ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಮೇಘನಾದ್ ದೇಸಾಯಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 29 JUL 2025 10:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖ್ಯಾತ ಚಿಂತಕ, ಬರಹಗಾರ ಮತ್ತು ಅರ್ಥಶಾಸ್ತ್ರಜ್ಞ ಶ್ರೀ ಮೇಘನಾದ್ ದೇಸಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 ಈ ಸಂಬಂಧ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ:

"ಖ್ಯಾತ ಚಿಂತಕ, ಬರಹಗಾರ ಮತ್ತು ಅರ್ಥಶಾಸ್ತ್ರಜ್ಞ ಶ್ರೀ ಮೇಘನಾದ್ ದೇಸಾಯಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಯಾವಾಗಲೂ ಭಾರತ ಮತ್ತು ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದ್ದರು. ಭಾರತ-ಯು.ಕೆ.(ಯುನೈಟೆಡ್ ಕಿಂಗ್ ಡಮ್) ಸಂಬಂಧಗಳನ್ನು ಆಳಗೊಳಿಸುವಲ್ಲಿ ಅವರು ಪಾತ್ರ ವಹಿಸಿದ್ದಾರೆ. ಅವರು ತಮ್ಮ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡ ನಮ್ಮ ಚರ್ಚೆಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ," ಎಂದು ಹೇಳಿದ್ದಾರೆ.

 

 

*****

 


(Release ID: 2150050)