ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದಂದು ರಾಜ್ಯದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

ಪ್ರಕಟಣಾ ದಿನಾಂಕ: 02 JUN 2025 9:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದ ಅಂಗವಾಗಿ ಇಂದು ತೆಲಂಗಾಣದ ಜನತೆಗೆ ಶುಭಾಶಯ ಕೋರಿದ್ದಾರೆ. "ರಾಷ್ಟ್ರದ ಪ್ರಗತಿಗೆ ಅಸಂಖ್ಯಾತ ಕೊಡುಗೆಗಳನ್ನು ನೀಡುವ ಮೂಲಕ ರಾಜ್ಯವು ಹೆಸರುವಾಸಿಯಾಗಿದೆ. ರಾಜ್ಯದ ಜನರ 'ಜೀವನ ಸುಲಲಿತಗೊಳಿಸಲು' ಕಳೆದ ದಶಕದಲ್ಲಿ, ಎನ್‌ಡಿಎ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ತೆಲಂಗಾಣದ ಅದ್ಭುತ ಜನರಿಗೆ ಅವರ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು. ರಾಷ್ಟ್ರದ ಪ್ರಗತಿಗೆ ರಾಜ್ಯವು ಅಸಂಖ್ಯಾತ ಕೊಡುಗೆಗಳನ್ನು ನೀಡಿ ಹೆಸರುವಾಸಿಯಾಗಿದೆ. ರಾಜ್ಯದ ಜನರಿಗೆ 'ಸುಲಲಿತ ಜೀವನ' ಉತ್ತೇಜಿಸಲು ಕಳೆದ ದಶಕದಲ್ಲಿ, ಎನ್‌ಡಿಎ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಜನರು ಯಶಸ್ಸು ಮತ್ತು ಸಮೃದ್ಧಿಯನ್ನು ಹೊಂದಲಿ."

 

 

*****


(ಪ್ರಕಟಣೆ ಐ.ಡಿ.: 2133291) ವಿಸಿಟರ್ ಕೌಂಟರ್ : 14