ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರ ಟ್ರಿನಿಡಾಡ್ ಮತ್ತು ಟೊಬೆಗೊಗೆ ಭೇಟಿ: ಫಲಿತಾಂಶಗಳ ಪಟ್ಟಿ

Posted On: 04 JUL 2025 11:41PM by PIB Bengaluru

ಎ) ಸಹಿ ಮಾಡಲಾದ ತಿಳುವಳಿಕೆ ಒಪ್ಪಂದಗಳು / ಒಪ್ಪಂದಗಳು:

 

i. ಭಾರತೀಯ ಫಾರ್ಮಾಕೋಪಿಯಾ ಕುರಿತು ಒಪ್ಪಂದ
ii. ತ್ವರಿತ ಪರಿಣಾಮ ಯೋಜನೆಗಳ ಅನುಷ್ಠಾನಕ್ಕಾಗಿ ಭಾರತೀಯ ಅನುದಾನ ಸಹಾಯದ ಒಪ್ಪಂದ (ಕ್ಯೂ.ಐ.ಆರ್.)
iii. 2025-2028 ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ
iv. ಕ್ರೀಡೆಗಳಲ್ಲಿ ಸಹಕಾರದ ಕುರಿತು ಒಪ್ಪಂದ
v. ರಾಜತಾಂತ್ರಿಕ ತರಬೇತಿಯಲ್ಲಿ ಸಹಕಾರದ ಕುರಿತು ಒಪ್ಪಂದ
vi. ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯ (ಯು.ಡಬ್ಲ್ಯೂ.ಐ), ಟ್ರಿನಿಡಾಡ್ ಮತ್ತು ಟೊಬೆಗೊದಲ್ಲಿ ಹಿಂದಿ ಮತ್ತು ಭಾರತೀಯ ಅಧ್ಯಯನದ ಎರಡು ಐ.ಸಿ.ಸಿ.ಆರ್. ಪೀಠಗಳ ಮರುಸ್ಥಾಪನೆಯ ಕುರಿತು ಒಪ್ಪಂದ.

 

ಬಿ) ಗೌರವಾನ್ವಿತ ಪ್ರಧಾನಮಂತ್ರಿಯವರು ಮಾಡಿದ ಪ್ರಕಟಣೆಗಳು:

 

i. ಟ್ರಿನಿಡಾಡ್ ಮತ್ತು ಟೊಬೆಗೊದಲ್ಲಿ (ಟಿ & ಟಿ) ಭಾರತೀಯ ಸಮುದಾಯದ ಸದಸ್ಯರ 6 ನೇ ತಲೆಮಾರಿನವರೆಗೆ ಭಾರತೀಯ ಮೂಲ (ಒಸಿಐ) ಕಾರ್ಡ್ ಸೌಲಭ್ಯವನ್ನು ವಿಸ್ತರಿಸುವುದು: ಈ ಮೊದಲು, ಈ ಸೌಲಭ್ಯವು ಟಿ & ಟಿಯಲ್ಲಿ 4 ನೇ ತಲೆಮಾರಿನ ಭಾರತೀಯ ಸಮುದಾಯದ ಸದಸ್ಯರಿಗೆ ಲಭ್ಯವಿತ್ತು
ii. ಟಿ & ಟಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 2000 ಲ್ಯಾಪ್ ಟಾಪ್ ಗಳನ್ನು ಉಡುಗೊರೆಯಾಗಿ ನೀಡುವುದು
iii. ನಾಮ್ದೇವ್ಕೊ ಗೆ ಕೃಷಿ ಸಂಸ್ಕರಣಾ ಯಂತ್ರೋಪಕರಣಗಳ (1 ದಶಲಕ್ಷ ಡಾಲರ್ ಮೌಲ್ಯದ) ಔಪಚಾರಿಕ ಹಸ್ತಾಂತರ
iv. 800 ಜನರಿಗೆ 50 ದಿನಗಳವರೆಗೆ ಟಿ & ಟಿ ನಲ್ಲಿ ಕೃತಕ ಅಂಗ ಫಿಟ್ಮೆಂಟ್ ಶಿಬಿರ (ಭಿತ್ತಿಪತ್ರ ಬಿಡುಗಡೆ) ನಡೆಸುವುದು
v. 'ಹೀಲ್ ಇನ್ ಇಂಡಿಯಾ' ಕಾರ್ಯಕ್ರಮದಡಿಯಲ್ಲಿ ಭಾರತದಲ್ಲಿ ವಿಶೇಷ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು
vi. ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಸಹಾಯ ಮಾಡಲು ಟಿ & ಟಿ ಗೆ ಇಪ್ಪತ್ತು (20) ಹಿಮೋಡಯಾಲಿಸಿಸ್ ಘಟಕಗಳು ಮತ್ತು ಎರಡು (02) ಸಮುದ್ರ ಆಂಬ್ಯುಲೆನ್ಸ್ಗಳ ಉಡುಗೊರೆ ನೀಡಲಾಗುವುದು
vii. ಮೇಲ್ಛಾವಣಿಯ ಫೋಟೊವೋಲ್ಟಾಯಿಕ್ ಸೌರ ಫಲಕಗಳನ್ನು ಒದಗಿಸುವ ಮೂಲಕ ಟಿ & ಟಿ ಯ ವಿದೇಶಾಂಗ ಮತ್ತು ಕ್ಯಾರಿಕಮ್ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಚೇರಿಯ ಸೌರವಿದ್ಯುತ್ತೀಕರಣ ಮಾಡಲಾಗುವುದು
viii. ಭಾರತದಲ್ಲಿ ಗೀತಾ ಮಹೋತ್ಸವ ಆಚರಣೆಯೊಂದಿಗೆ ಹೊಂದಿಕೆಯಾಗುವ ಪೋರ್ಟ್ ಆಫ್ ಸ್ಪೇನ್ನಲ್ಲಿರುವ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ಕೋಆಪರೇಷನ್ ನಲ್ಲಿ ಗೀತಾ ಮಹೋತ್ಸವ ಆಚರಣೆ
ix. ಭಾರತದಲ್ಲಿ ಟಿ & ಟಿ ಮತ್ತು ಕೆರಿಬಿಯನ್ ಪ್ರದೇಶದ ʼಪಂಡಿತʼರ ತರಬೇತಿ ನೀಡಲಾಗುವುದು

 

ಸಿ) ಇತರ ಫಲಿತಾಂಶಗಳು:

ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟ (ಸಿ.ಡಿ.ಆರ್.ಐ.) ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿ.ಬಿ.ಎ): ಭಾರತದ ಈ ಜಾಗತಿಕ ಉಪಕ್ರಮಗಳಿಗೆ ಟಿ & ಟಿ ಸೇರುತ್ತಿದೆ ಎಂದು ಘೋಷಿಸಲಾಯಿತು.

 

*****
 


(Release ID: 2142441)