ಪ್ರಧಾನ ಮಂತ್ರಿಯವರ ಕಛೇರಿ
ಆಂಧ್ರಪ್ರದೇಶದ ಯೋಗಾಂಧ್ರ 2025 ಉಪಕ್ರಮಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ
प्रविष्टि तिथि:
03 JUN 2025 8:23PM by PIB Bengaluru
ಆಂಧ್ರಪ್ರದೇಶದ ಚಿತ್ತೂರು ಬಳಿ ನಡೆದ ಯೋಗಾಂಧ್ರ 2025 ಕಾರ್ಯಕ್ರಮದಲ್ಲಿ ಯೋಗ ಉತ್ಸಾಹಿಗಳ ರೋಮಾಂಚಕ ಭಾಗವಹಿಸುವಿಕೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ (IDY) 2025ರ ಅಂಗವಾಗಿ ಆಂಧ್ರಪ್ರದೇಶದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪುಲಿಗುಂಡು ಅವಳಿ ಬೆಟ್ಟಗಳ ನಡುವೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ 2,000 ಕ್ಕೂ ಹೆಚ್ಚು ಯೋಗ ಉತ್ಸಾಹಿಗಳು ಪಾಲ್ಗೊಂಡಿದ್ದರು.
ಕೇಂದ್ರ ಸಚಿವರಾದ ಶ್ರೀ ಪ್ರತಾಪ್ರಾವ್ ಜಾಧವ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್ ಅನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
"2025ರ ಯೋಗ ದಿನಾಚರಣೆಯತ್ತ ಉತ್ಸಾಹ ಹೆಚ್ಚುತ್ತಿರುವುದನ್ನು ನೋಡಿ ಸಂತಸವಾಗಿದೆ. ಯೋಗವನ್ನು ಜನಪ್ರಿಯಗೊಳಿಸಲು #Yogandhra2025 ಆಂಧ್ರ ಪ್ರದೇಶದ ಜನರ ಶ್ಲಾಘನೀಯ ಪ್ರಯತ್ನವಾಗಿದೆ. ಇದೇ 21 ರಂದು ಆಂಧ್ರ ಪ್ರದೇಶದಲ್ಲಿ ಯೋಗ ದಿನವನ್ನು ಆಚರಿಸಲು ನಾನು ಎದುರು ನೋಡುತ್ತಿದ್ದೇನೆ.
ಯೋಗ ದಿನವನ್ನು ಆಚರಿಸುವಂತೆ ಮತ್ತು ಯೋಗವನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ.
@ncbn"
*****
(रिलीज़ आईडी: 2133760)
आगंतुक पटल : 14
इस विज्ञप्ति को इन भाषाओं में पढ़ें:
Malayalam
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu