ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಸ್ವಾತಂತ್ರ್ಯ ದಿನ 2025ರ ಭಾಷಣಕ್ಕಾಗಿ ನಾಗರಿಕರಿಂದ ಆಲೋಚನೆಗಳನ್ನು ಹಂಚಿಕೊಳ್ಳಲು ಕರೆ ನೀಡಿದ್ದಾರೆ

Posted On: 01 AUG 2025 8:52AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿದ್ದು, ಆಗಸ್ಟ್ 15ರಂದು ಕೆಂಪು ಕೋಟೆಯ ಆವರಣದಿಂದ ಮಾಡುವ ಭಾಷಣಕ್ಕಾಗಿ ಎಲ್ಲಾ ನಾಗರಿಕರು ತಮ್ಮ ವಿಚಾರ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲು ಕರೆ ನೀಡಿದ್ದಾರೆ. 

ಎಕ್ಸ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ: 

“ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದೆ, ನಮ್ಮ ಎಲ್ಲಾ ದೇಶವಾಸಿಗಳಿಂದ ನಾನು ಆಲಿಸಲು ಎದುರು ನೋಡುತ್ತಿದ್ದೇನೆ! ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ನೀವು ಯಾವ ಪರಿಕಲ್ಪನೆ ಅಥವಾ ಆಲೋಚನೆಗಳನ್ನು ಪ್ರತಿಬಿಂಬಿಸಲು ಬಯಸುತ್ತೀರಿ?
ನಿಮ್ಮ ಆಲೋಚನೆಗಳನ್ನು MyGov ಮತ್ತು NaMo ಆ್ಯಪ್‌ ನ ಓಪನ್ ಫೋರಂನಲ್ಲಿ  ಹಂಚಿಕೊಳ್ಳಿ.”

https://www.mygov.in/group-issue/let-your-ideas-and-suggestions-be-part-pm-modis-independence-day-speech-2025/

https://nm-4.com/MXPBRN

 

 

*****


(Release ID: 2151189)