ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಕೊರಿಯಾ ಗಣರಾಜ್ಯದ ವಿಶೇಷ ರಾಯಭಾರಿಗಳ ನಿಯೋಗವು ಭೇಟಿ ಮಾಡಿತು

Posted On: 17 JUL 2025 6:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಕೊರಿಯಾ ಗಣರಾಜ್ಯದ ಶ್ರೀ ಕಿಮ್ ಬೂ ಕ್ಯೂಮ್ ನೇತೃತ್ವದ ವಿಶೇಷ ರಾಯಭಾರಿಗಳ ನಿಯೋಗವು ಇಂದು ನವದೆಹಲಿಯಲ್ಲಿ ಭೇಟಿ ಮಾಡಿತು. 

ಕೊರಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಜೇಮ್ಯುಂಗ್ ಲೀ ಅವರೊಂದಿಗಿನ ಇತ್ತೀಚಿನ ಸಕಾರಾತ್ಮಕ ಭೇಟಿಯನ್ನು ಸ್ಮರಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು, 10ನೇ ವರ್ಷಾಚರಣೆಯಲ್ಲಿರುವ ಭಾರತ-ಕೊರಿಯಾ ಗಣರಾಜ್ಯ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ನಾವೀನ್ಯತೆ, ರಕ್ಷಣೆ, ಹಡಗು ನಿರ್ಮಾಣ ಮತ್ತು ಕೌಶಲ್ಯಪೂರ್ಣ ಚಲನಶೀಲತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ನಿರಂತರ ಬೆಳವಣಿಗೆಯನ್ನು ಅವರು ಉಲ್ಲೇಖಿಸಿದರು. 

ಎಕ್ಸ್ ಪೋಸ್ಟ್ ನಲ್ಲಿ ಬರೆದ ಅವರು: 

"ಶ್ರೀ ಕಿಮ್ ಬೂ ಕ್ಯೂಮ್ ನೇತೃತ್ವದ ವಿಶೇಷ ರಾಯಭಾರಿಗಳ ನಿಯೋಗವನ್ನು ಸ್ವಾಗತಿಸಲು ಸಂತೋಷವಾಗಿದೆ. ಕಳೆದ ತಿಂಗಳು ಕೊರಿಯಾ ಗಣರಾಜ್ಯದ ಅಧ್ಯಕ್ಷರಾದ ಶ್ರೀ @Jaemyung_Lee ಅವರೊಂದಿಗಿನ ಭೇಟಿಯನ್ನು ಸ್ಮರಿಸಿದೆ. 10 ವರ್ಷಗಳನ್ನು ಪೂರೈಸುತ್ತಿರುವ ಭಾರತ-ಕೊರಿಯಾ ಗಣರಾಜ್ಯ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ, ನಾವೀನ್ಯತೆ ಮತ್ತು ರಕ್ಷಣೆಯಿಂದ ಹಡಗು ನಿರ್ಮಾಣ ಮತ್ತು ಕೌಶಲ್ಯಪೂರ್ಣ ಚಲನಶೀಲತೆಯವರೆಗೆ ಬೆಳೆಯುತ್ತಲೇ ಇದೆ. ಪ್ರಜಾಪ್ರಭುತ್ವಗಳ ನಡುವಿನ ನಿಕಟ ಸಹಯೋಗವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲಿದೆ."

 

 

*****

 


(Release ID: 2145736)