ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ, ನಮ್ಮ ಯುವ ಶಕ್ತಿಯು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪವನ್ನು ಹೊಂದಿದೆ: ಪ್ರಧಾನಮಂತ್ರಿ
ಹೊಸ ಶಿಕ್ಷಣ ನೀತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ನವೋದ್ಯಮಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರೊಂದಿಗೆ, ನಮ್ಮ ಯುವಕರು 'ಅಭಿವೃದ್ಧಿ ಹೊಂದಿದ ಭಾರತʼ ಎನ್ನುವ ನಿರ್ಣಯದಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ: ಪ್ರಧಾನಮಂತ್ರಿ
ನಮ್ಮ ಯುವ ಶಕ್ತಿಯು ಬೆಳಗಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ನಾವು ಸದಾ ನೀಡುತ್ತೇವೆ, ಅವರು ವಿಕಸಿತ ಭಾರತದ ಪ್ರಮುಖ ನಿರ್ಮಾತೃಗಳು: ಪ್ರಧಾನಮಂತ್ರಿ
Posted On:
06 JUN 2025 10:42AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಾರತದ ಯುವಕರ ಜಾಗತಿಕ ಸಾಧನೆಗಳನ್ನು ಎತ್ತಿ ತೋರಿಸಿದರು, ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು. ಅವುಗಳನ್ನು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪದ ಸಂಕೇತಗಳೆಂದು ವಿವರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಯುವ ಶಕ್ತಿಯ ಅಪ್ರತಿಮ ಶಕ್ತಿ ಮತ್ತು ದೃಢಸಂಕಲ್ಪವು ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡಿದೆ ಎಂದು ಹೇಳಿದರು.
ನವೋದ್ಯಮಗಳು, ವಿಜ್ಞಾನ, ಕ್ರೀಡೆ, ಸಮುದಾಯ ಸೇವೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವ ಭಾರತೀಯರು ನೀಡಿದ ಕೊಡುಗೆಗಳು ಅಸಾಧಾರಣ ಎಂದು ಶ್ರೀ ಮೋದಿ ಹೇಳಿದರು. "ಕಳೆದ 11 ವರ್ಷಗಳಲ್ಲಿ, ಯುವಜನರು ಊಹಿಸಲಾಗದಷ್ಟು ಸಾಧನೆ ಮಾಡಿದ ಗಮನಾರ್ಹ ನಿದರ್ಶನಗಳನ್ನು ನಾವು ನೋಡಿದ್ದೇವೆ" ಎಂದು ಅವರು ಹೇಳಿದರು.
ಯುವಜನರ ಸಬಲೀಕರಣದ ಗುರಿಯನ್ನು ಹೊಂದಿರುವ ಕಳೆದ 11 ವರ್ಷಗಳಲ್ಲಿ ಸರ್ಕಾರದ ನೀತಿಗಳ ಪರಿವರ್ತನಾತ್ಮಕ ಪರಿಣಾಮದ ಬಗ್ಗೆ ಪ್ರಧಾನಮಂತ್ರಿ ಮೋದಿ ಒತ್ತಿ ಹೇಳಿದರು. ಸ್ಟಾರ್ಟ್-ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ನಂತಹ ಸರ್ಕಾರದ ಉಪಕ್ರಮಗಳು ಯುವಜನರ ಸಬಲೀಕರಣವು ರಾಷ್ಟ್ರವು ಮಾಡಬಹುದಾದ ಅತ್ಯಂತ ಶಕ್ತಿಶಾಲಿ ಕಾರ್ಯ ಎನ್ನುವ ದೃಢ ನಂಬಿಕೆಯಲ್ಲಿ ಬೇರೂರಿದೆ ಎಂದು ಶ್ರೀ ಮೋದಿ ಹೇಳಿದರು.
ಕಳೆದ 11 ವರ್ಷಗಳಲ್ಲಿ, ಸರ್ಕಾರವು ಯುವಕರನ್ನು ಸಬಲೀಕರಣಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೊಸ ಶಿಕ್ಷಣ ನೀತಿ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಸ್ಟಾರ್ಟ್-ಅಪ್ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದರೊಂದಿಗೆ, ಯುವಕರು 'ಅಭಿವೃದ್ಧಿ ಹೊಂದಿದ ಭಾರತ' ಎನ್ನುವ ಸಂಕಲ್ಪದಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ ಎಂದು ಹೇಳಿದರು.
ಸರ್ಕಾರವು ಯುವಶಕ್ತಿಯನ್ನು ಬೆಳಗಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಸದಾ ನೀಡುತ್ತದೆ ಎಂದು ಶ್ರೀ ಮೋದಿ ದೃಢಪಡಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;
"ಭಾರತದ ಯುವಕರು ಜಾಗತಿಕವಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಮ್ಮ ಯುವ ಶಕ್ತಿಯು ಚೈತನ್ಯ, ನಾವೀನ್ಯತೆ ಮತ್ತು ದೃಢಸಂಕಲ್ಪವನ್ನು ಹೊಂದಿದೆ . ನಮ್ಮ ಯುವಕರು ಭಾರತದ ಬೆಳವಣಿಗೆಗೆ ಅಪ್ರತಿಮ ಶಕ್ತಿ ಮತ್ತು ದೃಢಸಂಕಲ್ಪದಿಂದ ಚಾಲನೆ ನೀಡಿದ್ದಾರೆ.
ಕಳೆದ 11 ವರ್ಷಗಳಲ್ಲಿ, ಸ್ಟಾರ್ಟ್ಅಪ್ ಗಳು, ವಿಜ್ಞಾನ, ಕ್ರೀಡೆ, ಸಮುದಾಯ ಸೇವೆ, ಸಂಸ್ಕೃತಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಊಹಿಸಲಾಗದಷ್ಟು ಕೆಲಸವನ್ನು ಮಾಡಿದ ಯುವಕರ ಗಮನಾರ್ಹ ನಿದರ್ಶನಗಳನ್ನು ನಾವು ನೋಡಿದ್ದೇವೆ.
ಕಳೆದ 11 ವರ್ಷಗಳಲ್ಲಿ ಯುವ ಸಬಲೀಕರಣದ ಗುರಿಯನ್ನು ಹೊಂದಿರುವ ನೀತಿ ಮತ್ತು ಕಾರ್ಯಕ್ರಮಗಳಲ್ಲಿ ನಿರ್ಣಾಯಕ ಬದಲಾವಣೆ ಕಂಡುಬಂದಿದೆ. ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ರಂತಹ ಸರ್ಕಾರಿ ಉಪಕ್ರಮಗಳು ಯುವಜನರನ್ನು ಸಬಲೀಕರಣಗೊಳಿಸುವುದು ಒಂದು ರಾಷ್ಟ್ರವು ಮಾಡಬಹುದಾದ ಅತ್ಯಂತ ಶಕ್ತಿಶಾಲಿ ಕಾರ್ಯ ಎನ್ನುವ ದೃಢ ನಂಬಿಕೆಯಲ್ಲಿ ಬೇರೂರಿದೆ.
ನಮ್ಮ ಯುವಕರು ವಿಕಸಿತ ಭಾರತವನ್ನು ನಿರ್ಮಿಸುವ ಪ್ರಯತ್ನಗಳನ್ನು ಬಲಪಡಿಸುತ್ತಲೇ ಇರುತ್ತಾರೆ ಎಂದು ನನಗೆ ವಿಶ್ವಾಸವಿದೆ.
#11YearsOfYuvaShakti"
"पिछले 11 वर्षों में हमारी सरकार ने युवा शक्ति को सशक्त बनाने के लिए निरंतर प्रयास किए हैं। नई शिक्षा नीति के साथ कौशल विकास और स्टार्ट-अप्स पर फोकस से हमारे युवा 'विकसित भारत' के संकल्प के अहम भागीदार बने हैं। ये हमारे लिए अत्यंत प्रसन्नता की बात है कि आज देश का युवा राष्ट्र निर्माण में अग्रणी भूमिका निभा रहा है।
#11YearsOfYuvaShakti"
ನಮ್ಮ ಯುವ ಶಕ್ತಿಯು ಬೆಳಗಲು ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ನಾವು ಸದಾ ನೀಡುತ್ತೇವೆ, ಅವರು ವಿಕಸಿತ ಭಾರತದ ಪ್ರಮುಖ ನಿರ್ಮಾತೃಗಳು. #11YearsOfYuvaShakti"
*****
(Release ID: 2134468)
Read this release in:
Odia
,
English
,
Urdu
,
Hindi
,
Nepali
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam