ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿಯಿರಿ) ರಸಪ್ರಶ್ನೆ ವಿಜೇತರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 04 JUL 2025 9:03AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತ್ ಕೋ ಜಾನಿಯೇ (ಭಾರತವನ್ನು ತಿಳಿಯಿರಿ) ರಸಪ್ರಶ್ನೆ ವಿಜೇತ ಯುವಕರಾದ ಶಂಕರ್ ರಾಮ್‌ಜಟ್ಟನ್, ನಿಕೋಲಸ್ ಮರಾಜ್ ಮತ್ತು ವಿನ್ಸ್ ಮಹತೋ ಅವರನ್ನು ಭೇಟಿ ಮಾಡಿದರು.

ಈ ರಸಪ್ರಶ್ನೆಯು ವಿಶ್ವದಾದ್ಯಂತ ವ್ಯಾಪಕವಾದ ಪಾಲ್ಗೊಳ್ಳುವಿಕೆಯನ್ನು ಸೃಷ್ಟಿಸಿದೆ ಮತ್ತು ಭಾರತದೊಂದಿಗೆ ನಮ್ಮ ಅನಿವಾಸಿ ಭಾರತೀಯರ ಸಂಪರ್ಕವನ್ನು ಮತ್ತಷ್ಟು ಗಾಢಗೊಳಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

"ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ನಡೆದ ಭಾರತ್ ಕೋ ಜಾನಿಯೇ (ಭಾರತದ ಬಗ್ಗೆ ತಿಳಿಯಿರಿ) ರಸಪ್ರಶ್ನೆಯಲ್ಲಿ ವಿಜೇತ ಯುವಕರಾದ ಶಂಕರ್ ರಾಮಜತ್ತನ್, ನಿಕೋಲಸ್ ಮರಾಜ್ ಮತ್ತು ವಿನ್ಸ್ ಮಹಾಟೊ ಅವರನ್ನು ಭೇಟಿಯಾದೆ.

ಈ ರಸಪ್ರಶ್ನೆಯು ವಿಶ್ವದಾದ್ಯಂತ ವ್ಯಾಪಕ ಪಾಲ್ಗೊಳ್ಳುವಿಕೆಯನ್ನು ಸೃಷ್ಟಿಸಿದೆ ಮತ್ತು ಭಾರತದೊಂದಿಗೆ ನಮ್ಮ ಅನಿವಾಸಿ ಭಾರತೀಯರ ಸಂಪರ್ಕವನ್ನು ಮತ್ತಷ್ಟು ಗಾಢವಾಗಿಸಿದೆ."

 

 

*****


(Release ID: 2142194) Visitor Counter : 3