ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ವಿಶ್ವ ಪರಿಸರ ದಿನದಂದು ನವದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಮಂತ್ರಿ ಅವರು ಸಿಂದೂರ ಸಸಿ ನೆಟ್ಟರು
                    
                    
                        
                    
                
                
                    Posted On:
                05 JUN 2025 11:48AM by PIB Bengaluru
                
                
                
                
                
                
                ವಿಶ್ವ ಪರಿಸರ ದಿನದಂದು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಕುಂಕುಮದ (ಸಿಂದೂರ) ಸಸಿ ನೆಟ್ಟರು. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅಸಾಧಾರಣ ಧೈರ್ಯ ಮತ್ತು ದೇಶಭಕ್ತಿಯನ್ನು ಪ್ರದರ್ಶಿಸಿದ ಗುಜರಾತಿನ ಕಚ್ ನ ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರು ಈ ಸಸಿಯನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದರು.
ಗುಜರಾತ್ ಗೆ ತಮ್ಮ ಇತ್ತೀಚಿನ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಕುಂಕುಮ (ಸಿಂದೂರ) ಸಸ್ಯದ ಉಡುಗೊರೆ ನಮ್ಮ ದೇಶದ ಮಹಿಳಾ ಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ ಎಂದು ಹೇಳಿದರು.
ಎಕ್ಸ್ ನ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಮೋದಿಯವರು ಹೀಗೆ ಹೇಳಿದರು;
"1971ರ ಯುದ್ಧದಲ್ಲಿ ಧೈರ್ಯ ಮತ್ತು ಶೌರ್ಯಕ್ಕೆ ಅದ್ಭುತ ಉದಾಹರಣೆ ನೀಡಿದ ಕಚ್ ನ ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರು ಇತ್ತೀಚೆಗೆ ಗುಜರಾತ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ಸಿಂದೂರ ಗಿಡವನ್ನು ಉಡುಗೊರೆಯಾಗಿ ನೀಡಿದರು. ಇಂದು, ವಿಶ್ವ ಪರಿಸರ ದಿನದಂದು, ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ನಿವಾಸದಲ್ಲಿ ಆ ಗಿಡವನ್ನು ನೆಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಗಿಡ ನಮ್ಮ ದೇಶದ ಮಹಿಳಾ ಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ."
 
 
*****
                
                
                
                
                
                (Release ID: 2134164)
                Visitor Counter : 6
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            Marathi 
                    
                        ,
                    
                        
                        
                            हिन्दी 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Bengali-TR 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam