷ್ಯವನ್ನು ನಾವು ಪ್ರಾಮಾಣಿಕವಾಗಿ ಬಯಸುತ್ತೇವೆ.

@ZelenskyyUa" 

 

ಇಸ್ರೇಲ್ ಪ್ರಧಾನಮಂತ್ರಿ ಅವರ  ಟ್ವೀಟ್ ಗೆ ಉತ್ತರಿಸಿದ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದರು:

"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಪ್ರಧಾನಿ ನೆತನ್ಯಾಹು ಅವರಿಗೆ ಧನ್ಯವಾದಗಳು. ಭಾರತ-ಇಸ್ರೇಲ್ ಸ್ನೇಹವು ಪ್ರವರ್ಧಮಾನಕ್ಕೆ ಬರಲಿ... ನಮ್ಮ ಜನರಿಗೆ ಶಾಂತಿ, ಅಭಿವೃದ್ಧಿ ಮತ್ತು ಭದ್ರತೆಯನ್ನು ತರುವ ಈ ಸಂಬಂಧವನ್ನು ಎರಡೂ ದೇಶಗಳು ಮತ್ತಷ್ಟು ಬಲಪಡಿಸಲಿ ಮತ್ತು ಆಳಗೊಳಿಸಲಿ.

@IsraeliPM" 

 

 

*****

 


(Release ID: 2157199)