ಪ್ರಧಾನ ಮಂತ್ರಿಯವರ ಕಛೇರಿ
ಸಿಕ್ಕಿಂ ರಾಜ್ಯದ 50ನೇ ರಾಜ್ಯೋತ್ಸವದ ಪ್ರಯುಕ್ತ ಸಿಕ್ಕಿಂ ಜನತೆಗೆ ಪ್ರಧಾನಮಂತ್ರಿ ಶುಭಾಶಯ
Posted On:
16 MAY 2025 10:13AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಕ್ಕಿಂ ರಾಜ್ಯತ್ವ ದಿನದಂದು ಜನತೆಗೆ ಶುಭಾಶಯ ಕೋರಿದ್ದಾರೆ. "ಈ ವರ್ಷ, ಸಿಕ್ಕಿಂ ರಾಜ್ಯತ್ವದ 50ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದರಿಂದ ಈ ಸಂದರ್ಭವು ಇನ್ನಷ್ಟು ವಿಶೇಷವಾಗಿದೆ! ಸಿಕ್ಕಿಂ ರಾಜ್ಯ ಪ್ರಶಾಂತ ಸೌಂದರ್ಯ, ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಶ್ರಮಶೀಲ ಜನರಿಂದ ಕೂಡಿದೆ" ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿಗಳು X ನಲ್ಲಿ ಹೀಗೆ ಬರೆದಿದ್ದಾರೆ;
ಸಿಕ್ಕಿಂನ ಜನರಿಗೆ ಅವರ ರಾಜ್ಯೋತ್ಸವದ ದಿನದ ಹಾರ್ದಿಕ ಶುಭಾಶಯಗಳು! ಈ ವರ್ಷ, ಸಿಕ್ಕಿಂ ರಾಜ್ಯತ್ವದ 50ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದರಿಂದ ಈ ಸಂದರ್ಭವು ಇನ್ನಷ್ಟು ವಿಶೇಷವಾಗಿದೆ!
ಸಿಕ್ಕಿಂ ಪ್ರಶಾಂತ ಸೌಂದರ್ಯ, ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಶ್ರಮಶೀಲ ಜನರೊಂದಿಗೆ ಸಂಬಂಧ ಹೊಂದಿದೆ. ಇದು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಈ ಸುಂದರ ರಾಜ್ಯದ ಜನರು ಇನ್ನಷ್ಟು ಅಭಿವೃದ್ಧಿ ಹೊಂದಲಿ.”
*****
(Release ID: 2129085)
Read this release in:
English
,
Urdu
,
Hindi
,
Nepali
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam