ಪ್ರಧಾನ ಮಂತ್ರಿಯವರ ಕಛೇರಿ
ಮೇಘಾಲಯ ರಾಜ್ಯದ ಅಸಾಧಾರಣ ಪ್ರಗತಿಯನ್ನು ಶ್ಲಾಘಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
Posted On:
20 JUL 2025 4:39PM by PIB Bengaluru
ಪ್ರವಾಸೋದ್ಯಮ, ಯುವ ಸಬಲೀಕರಣ, ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು ಜೊತೆಯಾಗಿ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ, ವೈಬ್ರೆಂಟ್ ವಿಲೇಜ್ ಕಾರ್ಯಕ್ರಮ ಮೊದಲಾದ ಉಪಕ್ರಮಗಳಿಂದ ಪ್ರೇರಿತವಾದ ಮೇಘಾಲಯದ ಗಮನಾರ್ಹ ರೂಪಾಂತರದ ಬಗ್ಗೆ ವಿವರಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
“ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ, ವೈಬ್ರೆಂಟ್ ವಿಲೇಜ್ ಕಾರ್ಯಕ್ರಮ ಮೊದಲಾದ ಉಪಕ್ರಮಗಳ ಜೊತೆಗೆ ಪ್ರವಾಸೋದ್ಯಮ, ಯುವ ಸಬಲೀಕರಣ, ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು, ಇತ್ಯಾದಿಗಳಿಂದ ಬೆಂಬಲಿತವಾದ ಮೇಘಾಲಯದ ಗಮನಾರ್ಹ ರೂಪಾಂತರವನ್ನು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ @nsitharaman ಅವರು ವಿವರಿಸಿದ್ದಾರೆ. ಸರ್ಕಾರದ ಸದೃಢ ಬೆಂಬಲ ಮತ್ತು ರೋಮಾಂಚಕ ಸಮುದಾಯ ಉತ್ಸಾಹದೊಂದಿಗೆ, ರಾಜ್ಯವು ಸಂಕಷ್ಟಗಳಿಂದ ಶೀಘ್ರವಾಗಿ ಚೇತರಿಸಿಕೊಂಡು ಸ್ವಾವಲಂಬಿ ಭಾರತಕ್ಕೆ ನೀಲನಕ್ಷೆಯಾಗಿ ನಿಂತಿದೆ”.
*****
(Release ID: 2146256)
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam