ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸ್ಟಾರ್ಟ್-ಅಪ್ ಆಕ್ಸಿಲರೇಟರ್ ವೇವ್‌ ಎಕ್ಸ್ "ಕಲಾ ಸೇತು" ಉಪಕ್ರಮವನ್ನು ಪ್ರಾರಂಭಿಸಿದೆ, ಇದು ಆಡಳಿತದಲ್ಲಿ ನಾಗರಿಕರನ್ನು ತ್ವರಿತವಾಗಿ ತಲುಪಲು ನೈಜ-ಸಮಯದ ಬಹುಭಾಷಾ ಮಲ್ಟಿಮೀಡಿಯಾ ಕಂಟೆಂಟ್‌ ರಚನೆಯ ಪರಿಹಾರದೊಂದಿಗೆ ಬರಲು ಭಾರತದ ಪ್ರಮುಖ ಎಐ ನವೋದ್ಯಮಗಳನ್ನು ಆಹ್ವಾನಿಸುವ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ


ಭಾರತೀಯ ಭಾಷೆಗಳಲ್ಲಿ ಪಠ್ಯದಿಂದ ಮಲ್ಟಿಮೀಡಿಯಾ ಕಂಟೆಂಟ್ ರಚನೆಗಾಗಿ ಎಐ ಪರಿಕರಗಳನ್ನು ನಿರ್ಮಿಸಲು 'ಕಲಾ ಸೇತು' ನವೋದ್ಯಮಗಳಿಗೆ ಸವಾಲು ನೀಡುತ್ತದೆ

ಕಲಾ ಸೇತು ಮತ್ತು ಭಾಷಾ ಸೇತು ಬಹುಭಾಷಾ ವಿಷಯದಲ್ಲಿ ಭಾರತದ ಎಐ ನಾವೀನ್ಯತೆಗೆ ಚಾಲನೆ ನೀಡುತ್ತವೆ; ಕ್ರಮವಾಗಿ ಜುಲೈ 30 ಮತ್ತು ಜುಲೈ 22 ರೊಳಗೆ ಅರ್ಜಿ ಸಲ್ಲಿಸಿ

Posted On: 08 JUL 2025 2:26PM by PIB Bengaluru

ಭಾರತವು ತನ್ನ ಡಿಜಿಟಲ್ ಆಡಳಿತದ ಪ್ರಯಾಣವನ್ನು ವೇಗಗೊಳಿಸುತ್ತಿದ್ದಂತೆ, ನಾಗರಿಕರೊಂದಿಗೆ ಅವರದೇ ಭಾಷೆಗಳಲ್ಲಿ ತಕ್ಷಣ ಮತ್ತು ಪರಿಣಾಮಕಾರಿಯಾಗಿ ಸಂವಹನ ನಡೆಸುವುದು ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಅರ್ಥಪೂರ್ಣ ಸಾರ್ವಜನಿಕ ಸಂಪರ್ಕಕ್ಕೆ ಅಗತ್ಯವಿರುವ ಪ್ರಮಾಣ, ವೇಗ ಮತ್ತು ವೈವಿಧ್ಯತೆಗೆ ಅನುಗುಣವಾಗಿ ಕಂಟೆಂಟ್ ರಚನೆಯ ಸಾಂಪ್ರದಾಯಿಕ ವಿಧಾನಗಳು ಇಂದು ಮಿತಿಗಳನ್ನು ಎದುರಿಸುತ್ತಿವೆ. ಸಮಗ್ರ, ತಂತ್ರಜ್ಞಾನ-ಚಾಲಿತ ಸಂವಹನಕ್ಕೆ ಭಾರತ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ಭಾಷಾ ಅಂತರವನ್ನು ಕಡಿಮೆ ಮಾಡುವ ಮತ್ತು ದೇಶಾದ್ಯಂತ ಕೊನೆಯ ಮೈಲಿಗೆ ಮಾಹಿತಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವೆ ಎಐ-ಆಧಾರಿತ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ.

ಕಲಾ ಸೇತು: ಭಾರತಕ್ಕಾಗಿ ನೈಜ-ಸಮಯದ ಭಾಷಾ ತಂತ್ರಜ್ಞಾನ

ಸಮಗ್ರ ಸಂವಹನಕ್ಕಾಗಿ ಎಐ (ಕೃತಕ ಬುದ್ಧಿಮತ್ತೆ) ಶಕ್ತಿಯನ್ನು ಬಳಸಿಕೊಳ್ಳುವ ಕಾರ್ಯತಂತ್ರದ ಪ್ರಯತ್ನದಲ್ಲಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತನ್ನ ವೇವ್‌ ಎಕ್ಸ್ ಸ್ಟಾರ್ಟ್ಅಪ್ ಆಕ್ಸಿಲರೇಟರ್ ಪ್ಲಾಟ್‌ಫಾರ್ಮ್ ಮೂಲಕ "ಕಲಾ ಸೇತು - ಭಾರತಕ್ಕಾಗಿ ನೈಜ-ಸಮಯದ ಭಾಷಾ ತಂತ್ರಜ್ಞಾನ" ಸವಾಲನ್ನು ಪ್ರಾರಂಭಿಸಿದೆ. ಈ ರಾಷ್ಟ್ರವ್ಯಾಪಿ ಉಪಕ್ರಮವು ಭಾರತದ ಪ್ರಮುಖ ಎಐ ನವೋದ್ಯಮಗಳನ್ನು ಪಠ್ಯಗಳಿಂದ ಬಹು ಭಾರತೀಯ ಭಾಷೆಗಳಿಗೆ ಆಡಿಯೋ, ವಿಡಿಯೋ ಮತ್ತು ಗ್ರಾಫಿಕ್ ಕಂಟೆಂಟ್‌ ನ ಸ್ವಯಂಚಾಲಿತ ರಚನೆಗಾಗಿ ದೇಶೀಯ, ವಿಸ್ತೃತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿದೆ.

ಈ ಸವಾಲು ಎಐ-ಚಾಲಿತ ಕಂಟೆಂಟ್‌ ರಚನೆಯ ಮೂರು ಪ್ರಮುಖ ಕ್ಷೇತ್ರಗಳನ್ನು ಬೆಂಬಲಿಸುವ ವಿಸ್ತೃತ ಪರಿಹಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಮೊದಲನೆಯದಾಗಿ, ಪಠ್ಯದಿಂದ ವೀಡಿಯೊ ರಚನೆ, ಇದು ಪಠ್ಯದಿಂದ ವೀಡಿಯೊ ವಿಷಯವನ್ನು ಸ್ವಯಂಚಾಲಿತವಾಗಿ ರಚಿಸಲು ಅನುವು ಮಾಡಿಕೊಡುತ್ತದೆ, ವಿಭಿನ್ನ ಸಂವಹನ ಅಗತ್ಯಗಳಿಗೆ ಸರಿಹೊಂದುವಂತೆ ವಾತಾವರಣ, ಧ್ವನಿ ಮತ್ತು ವಿಷಯವನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಎರಡನೆಯದಾಗಿ, ಪಠ್ಯದಿಂದ ಗ್ರಾಫಿಕ್ಸ್ ಉತ್ಪಾದನೆ, ಇದು ಡೇಟಾ-ಚಾಲಿತ ಇನ್ಫೋಗ್ರಾಫಿಕ್ಸ್ ಮತ್ತು ವಿವರಣಾತ್ಮಕ ದೃಶ್ಯಗಳ ರಚನೆಯನ್ನು ಸಕ್ರಿಯಗೊಳಿಸುತ್ತದೆ, ಇದು ಸಂಕೀರ್ಣ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ದೃಷ್ಟಿಗೋಚರವಾಗಿ ತೊಡಗಿಸಿಕೊಳ್ಳಲು ಸುಲಭಗೊಳಿಸುತ್ತದೆ. ಮೂರನೆಯದಾಗಿ, ಪಠ್ಯದಿಂದ ಆಡಿಯೊ ಉತ್ಪಾದನೆ, ಇದು ಸುಧಾರಿತ ಧ್ವನಿ ಸಂಶ್ಲೇಷಣೆಯನ್ನು ಬಳಸಿಕೊಂಡು ನಿಖರವಾದ ಭಾಷಣವನ್ನು ರಚಿಸುತ್ತದೆ, ಭಾವನಾತ್ಮಕವಾಗಿ ಅಭಿವ್ಯಕ್ತಿಗೊಳಿಸುವ ಮತ್ತು ಪ್ರಾದೇಶಿಕ ಉಚ್ಚಾರಣೆಗಳ ಸಂವೇದಿಯಾಗಿರುತ್ತದೆ, ಬಹುಭಾಷಾ ಸಂದರ್ಭಗಳಲ್ಲಿ ಸಾಪೇಕ್ಷತೆ ಮತ್ತು ಪ್ರಭಾವವನ್ನು ಹೆಚ್ಚಿಸುತ್ತದೆ.

ನಾಗರಿಕ ಕೇಂದ್ರಿತ ಅಪ್ಲಿಕೇಶನ್

ಕಲಾ ಸೇತು ಡಿಜಿಟಲ್ ಭಾಷಾ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಸಾರ್ವಜನಿಕ ಸಂವಹನ ಸಂಸ್ಥೆಗಳು ಅಧಿಕೃತ ಮಾಹಿತಿಯನ್ನು ನೈಜ ಸಮಯದಲ್ಲಿ ಇನ್ಫೋಗ್ರಾಫಿಕ್ ದೃಶ್ಯಗಳು, ಸಂದರ್ಭೋಚಿತ ವೀಡಿಯೊ ವಿವರಣೆಗಳು ಮತ್ತು ಆಡಿಯೊ ಸುದ್ದಿ ಕ್ಯಾಪ್ಸುಲ್‌ ಗಳಂತಹ ಪ್ರಾದೇಶಿಕವಾಗಿ ಪ್ರತಿಧ್ವನಿಸುವ ಸ್ವರೂಪಗಳಾಗಿ ಕ್ರಿಯಾತ್ಮಕವಾಗಿ ಪರಿವರ್ತಿಸಬಹುದು. ಹವಾಮಾನ ಎಚ್ಚರಿಕೆಗಳನ್ನು ಪಡೆಯುವ ರೈತರಾಗಿರಲಿ, ಪರೀಕ್ಷೆಯ ನವೀಕರಣಗಳನ್ನು ಪಡೆಯುವ ವಿದ್ಯಾರ್ಥಿಯಾಗಿರಲಿ ಅಥವಾ ಆರೋಗ್ಯ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಹಿರಿಯ ನಾಗರಿಕರಾಗಿರಲಿ, ಈ ಉಪಕ್ರಮವು ಮಾಹಿತಿಯನ್ನು ಪ್ರಸ್ತುತವಾಗಿ ಮಾತ್ರವಲ್ಲದೆ ಅವರ ಸ್ವಂತ ಭಾಷೆಗಳಲ್ಲಿಯೂ ತಲುಪಿಸಲು ಪ್ರಯತ್ನಿಸುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ

ನವೋದ್ಯಮಗಳು https://wavex.wavesbazaar.com ನಲ್ಲಿ WAVEX ಪೋರ್ಟಲ್ ಮೂಲಕ “ಕಲಾ ಸೇತು” ಸವಾಲು ವಿಭಾಗದ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸಬಹುದು. ನವೋದ್ಯಮಗಳು ಜುಲೈ 30, 2025 ರೊಳಗೆ ಉತ್ಪನ್ನದ ವೀಡಿಯೊ ಡೆಮೊವನ್ನು ಪ್ರದರ್ಶಿಸುವ ಕನಿಷ್ಠ ಕಾರ್ಯಸಾಧ್ಯ ಪರಿಕಲ್ಪನೆ (ಎಂವಿಸಿ) ಅನ್ನು ಸಲ್ಲಿಸಬೇಕು. ಅಂತಿಮ ಪಟ್ಟಿಗೆ ಆಯ್ಕೆಯಾದ ತಂಡಗಳು ನವದೆಹಲಿಯಲ್ಲಿ ರಾಷ್ಟ್ರೀಯ ತೀರ್ಪುಗಾರರ ಮುಂದೆ ತಮ್ಮ ರಚನೆಗಳನ್ನು ಪ್ರಸ್ತುತಪಡಿಸುತ್ತವೆ, ವಿಜೇತರು ತಮ್ಮ ರಚನೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು, ಆಕಾಶವಾಣಿ, ದೂರದರ್ಶನ ಮತ್ತು ಪಿಐಬಿ ಯೊಂದಿಗೆ ಪೈಲಟ್ ಬೆಂಬಲ ಮತ್ತು ವೇವ್‌‌ ಎಕ್ಸ್ ಇನ್ನೋವೇಶನ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಇನ್ಕ್ಯುಬೇಶನ್‌ ಗಾಗಿ ಒಪ್ಪಂದವನ್ನು ಪಡೆಯುತ್ತಾರೆ. ಸವಾಲುಗಳಿಗೆ ತಾಂತ್ರಿಕ ಅವಶ್ಯಕತೆಗಳು ಮತ್ತು ಇತರ ವಿವರಗಳನ್ನು ವೇವ್‌‌ ಎಕ್ಸ್ ಪೋರ್ಟಲ್‌ ನಲ್ಲಿ ಪಡೆಯಬಹುದು.

ಭಾಷಾ ಸೇತು ಸವಾಲು

ʼಭಾಷಾ ಸೇತುʼ ನೈಜ-ಸಮಯದ ಭಾಷಾ ಅನುವಾದ ಸವಾಲನ್ನು ವೇವ್‌ ಎಕ್ಸ್ ಅಡಿಯಲ್ಲಿ ಜೂನ್ 30, 2025 ರಂದು ಪ್ರಾರಂಭಿಸಲಾಯಿತು. ನವೋದ್ಯಮಗಳು ಭಾಷಾ ಸೇತು ಸವಾಲು ವಿಭಾಗದ ಅಡಿಯಲ್ಲಿ ವೇವ್‌ ಎಕ್ಸ್ ಪೋರ್ಟಲ್ ಮೂಲಕ ಜುಲೈ 22, 2025 ರವರೆಗೆ ಅರ್ಜಿ ಸಲ್ಲಿಸಬಹುದು.

ಈ ಉಪಕ್ರಮಗಳು ಸಮಗ್ರ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಎಐ-ಚಾಲಿತ ಪರಿಹಾರಗಳನ್ನು ಮುನ್ನಡೆಸುವ ಭಾರತ ಸರ್ಕಾರದ ಬಲವಾದ ಬದ್ಧತೆಯನ್ನು ಒತ್ತಿಹೇಳುತ್ತವೆ. ಬಹುಭಾಷಾ ಕಂಟೆಂಟ್‌ ರಚನೆ ಮತ್ತು ನೈಜ-ಸಮಯದ ಭಾಷಾ ಅನುವಾದದಲ್ಲಿ ದೇಶೀಯ ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ, ಸರ್ಕಾರವು ಸಂವಹನ ಅಂತರವನ್ನು ಕಡಿಮೆ ಮಾಡಲು ಮತ್ತು ಪ್ರತಿ ಭಾರತೀಯ ಭಾಷೆಯಲ್ಲಿ ಕೊನೆಯ ಮೈಲಿಗೆ ಮಾಹಿತಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಲಾ ಸೇತು ಮತ್ತು ಭಾಷಾ ಸೇತು ರಾಷ್ಟ್ರದ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಮತ್ತು ರೋಮಾಂಚಕ ನವೋದ್ಯಮ ನಾವೀನ್ಯತೆಯ ವಲಯವನ್ನು ಬೆಳೆಸುವ ಭವಿಷ್ಯಕ್ಕೆ ಸಿದ್ಧವಾದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಪ್ರಮುಖ ಕ್ರಮಗಳಾಗಿವೆ.

ವೇವ್ಎಕ್ಸ್ ಬಗ್ಗೆ

ವೇವ್‌ ಎಕ್ಸ್ ಎಂಬುದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್ಸ್ ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾದ ಸ್ಟಾರ್ಟ್‌ಅಪ್ ಆಕ್ಸಿಲರೇಟರ್ ಪ್ಲಾಟ್‌ಫಾರ್ಮ್ ಆಗಿದ್ದು, ಮಾಧ್ಯಮ, ಮನರಂಜನೆ ಮತ್ತು ಭಾಷಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಮೇ 2025 ರಲ್ಲಿ ಮುಂಬೈನಲ್ಲಿ ನಡೆದ ವೇವ್ಸ್ ಶೃಂಗಸಭೆಯಲ್ಲಿ, ವೇವ್‌ ಎಕ್ಸ್ 30 ಕ್ಕೂ ಹೆಚ್ಚು ಭರವಸೆಯ ನವೋದ್ಯಮಗಳಿಗೆ ಪಿಚಿಂಗ್ ಅವಕಾಶಗಳನ್ನು ಒದಗಿಸಿತು, ಇದು ಸರ್ಕಾರಿ ಸಂಸ್ಥೆಗಳು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರೊಂದಿಗೆ ನೇರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಿತು. ಉದ್ದೇಶಿತ ಹ್ಯಾಕಥಾನ್‌ ಗಳು, ಇನ್‌ಕ್ಯುಬೇಶನ್, ಮಾರ್ಗದರ್ಶನ ಮತ್ತು ರಾಷ್ಟ್ರೀಯ ವೇದಿಕೆಗಳೊಂದಿಗೆ ಸಮನ್ವಯದ ಮೂಲಕ ವೇವ್‌ ಎಕ್ಸ್ ಯಶಸ್ವಿ ವಿಚಾರಗಳನ್ನು ಬೆಂಬಲಿಸುವುದನ್ನು ಮುಂದುವರೆಸಿದೆ.

 

*****


(Release ID: 2143130)