ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರೀಕ್ಷಾ ಪೇ ಚರ್ಚಾ 2025 ಒಂದು ತಿಂಗಳಲ್ಲಿ ಅತಿ ಹೆಚ್ಚು ನೋಂದಣಿಗಾಗಿ ಗಿನ್ನೆಸ್‌ ವಿಶ್ವ ದಾಖಲೆಗೆ ಪಾತ್ರವಾಗಿದೆ

Posted On: 04 AUG 2025 6:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಪಕ್ರಮವಾದ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2018 ರಿಂದ ಮೈಗೌ ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯವು ಯಶಸ್ವಿಯಾಗಿ ಆಯೋಜಿಸಿದೆ. ಒಂದು ತಿಂಗಳಲ್ಲಿ ಅತಿ ಹೆಚ್ಚು ಜನರು ಸಿಟಿಜನ್‌ ಎಂಗೇಜ್ಮೆಂಟ್‌ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂಬ ಗಿನ್ನೆಸ್‌ ವಿಶ್ವ ದಾಖಲೆಗೆ ಲಭಿಸಿದೆ. ಈ ಮಾನ್ಯತೆಯು ಮೈಗೌ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದ 8ನೇ ಆವೃತ್ತಿಯಲ್ಲಿ ಸ್ವೀಕರಿಸಿದ 3.53 ಕೋಟಿ ಮಾನ್ಯ ನೋಂದಣಿಗಳ ಅಭೂತಪೂರ್ವ ಸಾಧನೆಯನ್ನು ಆಚರಿಸುತ್ತದೆ.

ಪರೀಕ್ಷಾ ಪೇ ಚರ್ಚಾ ಒಂದು ವಿಶಿಷ್ಟ ಜಾಗತಿಕ ವೇದಿಕೆಯಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರಿಕಲ್ಪನೆ ಮತ್ತು ನೇತೃತ್ವ ವಹಿಸಿದ್ದಾರೆ. ಅಲ್ಲಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನೇರವಾಗಿ ಸಂವಹನ ನಡೆಸುತ್ತಾರೆ. ಈ ಉಪಕ್ರಮವು ಪರೀಕ್ಷಾ ಋುತುವನ್ನು ಸಕಾರಾತ್ಮಕತೆ, ಸಿದ್ಧತೆ ಮತ್ತು ಉದ್ದೇಶಪೂರ್ವಕ ಕಲಿಕೆಯ ಹಬ್ಬವಾಗಿ ಪರಿವರ್ತಿಸುತ್ತದೆ, ಪರೀಕ್ಷೆಗಳನ್ನು ಒತ್ತಡಕ್ಕಿಂತ ಪ್ರೋತ್ಸಾಹದ ಸಮಯವನ್ನಾಗಿ ಮಾಡುತ್ತದೆ.

ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತ ಗಿನ್ನೆಸ್‌ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಔಪಚಾರಿಕವಾಗಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್‌ ಭಾಗವಹಿಸಿದ್ದರು. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌; ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಶ್ರೀ ಜಿತಿನ್‌ ಪ್ರಸಾದ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್‌ ಕುಮಾರ್‌; ಮೈಗೌನ ಸಿಇಒ ಶ್ರೀ ನಂದ ಕುಮಾರಂ; ಮತ್ತು ಶಿಕ್ಷಣ ಮತ್ತು ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಮತ್ತು ಇತರ ಪ್ರಮುಖ ಮಧ್ಯಸ್ಥಗಾರರು ಉಪಸ್ಥಿತರಿದ್ದರು. ಗಿನ್ನೆಸ್‌ ವಿಶ್ವ ದಾಖಲೆಗಳ ಅಧಿಕೃತ ತೀರ್ಪುಗಾರರಾದ ಶ್ರೀ ರಿಷಿ ನಾಥ್‌ ಅವರು ಈ ದಾಖಲೆಯನ್ನು ಮಾನ್ಯ ಮಾಡಿದರು ಮತ್ತು ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಧರ್ಮೇಂದ್ರ ಪ್ರಧಾನ್‌, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಪರೀಕ್ಷೆಯನ್ನು ಕಲಿಕೆಯ ಹಬ್ಬವಾಗಿ ಪರಿವರ್ತಿಸುವ ಮೂಲಕ ಪರೀಕ್ಷೆಗಳಿಗೆ ರಾಷ್ಟ್ರೀಯ ವಿಧಾನವಾಗಿ ಪರೀಕ್ಷಾ ಪೇ ಚರ್ಚಾವನ್ನು ಮರು ವ್ಯಾಖ್ಯಾನಿಸಲಾಗಿದೆ ಎಂದರು. ಪಿಪಿಸಿಯ 8ನೇ ಆವೃತ್ತಿಯು 2025ರಲ್ಲಿ ಎಲ್ಲಾ ಮಾಧ್ಯಮ ವೇದಿಕೆಗಳಲ್ಲಿ ಒಟ್ಟು 21 ಕೋಟಿಗೂ ಹೆಚ್ಚು ವೀಕ್ಷ ಕರನ್ನು ಕಂಡಿದೆ ಎಂದು ಶ್ರೀ ಧರ್ಮೇಂದ್ರ ಪ್ರಧಾನ್‌ ಮಾಹಿತಿ ನೀಡಿದರು. ಪಿಪಿಸಿ 2025ರಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಸಮಗ್ರ ಮತ್ತು ಅಂತರ್ಗತ ಶಿಕ್ಷಣಕ್ಕಾಗಿ ದೇಶದ ಸಾಮೂಹಿಕ ಬದ್ಧತೆಯ ಪ್ರತಿಬಿಂಬವಾಗಿ ನೋಡಲಾಗುತ್ತದೆ ಮತ್ತು ವಿಕಸಿತ ಭಾರತದ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್‌ ಅವರು, ಪರೀಕ್ಷಾ ಪೇ ಚರ್ಚಾವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ಉಪಕ್ರಮವಾಗಿದ್ದು, ಇದು ಯೋಗಕ್ಷೇಮ ಮತ್ತು ಒತ್ತಡ ಮುಕ್ತ ಕಲಿಕೆಯನ್ನು ಉತ್ತೇಜಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದರು. ಈ ಅಮೃತ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ವ್ಯಾಪಕ ಶ್ರೇಣಿಯ ವೃತ್ತಿ ಅವಕಾಶಗಳನ್ನು ಅವರು ಬಿಂಬಿಸಿದರು ಮತ್ತು ಅತಿ ಹೆಚ್ಚು ನೋಂದಣಿಗಾಗಿ ಗಿನ್ನೆಸ್‌ ವಿಶ್ವ ದಾಖಲೆಯು ಈ ಉಪಕ್ರಮದಲ್ಲಿ ಬಲವಾದ ಸಾರ್ವಜನಿಕ ನಂಬಿಕೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.

ಶ್ರೀ ಜಿತಿನ್‌ ಪ್ರಸಾದ ಅವರು ಆಡಳಿತವನ್ನು ಹೆಚ್ಚು ಭಾಗವಹಿಸುವಿಕೆಯನ್ನಾಗಿ ಮಾಡುವಲ್ಲಿ ಮೈಗೌ ಪ್ರಯತ್ನಗಳನ್ನು ಶ್ಲಾಘಿಸಿದರು. ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಆಳಗೊಳಿಸಲು ಮತ್ತು ದೇಶಾದ್ಯಂತ ಪರೀಕ್ಷಾ ಪೇ ಚರ್ಚಾದ ವ್ಯಾಪ್ತಿಯನ್ನು ಹೆಚ್ಚಿಸಲು ಮೈಗೌ ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡಿದೆ ಎಂಬುದನ್ನು ಗಿನ್ನೆಸ್‌ ವಿಶ್ವ ದಾಖಲೆಯು ಬಂಬಿಸುತ್ತದೆ ಎಂದು ಅವರು ಹೇಳಿದರು .

ಎನ್‌ಇಪಿ 2020 ಒತ್ತಡ ಮುಕ್ತ ಮತ್ತು ಸಂತೋಷದ ಕಲಿಕೆಗೆ ಒತ್ತು ನೀಡುತ್ತದೆ. ಇದು ಕಲಿಕೆಯಿಂದ ಕಂಠಪಾಠದಿಂದ ದೂರ ಸರಿದು ಅನುಭವದ ಕಲಿಕೆಯ ಆಧಾರದ ಮೇಲೆ ವಿಮರ್ಶಾತ್ಮಕ ಅರಿವಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುತ್ತದೆ. ಪ್ರಾರಂಭದಿಂದಲೂ, ಪರೀಕ್ಷಾ ಪೇ ಚರ್ಚಾ ರಾಷ್ಟ್ರವ್ಯಾಪಿ ಆಂದೋಲನವಾಗಿ ವಿಕಸನಗೊಂಡಿದೆ. ಅದು ಪರೀಕ್ಷೆಗಳನ್ನು ಸ್ವಯಂ ಅಭಿವ್ಯಕ್ತಿ ಮತ್ತು ಬೆಳವಣಿಗೆಯ ಅವಕಾಶಗಳಾಗಿ ಪರಿವರ್ತಿಸುತ್ತದೆ. ವೈಯಕ್ತಿಕ ಸಂವಾದದ ಮೂಲಕ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮಯ ನಿರ್ವಹಣೆ, ಡಿಜಿಟಲ್‌ ಗೊಂದಲಗಳು, ಬುದ್ಧಿವಂತಿಕೆ ಮತ್ತು ಭಾವನಾತ್ಮಕ ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ಸವಾಲುಗಳನ್ನು ಎದುರಿಸುವ ಕುರಿತು ಸಲಹೆ ಸೂಚನೆ ನೀಡುತ್ತಾರೆ, ಇದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಪ್ರಾಯೋಗಿಕ ಮಾರ್ಗದರ್ಶನ ಮತ್ತು ಪ್ರೇರಣೆಯನ್ನು ಒದಗಿಸುತ್ತಾರೆ.

ಪಿಪಿಸಿ 2025ರ ಯಶಸ್ಸು ಸಾಮೂಹಿಕ ಸಾಧನೆಯಾಗಿದೆ ಮತ್ತು ಈ ಮೈಲಿಗಲ್ಲಿಗೆ ಕೊಡುಗೆ ನೀಡಿದ ಎಲ್ಲಾ ಪಾಲುದಾರರು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕರನ್ನು ಸಚಿವರು ಶ್ಲಾಘಿಸಿದ್ದಾರೆ. ಸಹಭಾಗಿತ್ವದ ಆಡಳಿತ ಮತ್ತು ಸಮಗ್ರ ಶಿಕ್ಷಣವನ್ನು ಮತ್ತಷ್ಟು ಬಲಪಡಿಸುವ ಬದ್ಧತೆ ಸ್ಥಿರವಾಗಿ ಉಳಿದಿದೆ.

ಕಾರ್ಯಕ್ರಮದ ಒಳಗೊಳ್ಳುವಿಕೆ, ಡಿಜಿಟಲ್‌ ವ್ಯಾಪ್ತಿ ಮತ್ತು ನವೀನ ವಿಧಾನಗಳು ಭಾರತದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮೂಲಾಧಾರವಾಗಿ ಅದರ ನಿರಂತರ ಯಶಸ್ಸನ್ನು ಖಚಿತಪಡಿಸುತ್ತವೆ. ಪ್ರತಿ ವರ್ಷ ಕಳೆದಂತೆ, ಪರೀಕ್ಷೆಗಳು ಅಂತ್ಯವಲ್ಲ ಆದರೆ ಪ್ರಾರಂಭ ಎಂಬ ಸಂದೇಶವನ್ನು ಪಿಪಿಸಿ ಬಲಪಡಿಸುತ್ತದೆ.

 

 

*****

 


(Release ID: 2152355)