ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಬಲವಾದ ಸಂದೇಶವನ್ನು ಸರ್ವಪಕ್ಷ ನಿಯೋಗಗಳು ಜಗತ್ತಿಗೆ ನೀಡಲಿವೆ 

Posted On: 17 MAY 2025 9:19AM by PIB Bengaluru

ಆಪರೇಷನ್ ಸಿಂದೂರ್ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿರಂತರ ಹೋರಾಟದ ಸಂದರ್ಭದಲ್ಲಿ, ಏಳು ಸರ್ವಪಕ್ಷ ನಿಯೋಗಗಳು ಈ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ದೇಶಗಳಿಗೆ ಭೇಟಿ ನೀಡಲಿವೆ.

ಸರ್ವಪಕ್ಷ ನಿಯೋಗಗಳು ಎಲ್ಲಾ ರೀತಿಯಲ್ಲಿ ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಭಾರತದ ರಾಷ್ಟ್ರೀಯ ಒಮ್ಮತ ಮತ್ತು ದೃಢನಿಶ್ಚಯದ ವಿಧಾನವನ್ನು ಪ್ರದರ್ಶಿಸುತ್ತವೆ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ದೇಶದ ಬಲವಾದ ಸಂದೇಶವನ್ನು ಅವರು ಜಗತ್ತಿಗೆ ನೀಡುವರು.

ವಿವಿಧ ಪಕ್ಷಗಳ ಸಂಸತ್ ಸದಸ್ಯರು, ಪ್ರಮುಖ ರಾಜಕೀಯ ವ್ಯಕ್ತಿಗಳು ಮತ್ತು ಹೆಸರಾಂತ ರಾಜತಾಂತ್ರಿಕರು ಪ್ರತಿಯೊಂದು ನಿಯೋಗದ ಭಾಗವಾಗಿರುತ್ತಾರೆ.

ಕೆಳಗಿನ ಸಂಸತ್ತಿನ ಸದಸ್ಯರು ಏಳು ನಿಯೋಗಗಳನ್ನು ಮುನ್ನಡೆಸುತ್ತಾರೆ:

1) ಶ್ರೀ ಶಶಿ ತರೂರ್, ಐ.ಎನ್.ಸಿ

2) ಶ್ರೀ ರವಿಶಂಕರ್ ಪ್ರಸಾದ್, ಬಿಜೆಪಿ

3) ಶ್ರೀ ಸಂಜಯ್ ಕುಮಾರ್ ಝಾ, ಜೆಡಿಯು

4) ಶ್ರೀ ಬೈಜಯಂತ್ ಪಾಂಡ, ಬಿಜೆಪಿ

5) ಶ್ರೀಮತಿ ಕನಿಮೋಳಿ ಕರುಣಾನಿಧಿ, ಡಿಎಂಕೆ

6) ಶ್ರೀಮತಿ ಸುಪ್ರಿಯಾ ಸುಳೆ, ಎನ್‌ ಸಿ ಪಿ

7) ಶ್ರೀ ಶ್ರೀಕಾಂತ್ ಏಕನಾಥ್ ಶಿಂಧೆ, ಶಿವಸೇನೆ

 

*****


(Release ID: 2129335)