ಸಂಪುಟ
azadi ka amrit mahotsav

ದೇಶೀಯ ಎಲ್‌ಪಿಜಿಯಲ್ಲಿನ ನಷ್ಟಕ್ಕೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಪರಿಹಾರವಾಗಿ 30,000 ಕೋಟಿ ರೂ.ಗಳನ್ನು ನೀಡಲು ಸಂಪುಟದ ಅನುಮೋದನೆ

Posted On: 08 AUG 2025 4:02PM by PIB Bengaluru

ದೇಶೀಯ ಎಲ್‌ಪಿಜಿ ಮಾರಾಟದ ಕಡಿಮೆ ವಸೂಲಾತಿಗೆ ಪರಿಹಾರವಾಗಿ ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿ(ಒ ಎಂ ಸಿ) ಗಳಾದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಗಳಿಗೆ ರೂ. 30,000 ಕೋಟಿ ಪರಿಹಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು OMC ಗಳಿಗೆ ಪರಿಹಾರದ ವಿತರಣೆಯನ್ನು ಮಾಡಲಿದೆ. ಹನ್ನೆರಡು ಕಂತುಗಳಲ್ಲಿ ಪರಿಹಾರವನ್ನು ಪಾವತಿಸಲಾಗುತ್ತದೆ.

ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಗ್ರಾಹಕರಿಗೆ ನಿಯಂತ್ರಿತ ಬೆಲೆಯಲ್ಲಿ ಪೂರೈಸುತ್ತಿವೆ.

2024-25ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಎಲ್‌ಪಿಜಿ ದರಗಳು ಹೆಚ್ಚಿನ ಮಟ್ಟದಲ್ಲಿಯೇ ಇದ್ದು ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಇವೆ. ಆದಾಗ್ಯೂ, ಅಂತಾರಾಷ್ಟ್ರೀಯ ಎಲ್‌ಪಿಜಿ ದರಗಳ ಏರಿಳಿತಗಳಿಂದ ಗ್ರಾಹಕರನ್ನು ರಕ್ಷಿಸಲು, ಬೆಲೆ ಹೆಚ್ಚಳವನ್ನು ಸ್ಥಳೀಯ ಎಲ್‌ಪಿಜಿ ಗ್ರಾಹಕರಿಗೆ ವರ್ಗಾಯಿಸಲಾಗಿಲ್ಲ. ಇದರಿಂದ ಮೂರು ಒಎಂಸಿಗಳಿಗೆ ಗಮನಾರ್ಹ ನಷ್ಟಾಗಿದೆ. ನಷ್ಟದ ಹೊರತಾಗಿಯೂ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ದೇಶೀಯ LPG ನಿರಂತರ ಪೂರೈಕೆಯನ್ನು ಖಾತರಿಪಡಿಸಿವೆ. ಈ ನಷ್ಟ ಪರಿಹಾರದಿಂದಾಗಿ ಕಚ್ಚಾ ತೈಲ ಮತ್ತು ಎಲ್ ಪಿ ಜಿ ಖರೀದಿ, ಸಾಲ ಮರುಪಾವತಿ ಮತ್ತು ಬಂಡವಾಳ ವೆಚ್ಚದಂತಹ ನಿರ್ಣಾಯಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಒಎಂಸಿಗಳಿಗೆ ಅನುಕೂಲವಾಗಲಿದೆ. ಇದರಿಂದಾಗಿ ದೇಶಾದ್ಯಂತ ಮನೆಗಳಿಗೆ LPG ಸಿಲಿಂಡರ್‌ಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಲು ಸಾಧ್ಯವಾಗಲಿದೆ. 

ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿನ ಏರಿಳಿತಗಳಿಂದ ಗ್ರಾಹಕರನ್ನು ರಕ್ಷಿಸುವ ಮತ್ತು ಸಾರ್ವಜನಿಕ ವಲಯ ಕಂಪೆನಿಗಳಾದ ಈ ಓಎಂಸಿಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಈ ಕ್ರಮವು ಒತ್ತಿಹೇಳುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಂತಹ ಪ್ರಮುಖ ಪ್ರಾಯೋಜಕತ್ವ ಯೋಜನೆಗಳಡಿಯ ಗ್ರಾಹಕರು ಸೇರಿದಂತೆ ದೇಶೀಯ ಎಲ್‌ಪಿಜಿಯ ಎಲ್ಲಾ ಗ್ರಾಹಕರಿಗೆ ಶುದ್ಧ ಅಡುಗೆ ಇಂಧನದ ವ್ಯಾಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಇದು ಪುನರ್ ದೃಢೀಕರಿಸಿದೆ.

 

*****
 


(Release ID: 2154267)