ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

“ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ” ಪ್ರಶಸ್ತಿ ಸ್ವೀಕಾರ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 03 JUL 2025 7:06AM by PIB Bengaluru

ಘಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ “ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ” ಅನ್ನು ಸ್ವತಃ ಅಧ್ಯಕ್ಷರು ನನಗೆ ಪ್ರದಾನ ಮಾಡಿರುವುದು ನನ್ನ ಸೌಭಾಗ್ಯ ಮತ್ತು ನನಗೆ ಸಂದ ಮಹಾನ್ ಗೌರವವೆಂದು ಭಾವಿಸುತ್ತೇನೆ.

ಈ ಗೌರವಕ್ಕಾಗಿ ಅಧ್ಯಕ್ಷ ಮಹಾಮಾ ಅವರಿಗೆ, ಘಾನಾ ಸರ್ಕಾರಕ್ಕೆ, ಹಾಗೂ ಇಲ್ಲಿನ ಸಮಸ್ತ ಜನತೆಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. 140 ಕೋಟಿ ಭಾರತೀಯರ ಪರವಾಗಿ ಈ ಮಹಾ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ.

ಈ ಪ್ರಶಸ್ತಿಯನ್ನು ನಮ್ಮ ಯುವಕರ ಮಹತ್ವಾಕಾಂಕ್ಷೆಗಳಿಗೆ, ಅವರ ಉಜ್ವಲ ಭವಿಷ್ಯಕ್ಕೆ, ನಮ್ಮ ಸಮೃದ್ಧ ಸಾಂಸ್ಕೃತಿಕ ವೈವಿಧ್ಯ ಮತ್ತು ಸಂಪ್ರದಾಯಗಳಿಗೆ, ಹಾಗೂ ಭಾರತ ಮತ್ತು ಘಾನಾ ನಡುವಿನ ಸಾವಿರಾರು ವರ್ಷಗಳ ಐತಿಹಾಸಿಕ ಬಾಂಧವ್ಯಗಳಿಗೆ ಸಮರ್ಪಿಸುತ್ತೇನೆ.

ಸೂಚನೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಅಂದಾಜು ಅನುವಾದ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****
 


(Release ID: 2141775)