ವಾರ್ತಾ ಮತ್ತು ಪ್ರಸಾರ ಸಚಿವಾಲಯ
“ಡಿಜಿಟಲ್ ರೇಡಿಯೋ ಭವಿಷ್ಯದ ಮಾಧ್ಯಮ; ಅನಲಾಗ್ ಮಾಧ್ಯಮವೂ ಜೊತೆಯಲ್ಲಿರಬೇಕು” – ವೇವ್ಸ್ 2025ರಲ್ಲಿ ನಡೆದ ಚರ್ಚೆ
“ಉತ್ತಮ ಕಂಟೆಂಟ್, ಸಹಯೋಗಗಳು, ವಿಭಿನ್ನ ವೇದಿಕೆಗಳ ಪ್ರಚಾರಗಳು ರೇಡಿಯೊಗೆ ಶುಭ ಸೂಚನೆಗಳಾಗಿವೆ”
‘ರೇಡಿಯೋ ಮರುಕಲ್ಪನೆ: ಡಿಜಿಟಲ್ ಯುಗದಲ್ಲಿ ಅಭಿವೃದ್ಧಿʼ- ವೇವ್ಸ್ 2025ರಲ್ಲಿ ಸಮೃದ್ಧ ಚರ್ಚೆ
Posted On:
02 MAY 2025 3:09PM
|
Location:
PIB Bengaluru
'ರೇಡಿಯೋ ಮರುಕಲ್ಪನೆ: ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ' ಎಂಬ ವಿಷಯದ ಕುರಿತು ಇಂದು ವೇವ್ಸ್ 2025ರಲ್ಲಿ ನಡೆದ ಗೋಷ್ಠಿಯು ಜಾಗತಿಕ ತಜ್ಞರನ್ನು ಒಟ್ಟುಗೂಡಿಸಿ ಒಳನೋಟವುಳ್ಳ ಚರ್ಚೆಯಲ್ಲಿ ತೊಡಗಿಸಿತು.
ವಾಣಿಜ್ಯ ರೇಡಿಯೋದ ಪ್ರವರ್ತಕ ಜಾಕ್ವೆಲಿನ್ ಬೈರ್‌ಹಾರ್ಸ್ಟ್, ಡಿಜಿಟಲ್ ರೇಡಿಯೋ ಮಾಂಡಿಯೇಲ್ (ಡಿ ಆರ್ ಎಂ) ಅಧ್ಯಕ್ಷೆ ರುಕ್ಸಾಂಡ್ರಾ ಒಬ್ರೆಜಾ, ಡಿ ಆರ್ ಎಂ ನ ಉಪಾಧ್ಯಕ್ಷ ಅಲೆಕ್ಸಾಂಡರ್ ಜಿಂಕ್, ಪ್ರಸಾರ ಭಾರತಿಯ ಮಾಜಿ ಸಿಇಒ ಮತ್ತು ಡೀಪ್ ಟೆಕ್ ಫಾರ್ ಇಂಡಿಯಾದ ಸಹ-ಸಂಸ್ಥಾಪಕ ಶಶಿ ಶೇಖರ್ ವೆಂಪತಿ ಮತ್ತು ಹೆಸರಾಂತ ಪ್ರಸಾರ ತಂತ್ರಜ್ಞಾನ ತಜ್ಞ ಟೆಡ್ ಲಾವರ್ಟಿ ಸೇರಿದಂತೆ ಅನೇಕರು ಗೋಷ್ಠಿಯಲ್ಲಿ ಇದ್ದರು. ರೆಡ್ ಎಫ್ ಎಂ ನ ನಿರ್ದೇಶಕಿ ಮತ್ತು ಸಿಒಒ ನಿಶಾ ನಾರಾಯಣನ್ ಅವರು ತಜ್ಞರೊಂದಿಗಿನ ಸಂವಾದವನ್ನು ನಡೆಸಿಕೊಟ್ಟರು ಮತ್ತು ರೇಡಿಯೋ ಪ್ರಸಾರ ಉದ್ಯಮದ ಮೇಲೆ ಪ್ರಭಾವ ಬೀರುವ ಅಂಶಗಳ ಮೇಲೆ ಬೆಳಕು ಚೆಲ್ಲಿದರು.
'ಡಿಜಿಟಲ್ ರೇಡಿಯೋ ಭವಿಷ್ಯದ ಮಾಧ್ಯಮ, ಆದರೆ ಅನಲಾಗ್ ಕೂಡ ಜೊತೆಯಲ್ಲಿರಬೇಕು'
ಡಿಜಿಟಲ್ ರೇಡಿಯೋ ಭವಿಷ್ಯದಲ್ಲಿ ಪ್ರಾಥಮಿಕ ಸ್ವರೂಪವಾಗುವ ಸಾಧ್ಯತೆಯಿದೆ ಎಂದು ಜಾಕ್ವೆಲಿನ್ ಬೈರ್‌ಹಾರ್ಸ್ಟ್ ಅಭಿಪ್ರಾಯಪಟ್ಟರು. ಏಕೆಂದರೆ ಇದು ಉತ್ತಮ ಧ್ವನಿ ಗುಣಮಟ್ಟ, ಹೆಚ್ಚು ವಿಶ್ವಾಸಾರ್ಹ ಪ್ರಸರಣ ಮತ್ತು ಮಲ್ಟಿಮೀಡಿಯಾ ಅಂಶಗಳನ್ನು ಸಂಯೋಜಿಸುವ ಸಾಮರ್ಥ್ಯದಂತಹ ಅನುಕೂಲಗಳನ್ನು ನೀಡುತ್ತದೆ ಎಂದು ಅವರು ಹೇಳಿದರು. "ಕೆಲವು ಸಂದರ್ಭಗಳಲ್ಲಿ ವಿಶೇಷವಾಗಿ ಸರಳ ಸಂವಹನಕ್ಕಾಗಿ ಮತ್ತು ಸೀಮಿತ ಡಿಜಿಟಲ್ ಮೂಲಸೌಕರ್ಯ ಹೊಂದಿರುವ ಪ್ರದೇಶಗಳಲ್ಲಿ ಅನಲಾಗ್ ರೇಡಿಯೋ ಪ್ರಸ್ತುತವಾಗಿದ್ದರೂ, ಡಿಜಿಟಲ್ ಪ್ರಸಾರದತ್ತ ಬದಲಾವಣೆ ಮುಂದುವರೆದಿದೆ ಮತ್ತು ಮುಂದುವರಿಯುವ ನಿರೀಕ್ಷೆಯಿದೆ" ಎಂದು ಅವರು ಅಭಿಪ್ರಾಯಪಟ್ಟರು. ಅನಲಾಗ್ ನಿಂದ ಡಿಜಿಟಲ್ ಗೆ ಬದಲಾಯಿಸುವುದರಿಂದ ವೆಚ್ಚ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.
ಆದಾಗ್ಯೂ, ಜಾಕ್ವೆಲಿನ್ ಬೈರ್‌ಹಾರ್ಸ್ಟ್ ಮತ್ತು ಅಲೆಕ್ಸಾಂಡರ್ ಜಿಂಕ್ ಗಮನಿಸಿದಂತೆ, ಭಯೋತ್ಪಾದಕ ದಾಳಿಗಳು, ಪ್ರವಾಹಗಳು ಮುಂತಾದ ತುರ್ತು ಸಂದರ್ಭಗಳಲ್ಲಿ ಪ್ರಸಾರವು ಒಂದು ಪ್ರಮುಖ ಬೆಂಬಲ ಕೇಂದ್ರವಾಗಿದೆ. ಡಿಜಿಟಲ್ ನೆಟ್‌ವರ್ಕ್‌ಗಳು ಯಾವಾಗಲೂ ಕಾರ್ಯನಿರ್ವಹಿಸದಿರಬಹುದು. ಭಾರತದಲ್ಲಿ 600,000 ಹಳ್ಳಿಗಳನ್ನು ತಲುಪುವ ಅನಲಾಗ್ ರೇಡಿಯೊವನ್ನು ಸಂರಕ್ಷಿಸುವುದು ಮುಖ್ಯ ಎಂದು ಡಿ ಆರ್ ಎಂ ಅಧ್ಯಕ್ಷೆ ರುಕ್ಸಾಂಡ್ರಾ ಒಬ್ರೆಜಾ ಹೇಳಿದರು. ತುರ್ತು ಸಂದರ್ಭಗಳಲ್ಲಿ, ನಿಸ್ಸಂದೇಹವಾಗಿ ಪ್ರಸಾರ ರೇಡಿಯೋಗಳು ಹೆಚ್ಚಿನ ಜನಸಂಖ್ಯೆಯನ್ನು ತಲುಪುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದರು. "ಹಳೆಯ ತಂತ್ರಜ್ಞಾನಗಳನ್ನು ಅಡ್ಡಿಪಡಿಸದೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದು ಸವಾಲು" ಎಂದು ರುಕ್ಸಾಂಡ್ರಾ ಒಬ್ರೆಜಾ ಹೇಳಿದರು.
ರೇಡಿಯೋ ಸಂವಹನದ ಹೊಸ 5ಸಿ ಗಳು
ಜಾಕ್ವೆಲಿನ್ ಬೈರ್‌ಹಾರ್ಸ್ಟ್ ಸಂಕ್ಷಿಪ್ತತೆ, ಸ್ಪಷ್ಟತೆ, ವಿಶ್ವಾಸ, ನಿಯಂತ್ರಣ ಮತ್ತು ಸಾಮರ್ಥ್ಯದಂತಹ ಶಾಸ್ತ್ರೀಯ 5ಸಿ ಗಳನ್ನು ಉಲ್ಲೇಖಿಸಿದರು ಮತ್ತು ಶ್ರೀಮಂತ ಡಿಜಿಟಲ್ ರೇಡಿಯೋ ಮೂಲಸೌಕರ್ಯದ ಯುಗದಲ್ಲಿ ಅಗತ್ಯವಾದ ಹೊಸ 5ಸಿ ಗಳೊಂದಿಗೆ ಅವುಗಳನ್ನು ಸಂಯೋಜಿಸಿದರು. ಇದರಲ್ಲಿ ವ್ಯಾಪ್ತಿ, ವಿಷಯ, ಗ್ರಾಹಕ ಸಾಧನಗಳು, ಕಾರುಗಳು, ಸಂವಹನಗಳು ಸೇರಿವೆ. ಕೇಳುಗರು ನೆಲೆಸಿರುವ ಸರಿಯಾದ ಪ್ರದೇಶಗಳನ್ನು ರೇಡಿಯೋ ನೆಟ್‌ವರ್ಕ್‌ಗಳು ಒಳಗೊಳ್ಳುವಂತೆ ನೋಡಿಕೊಳ್ಳಲು ಅವರು ಸಲಹೆ ನೀಡಿದರು.
ವಲಯವನ್ನು ಉತ್ಕೃಷ್ಟಗೊಳಿಸಲು ಸಂಘಟಿತ ಪ್ರಯತ್ನಗಳನ್ನು ಮಾಡುವಲ್ಲಿ ಕೇಳುಗರ ಮಾಪನವು ಒಂದು ಪ್ರಮುಖ ಹೆಜ್ಜೆಯಾಗಿದೆ. ಯುರೋಪ್ ನಲ್ಲಿ ರೇಡಿಯೋ ಪ್ಲೇಯರ್ ಮತ್ತು ರೇಡಿಯೋ ಎಫ್‌ಎಂನಂತಹ ರೇಡಿಯೋ ಪ್ಲೇಯಿಂಗ್ ಅಪ್ಲಿಕೇಶನ್ ಗಳ ಕುರಿತು ಟೆಡ್ ಲೆವೆಟ್ಟಿ ಮಾತನಾಡಿದರು, ಇವು ಗೌಪ್ಯತೆಯನ್ನು ಉಲ್ಲಂಘಿಸದೆ ಕೇಳುಗರನ್ನು ಅಳೆಯಲು ಬಳಸಬಹುದಾದ ವೈಶಿಷ್ಟ್ಯಗಳನ್ನು ನೀಡುತ್ತವೆ ಎಂದು ಹೇಳಿದರು. ಭಾರತದಲ್ಲಿ ರೇಡಿಯೋ ಕೇಳುಗರ ಹಾಟ್‌ಸ್ಪಾಟ್ ಗಳನ್ನು ವಿಶ್ಲೇಷಿಸಲು ಇಂತಹ ಕಾರ್ಯಕ್ರಮಗಳು ಮತ್ತು ಅಪ್ಲಿಕೇಶನ್ ಗಳು, ಮಾದರಿ ಸಮೀಕ್ಷೆಗಳು ಮತ್ತು ಕೇಳುಗರ ದಿನಚರಿಗಳನ್ನು ಸಹ ಬಳಸಬಹುದು ಎಂದು ಅವರು ಸಲಹೆ ನೀಡಿದರು.
ಉತ್ತಮ ಕಂಟೆಂಟ್, ಸಹಯೋಗ, ವಿಭಿನ್ನ ವೇದಿಕೆ ಪ್ರಚಾರ ಉತ್ತವಾಗಿ ಕೆಲಸ ಮಾಡುತ್ತವೆ
'ಕಂಟೆಂಟ್ ಈಸ್ ದ ಕಿಂಗ್' - ಈ ವಲಯದ ಈ ಯಶಸ್ಸಿನ ಮಂತ್ರವನ್ನು ತಜ್ಞರು ಒಪ್ಪಿಕೊಂಡಿದ್ದಾರೆ. ವಿವಿಧ ಕಂಟೆಂಟ್ ಗಳಿಗೆ ಹೆಚ್ಚಿನ ಪರವಾನಗಿ ಶುಲ್ಕ ವಿಧಿಸುವುದರಿಂದ ಖಾಸಗಿ ಎಫ್ ಎಂ ಗಳು ಎದುರಿಸುತ್ತಿರುವ ಸಮಸ್ಯೆಯನ್ನು ನಿಶಾ ನಾರಾಯಣ್ ಎತ್ತಿ ತೋರಿಸಿದರು. ಪರಿಣಾಮವಾಗಿ, ಅವುಗಳು ಹೆಚ್ಚಾಗಿ ಇತರ ಕಂಟೆಂಟ್ ವರ್ಗಗಳಿಗಿಂತ ಕಡಿಮೆ ಪರವಾನಗಿ ಶುಲ್ಕವನ್ನು ಹೊಂದಿರುವ ಜನಪ್ರಿಯ ಸಂಗೀತವನ್ನು ನೀಡುತ್ತಾರೆ. ಖಾಸಗಿ ಎಫ್ ಎಂ ಗಳಿಗೆ ವಿಷಯದಲ್ಲಿ ವೈವಿಧ್ಯತೆಯನ್ನು ತರುವ ಅಗತ್ಯದ ಬಗ್ಗೆ ರೆಡ್ ಎಫ್ ಎಂ ಸಿಒಒ ಸಹಮತ ವ್ಯಕ್ತಪಡಿಸಿದರು.
ಉತ್ತಮ, ಉಪಯುಕ್ತ ಕಂಟೆಂಟ್ ಮೌಲ್ಯದ ಬಗ್ಗೆ ಮಾತನಾಡಿದ ಜಾಕ್ವೆಲಿನ್ ಬೈರ್‌ಹಾರ್ಸ್ಟ್, ಬ್ರಿಟಿಷ್ ಡಿಜಿಟಲ್ ರೇಡಿಯೋ ಸ್ಟೇಷನ್ ಅಬ್ಸೊಲ್ಯೂಟ್ ರೇಡಿಯೊದ ಯಶಸ್ಸಿನ ಕಥೆಯನ್ನು ಎತ್ತಿ ತೋರಿಸಿದರು. ಇದು 70, 80 ಮತ್ತು 90 ರ ದಶಕಗಳಲ್ಲಿ ವಿವಿಧ ಶೈಕ್ಷಣಿಕ ಮತ್ತು ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಬೆಳೆದು ಆದಾಯವನ್ನು ಗಳಿಸಿತು, ಇದು ಅವರ ಪ್ರೇಕ್ಷಕರಿಗೆ ಪ್ರಯೋಜನವನ್ನು ನೀಡಿತು ಎಂದು ಹೇಳಿದರು.
ಡಿಜಿಟಲ್ ರೇಡಿಯೋ ಆಡಿಯೋ ಕಂಟೆಂಟ್ ಗಿಂತ ಹೆಚ್ಚಿನದನ್ನು ನೀಡಬೇಕಾಗಿದೆ - ಇದು ಕೇಳುಗರ ನೆಲೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾದ ದೃಶ್ಯ ಮತ್ತು ಪಠ್ಯ ಅಪ್ಲಿಕೇಶನ್ ಗಳನ್ನು ಹೊಂದಿದೆ ಎಂದು ಅಲೆಕ್ಸಾಂಡರ್ ಜಿಂಗ್ ಡಿಜಿಟಲ್ ರೇಡಿಯೊದ ಮತ್ತೊಂದು ಆಯಾಮವನ್ನು ನೆನಪಿಸಿದರು.
ರೇಡಿಯೋ ಕೇಳುಗರ ವ್ಯಾಪ್ತಿಯನ್ನು ಬೆಂಬಲಿಸಲು ಪೂರಕ ವ್ಯವಸ್ಥೆಯ ಅಗತ್ಯವಿದೆ ಎಂದು ಟೆಡ್ ಲಾವರ್ಟಿ ಒತ್ತಾಯಿಸಿದರು. ಕಡಿಮೆ ವೆಚ್ಚದಲ್ಲಿ ಸಾಧನಗಳನ್ನು ತಯಾರಿಸುವುದು, ಆಂಡ್ರಾಯ್ಡ್ ನಂತಹ ಅನುಕೂಲಕರ ವೇದಿಕೆಯನ್ನು ಹೊಂದಿರುವುದು ಅವರು ಹೇಳಿದ ಕೆಲವು ಕ್ರಮಗಳು. ಬಾಹ್ಯ ಹಾರ್ಡ್‌ವೇರ್ ಘಟಕಗಳ ಅಸ್ತಿತ್ವದ ಜೊತೆಗೆ, ವಿಷಯ ವೈವಿಧ್ಯತೆಯು ಸಹ ಮುಖ್ಯವಾಗಿದೆ, ಏಕೆಂದರೆ ಇದು ಕೇಳುಗರ ವಿವಿಧ ಉಪ-ಗುಂಪುಗಳನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆ ಮತ್ತು ಡಿಜಿಟಲ್ ರೇಡಿಯೋ
ಡಿಜಿಟಲ್ ರೇಡಿಯೋ ಹೆಚ್ಚು ಪರಿಣಾಮಕಾರಿ ಮಾಡ್ಯುಲೇಷನ್ ತಂತ್ರಗಳನ್ನು ಬಳಸಿಕೊಂಡು ಮತ್ತು ಏಕ-ಆವರ್ತನ (ಸಿಂಗಲ್ ಫ್ರೀಕ್ವೆನ್ಸಿ) ನೆಟ್‌ವರ್ಕ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಗಮನಾರ್ಹ ವಿದ್ಯುತ್ ಉಳಿತಾಯವನ್ನು ಸಾಧಿಸಬಹುದು. ಆದಾಗ್ಯೂ, ಎಫ್ ಎಂ ಕೇಂದ್ರಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಕೆಲವು ಯುರೋಪಿಯನ್ ರಾಷ್ಟ್ರಗಳು ಎಫ್ ಎಂ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮತ್ತು ಸಂಪೂರ್ಣ ಡಿಜಿಟಲೀಕರಣಕ್ಕೆ ಹೋಗಲು ಪ್ರಯತ್ನಿಸಿವೆ, ಆದರೆ ಅದು ಪವಿತ್ರ ಶಿಲೆಯಲ್ಲ ಎಂದು ರುಕ್ಸಾಂಡ್ರಾ ಒಬ್ರೆಜಾ ಹೇಳಿದರು. ನೀತಿ ಮಧ್ಯಸ್ಥಿಕೆಗಳಿಗಾಗಿ ಸರ್ಕಾರದೊಂದಿಗೆ ಮಾತನಾಡುವಾಗ ವಾಣಿಜ್ಯ ರೇಡಿಯೋ ಕೇಂದ್ರಗಳ ಅಗತ್ಯತೆಗಳನ್ನು ಕಂಡುಹಿಡಿಯುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.

ಭಾರತದಲ್ಲಿ ರೇಡಿಯೋ ಉದ್ಯಮ - ಪೂರಕವ್ಯವಸ್ಥೆಯನ್ನು ಬಲಪಡಿಸುವ ಅವಕಾಶ
ಯುರೋಪ್ ನಲ್ಲಿ ಸಾರ್ವಜನಿಕ ನೀತಿಗಳು ಡಿಜಿಟಲ್ ರೇಡಿಯೊದ ವ್ಯಾಪ್ತಿಯನ್ನು ಬಳಸಿಕೊಳ್ಳುತ್ತಿವೆ ಎಂದು ರುಕ್ಸಾಂಡ್ರಾ ಒಬ್ರೆಜಾ ಹೇಳಿದರು. ಕಾರುಗಳಲ್ಲಿ ರೇಡಿಯೋ, ಮೊಬೈಲ್ ಫೋನ್, ಮಾರುಕಟ್ಟೆಯಲ್ಲಿ ರೇಡಿಯೋ ಸೆಟ್ ಗಳ ಸುಲಭ ಲಭ್ಯತೆ ಆ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಗಳಾಗಿವೆ. ಭಾರತದಲ್ಲಿ ಡಿಜಿಟಲ್ ರೇಡಿಯೋ ಒಕ್ಕೂಟವನ್ನು ನಿರ್ಮಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಿಜಿಟಲ್ ರೇಡಿಯೊದಲ್ಲಿ ಭಾರತವು ಒಂದು ಪ್ರೇರಕ ಶಕ್ತಿಯಾಗಿದೆ ಎಂದು ರುಕ್ಸಾಂಡ್ರಾ ಒಬ್ರೇಜಾ ಹೇಳಿದರು. ಡಿಜಿಟಲ್ ನಿಂದ ಟೆರೆಸ್ಟ್ರಿಯಲ್ ರೇಡಿಯೋ ಮುಖ್ಯ ಮತ್ತು ಡಿಜಿಟಲ್ ನಿಂದ ಮೊಬೈಲ್ ಗೆ ಕೂಡ ಮುಖ್ಯ. "ಪ್ರಸಾರ ಭಾರತಿ ಸುಮಾರು 900 ಮಿಲಿಯನ್ ಜನರನ್ನು ತಲುಪಿದೆ. ಈ ವಲಯದಲ್ಲಿ ಭಾರತವು ಚಿನ್ನದ ಬಾತುಕೋಳಿಯಾಗಿದೆ. ಭಾರತವು ಶತಕೋಟಿ ಮೊಬೈಲ್ ಫೋನ್ ಬಳಕೆದಾರರನ್ನು ಹೊಂದಿರುವ ಅನುಕೂಲಗಳನ್ನು ಹೊಂದಿದೆ. ಈ ಅನುಕೂಲಗಳ ಮೇಲೆ ನಿರ್ಮಿಸುವುದು ಮುಖ್ಯವಾಗಿದೆ" ಎಂದು ಅವರು ಹೇಳಿದರು.
ಭಾರತವು ರೇಡಿಯೊಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ಶಶಿ ಶೇಖರ್ ವಂಪಟ್ಟಿ ಹೇಳಿದರು ಮತ್ತು ಈ ಮಾಧ್ಯಮವನ್ನು ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ಅಂಶವೆಂದು ಕರೆದರು. ಈ ವಲಯಕ್ಕೆ ಸಂಘಟಿತ ಸಾರ್ವಜನಿಕ ಕ್ರಮದ ಅಗತ್ಯವನ್ನು ಅವರು ಎತ್ತಿ ತೋರಿಸಿದರು. "ರೇಡಿಯೋ ಎಲ್ಲಿಗೂ ಹೋಗುತ್ತಿಲ್ಲ. ಭಾರತದಲ್ಲಿ ರೇಡಿಯೊ ಗ್ರಾಹಕರು ಸಮಾಜದ ವಿಶಾಲ ವರ್ಗದಿಂದ ಬಂದವರು" ಎಂದು ಅವರು ಹೇಳಿದರು, ದೇಶದಲ್ಲಿ ಈ ಕ್ಷೇತ್ರದ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ನೀತಿ ಮಧ್ಯಸ್ಥಿಕೆಗಳು ಕೆಲವು ವರ್ಗದ ಸಾಧನಗಳು ರೇಡಿಯೊವನ್ನು ಹೊಂದಿರಬೇಕು ಎಂಬಂತಹ ಷರತ್ತುಗಳನ್ನು ಒಳಗೊಂಡಿರಬಹುದು. ಎಐ ಚಾಲಿತ ಸಾಧನಗಳು ಹಾಗೂ ಸಾಂಪ್ರದಾಯಿಕ ರೇಡಿಯೊದಂತಹ ಸಾಧನಗಳು ಸಹ ಅಸ್ತಿತ್ವದಲ್ಲಿರಬೇಕು ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆಯು ಸಾರ್ವಜನಿಕ ನೀತಿಗಳ ಪ್ರಮುಖ ನಿರ್ಣಾಯಕ ಅಂಶವಾಗಿರುವುದರಿಂದ, ಸಾಂಪ್ರದಾಯಿಕ ಸಾಧನಗಳನ್ನು ಸಂರಕ್ಷಿಸುವುದು ಮುಖ್ಯವಾಗಿದೆ. ರೇಡಿಯೋ ಸಾಧನ ತಯಾರಕರನ್ನು ಪ್ರೋತ್ಸಾಹಿಸಲು 'ಮೇಕ್ ಇನ್ ಇಂಡಿಯಾ' ದಂತಹ ಯೋಜನೆಗಳನ್ನು ಬಳಸಿಕೊಂಡು ಭಾರತದಲ್ಲಿ ರೇಡಿಯೋಗಾಗಿ ಪೂರಕ ವ್ಯವಸ್ಥೆಯನ್ನು ಹೆಚ್ಚಿಸಬೇಕೆಂದು ಟೆಡ್ ಲಾವರ್ಟಿ ಒತ್ತಾಯಿಸಿದರು.
ಭಾರತ ಮತ್ತು ಇತರೆಡೆಗಳಲ್ಲಿ ಡಿಜಿಟಲ್ ರೇಡಿಯೋ ಮುಂದುವರಿಯುವ ದಾರಿ ಎಂದು ತಜ್ಞರು ಒಪ್ಪಿಕೊಂಡರು ಮತ್ತು ಪ್ರಮುಖ ನಗರಗಳಲ್ಲಿ ಸಾಮಾನ್ಯ ಪ್ರಸರಣ ಮೂಲಸೌಕರ್ಯ ಹೊಂದಿರುವ ವಾಣಿಜ್ಯ ಕೇಂದ್ರಗಳು ಸಹಯೋಗಕ್ಕಾಗಿ ವೇದಿಕೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ನೈಜ ಸಮಯದ ಅಧಿಕೃತ ಅಪ್‌ಡೇಟ್ ಗಳಿಗಾಗಿ, ದಯವಿಟ್ಟು ಫಾಲೋಮಾಡಿ:
X ನಲ್ಲಿ :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
ಇನ್ಸ್ಟಾಗ್ರಾಮ್ ನಲ್ಲಿ:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126332)
| Visitor Counter:
12