ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಭಾರತದ ಶ್ರೀಮಂತ ಸಾಂಸ್ಕೃತಿಕ ಕೊಡುಗೆಗಳನ್ನು ಬಿಂಬಿಸಿದ ಪ್ರಧಾನಮಂತ್ರಿ

प्रविष्टि तिथि: 26 JUN 2025 7:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಭಾರತದ ಶ್ರೀಮಂತ ಸಾಂಸ್ಕೃತಿಕ ಕೊಡುಗೆಗಳನ್ನು ಬಿಂಬಿಸಿದರು. ಜತೆಗೆ ಹಳೆಯ ಸಂಪ್ರದಾಯಗಳನ್ನು ಆಧುನಿಕ ವೈಜ್ಞಾನಿಕ ವಿಧಾನಗಳೊಂದಿಗೆ ಸಮನ್ವಯಗೊಳಿಸುವ ನವೀನ ಸ್ಟಾರ್ಟ್‌ಅಪ್‌ಗಳ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಅವರು ಒತ್ತಿ ಹೇಳಿದರು.

ಮನ್‌ ಕಿ ಬಾತ್‌ ಎಕ್ಸ್‌ ಖಾತೆ ಕುರಿತ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದರು:

‘‘ಭಾರತೀಯ ಸಂಸ್ಕೃತಿಯು ಸದೃಢ ಮತ್ತು ಆರೋಗ್ಯವಾಗಿರಲು ಅನೇಕ ಮಾರ್ಗಗಳನ್ನು ನೀಡುತ್ತದೆ.  #MannKiBaat ನಲ್ಲಿ, ನಾವು ಅಂತಹ ಪ್ರಯತ್ನಗಳನ್ನು ಪ್ರದರ್ಶಿಸುತ್ತಿದ್ದೇವೆ, ಅದರಲ್ಲಿ ಅವರ ನವೋದ್ಯಮದಲ್ಲಿ ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಸುಂದರವಾಗಿ ವಿಲೀನಗೊಳಿಸಿರುವ ಒಂದು ಪ್ರಯತ್ನವೂ ಸೇರಿದೆ,’’ ಎಂದಿದ್ದಾರೆ.

 

 

*****


(रिलीज़ आईडी: 2140083) आगंतुक पटल : 6
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu