ಪ್ರಧಾನ ಮಂತ್ರಿಯವರ ಕಛೇರಿ
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಅರ್ಪಿಸಿದರು
Posted On:
15 AUG 2025 7:26PM by PIB Bengaluru
79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವದೆಲ್ಲೆಡೆಗಿನ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.
ಮಾರಿಷಸ್ ಪ್ರಧಾನಮಂತ್ರಿ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದರು:
"ಪ್ರಧಾನಮಂತ್ರಿ ಡಾ. ನವೀನ್ ರಾಮ್ಗೂಲಮ್, ನಮ್ಮ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮ ಆತ್ಮೀಯ ಶುಭಾಶಯಗಳಿಗೆ ನಾವು ಧನ್ಯರಾಗಿದ್ದೇವ. ನಮ್ಮ ಜನತೆಗೆ ಪ್ರಗತಿ, ಸಮೃದ್ಧಿ ಮತ್ತು ಉಜ್ವಲ ಭವಿಷ್ಯದ ನಮ್ಮ ಹಂಚಿಕೆಯ ಅನ್ವೇಷಣೆಯಲ್ಲಿ ಮಾರಿಷಸ್ ಯಾವಾಗಲೂ ಕಾರ್ಯತಂತ್ರದ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ ಉಳಿಯುತ್ತದೆ."
ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದರು:
"ಅಧ್ಯಕ್ಷರಾದ ಮುಯಿಝು ಅವರೇ, ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಮಾಲ್ಡೀವ್ಸ್ ಮೌಲ್ಯಯುತ ನೆರೆಹೊರೆ ಹಾಗು ನಮ್ಮ ಜನತೆ ಮತ್ತು ಪ್ರದೇಶಕ್ಕೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ನಮ್ಮ ಹಂಚಿಕೆಯ ದೃಷ್ಟಿಕೋನದಲ್ಲಿ ನಿಕಟ ಪಾಲುದಾರ ರಾಷ್ಟ್ರವಾಗಿದೆ."
ಫ್ರಾನ್ಸ್ ಅಧ್ಯಕ್ಷರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಹೀಗೆ ಹೇಳಿದರು:
"ನನ್ನ ಸ್ನೇಹಿತರಾದ ಅಧ್ಯಕ್ಷ ಮ್ಯಾಕ್ರಾನ್, ಭಾರತದ ಸ್ವಾತಂತ್ರ್ಯ ದಿನದಂದು ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಗೌರವಿಸುತ್ತೇವೆ ಮತ್ತು ನಮ್ಮ ಜನರ ಪ್ರಯೋಜನಕ್ಕಾಗಿ ಅದನ್ನು ಮತ್ತಷ್ಟು ಬಲಪಡಿಸಲು ಬದ್ಧರಾಗಿದ್ದೇವೆ."
ಭೂತಾನ್ ಪ್ರಧಾನಮಂತ್ರಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು:
"ಭಾರತದ ಸ್ವಾತಂತ್ರ್ಯ ದಿನದ ಶುಭಾಶಯಗಳಿಗಾಗಿ ಪ್ರಧಾನಿ ಟೋಬ್ಗೇ ಅವರಿಗೆ ನನ್ನ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ನಮ್ಮ ರಾಷ್ಟ್ರಗಳ ನಡುವಿನ ಸ್ನೇಹದ ಬಂಧಗಳು ಬಲವಾಗಿ ಬೆಳೆಯುತ್ತಲೇ ಇರಲಿ."
*****
(Release ID: 2157001)