ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ಸೃಜನಾತ್ಮಕರ ಆರ್ಥಿಕತೆಯು 2030ರ ವೇಳೆಗೆ ಖರೀದಿಸುವ ಗ್ರಾಹಕರ ಖರ್ಚಿನಲ್ಲಿ ಒಂದು ಟ್ರಿಲಿಯನ್ ಡಾಲರ್ ಗಿಂತ ಹೆಚ್ಚು ಪ್ರಭಾವ ಬೀರುವ ನಿರೀಕ್ಷೆಯಿದೆ: ವೇವ್ಸ್ 2025ರಲ್ಲಿ ಬಿಸಿಜಿ ವರದಿಯನ್ನು ಅನಾವರಣಗೊಳಿಸಲಾಗುವುದು
Posted On:
02 MAY 2025 2:33PM
|
Location:
PIB Bengaluru
ಭಾರತದ ಡಿಜಿಟಲ್ ಸನ್ನಿವೇಶವು ಅದರ ಸೃಜನಾತ್ಮಕ ಆರ್ಥಿಕತೆಯ ಏರಿಕೆಯಿಂದ ನಡೆಸಲ್ಪಡುವ ಗಮನಾರ್ಹ ಪರಿವರ್ತನೆಗೆ ಒಳಗಾಗುತ್ತಿದೆ. (From content to commerce: Mapping India's Creator economy) "ವಿಷಯದಿಂದ ವಾಣಿಜ್ಯಕ್ಕೆ: ಭಾರತದ ಸೃಜನಾತ್ಮಕ ಆರ್ಥಿಕತೆಯನ್ನು ಮ್ಯಾಪಿಂಗ್ ಮಾಡುವುದು" ಎಂಬ ಶೀರ್ಷಿಕೆಯ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ನ ಹೊಸ ವರದಿಯು ನಾಳೆ (3 ಮೇ 2025) ಮುಂಬೈನಲ್ಲಿ ನಡೆಯುವ ವೇವ್ಸ್ 2025ರಲ್ಲಿ ಬಿಡುಗಡೆಯಾಗಲಿದೆ.
ಭಾರತದ ಸೃಜನಾತ್ಮಕರು ಪ್ರಸ್ತುತ ವಾರ್ಷಿಕವಾಗಿ ಗ್ರಾಹಕ ವೆಚ್ಚದಲ್ಲಿ 350 ಬಿಲಿಯನ್ ಡಾಲರ್ ಗಿಂತ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಎಂದು ಬಹಿರಂಗಪಡಿಸುತ್ತದೆ - 2030ರ ವೇಳೆಗೆ ಈ ಅಂಕಿ ಸಂಖ್ಯೆಯು 1 ಟ್ರಿಲಿಯನ್ ಡಾಲರ್ ಮೀರುವ ನಿರೀಕ್ಷೆಯಿದೆ.
ಭಾರತವು 2 ರಿಂದ 2.5 ಮಿಲಿಯನ್ ಸಕ್ರಿಯ ಡಿಜಿಟಲ್ ಸೃಜನಾತ್ಮಕರಿಗೆ ನೆಲೆಯಾಗಿದೆ ಎಂದು ವರದಿಯು ವಿವರಿಸುತ್ತದೆ. ಇದನ್ನು 1,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗಿದೆ. ಈ ಪ್ರಮಾಣದ ಹೊರತಾಗಿಯೂ, ಅವರಲ್ಲಿ ಕೇವಲ 8–10% ಜನರು ಮಾತ್ರ ತಮ್ಮ ವಿಷಯವನ್ನು ಪರಿಣಾಮಕಾರಿಯಾಗಿ ಹಣವಾಗಿ ಪರಿವರ್ತಿಸಿಕೊಳ್ಳತ್ತಿದ್ದಾರೆ. ಇದು ಈ ವೇಗವಾಗಿ ಬೆಳೆಯುತ್ತಿರುವ ವ್ಯವಹಾರಿಕ ವಲಯದ ಈ ತನಕ ಬಳಕೆಯಾಗದ ಸಾಮರ್ಥ್ಯವನ್ನು ಒತ್ತಿ ಹೇಳುತ್ತದೆ. ಇಂದು 20–25 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾದ ಸೃಜನಾತ್ಮಕ ಪರಿಸರ ವ್ಯವಸ್ಥೆಯ ನೇರ ಆದಾಯವು ದಶಕದ ಅಂತ್ಯದ ವೇಳೆಗೆ 100–125 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.
ವರದಿಯ ಪ್ರಮುಖ ಒಳನೋಟಗಳು ಇವುಗಳನ್ನು ಒಳಗೊಂಡಿರುತ್ತವೆ:
- ಸೃಜನಾತ್ಮಕ ರಚನಾಕಾರರು ಗ್ರಾಹಕ ನಿರ್ಧಾರಗಳಲ್ಲಿ 30% ಕ್ಕಿಂತ ಹೆಚ್ಚು ಪ್ರಭಾವ ಬೀರುತ್ತಾರೆ, ಇಂದಿನ ಖರ್ಚಿನಲ್ಲಿ 350–400 ಬಿಲಿಯನ್ ಡಾಲರ್ ಅನ್ನು ರೂಪಿಸುತ್ತಾರೆ.
- ಪರಿಸರ ವ್ಯವಸ್ಥೆಯು ಜನರೇಷನ್ ಝೆಡ್ (Gen Z) ಮತ್ತು ಮಹಾನಗರ ಕೇಂದ್ರಗಳ ವ್ಯಾಪ್ತಿಯನ್ನು ಮೀರಿ ವಿಸ್ತರಿಸುತ್ತಿದೆ, ವಿವಿಧ ವಯೋಮಾನದ ಗುಂಪುಗಳು ಮತ್ತು ನಗರ ಶ್ರೇಣಿಗಳನ್ನು ತಲುಪುತ್ತಿದೆ.
- ಹಾಸ್ಯ, ಚಲನಚಿತ್ರಗಳು, ದೈನಂದಿನ ಧಾರಾವಾಹಿಗಳು ಮತ್ತು ಫ್ಯಾಷನ್ ಹೆಚ್ಚು ವೀಕ್ಷಿಸಲ್ಪಡುವ ಪ್ರಕಾರಗಳಾಗಿದ್ದು, ಕಿರು-ರೂಪದ ವೀಡಿಯೊ ಪ್ರಬಲ ವಿಷಯ ಸ್ವರೂಪವಾಗಿ ಉಳಿದಿದೆ.
- ಬ್ರ್ಯಾಂಡ್ ತಂತ್ರಗಳು ವಿಕಸನಗೊಳ್ಳುತ್ತಿವೆ, ವೇಗವಾದ ವಿಷಯ ಉತ್ಪಾದನೆ, ಹೆಚ್ಚಿನ ಸೃಜನಶೀಲ ಸ್ವಾತಂತ್ರ್ಯ, ವೈವಿಧ್ಯಮಯ ಗ್ರಾಹಕ ಗುರಿ ಮತ್ತು ಫಲಿತಾಂಶ-ಆಧಾರಿತ ಪರೀಕ್ಷೆಯ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
- ಆದಾಯ ಮಾದರಿಗಳು ವೈವಿಧ್ಯಮಯವಾಗುತ್ತಿವೆ, ವರ್ಚುವಲ್ ಉಡುಗೊರೆ, (Live commerce)ಲೈವ್ ವಾಣಿಜ್ಯ ಮತ್ತು ಚಂದಾದಾರಿಕೆಗಳಂತಹ ಗ್ರಾಹಕ-ನಿಧಿಯ ಮಾರ್ಗಗಳು ಆಕರ್ಷಣೆಯನ್ನು ಪಡೆಯುತ್ತಿವೆ.
- ಮುಂಬರುವ ವರ್ಷಗಳಲ್ಲಿ ಬ್ರ್ಯಾಂಡ್ ಗಳು ಕ್ರಿಯೇಟರ್ ಮಾರ್ಕೆಟಿಂಗ್ ನಲ್ಲಿ ತಮ್ಮ ಹೂಡಿಕೆಗಳನ್ನು 1.5 ರಿಂದ 3 ಪಟ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಡಿಜಿಟಲ್ ಕ್ರಿಯೇಟರ್ ಪರಿಸರ ವ್ಯವಸ್ಥೆಯಿಂದ ನಡೆಸಲ್ಪಡುವ ಮಾರ್ಕೆಟಿಂಗ್ ಮತ್ತು ವಾಣಿಜ್ಯದಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸುತ್ತದೆ.
ಬಿಸಿಜಿ ವರದಿಯನ್ನು ನಾಳೆ ಮುಂಬೈನಲ್ಲಿ ವೇವ್ಸ್ 2025ರ ಸಂದರ್ಭದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು. ಮೆಗಾ ವೇವ್ಸ್ 2025ರಲ್ಲಿ ಕೃತಕ ಬುದ್ದಿಮತ್ತ(ಎಐ), ಸಾಮಾಜಿಕ ಮಾಧ್ಯಮ, ಎವಿಜಿಸಿ ವಲಯ ಮತ್ತು ಚಲನಚಿತ್ರಗಳ ಕುರಿತು , ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಸಮಕಾಲೀನ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಭಾರತದ ವಿಸ್ತರಿಸುತ್ತಿರುವ ಹೆಜ್ಜೆಗುರುತನ್ನು ಕೂಡಾ ಪ್ರತಿಬಿಂಬಿಸುತ್ತವೆ.
For official updates on realtime, please follow us:
On X :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
On Instagram:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126323)
| Visitor Counter:
6
Read this release in:
Malayalam
,
English
,
Khasi
,
Urdu
,
Hindi
,
Nepali
,
Marathi
,
Bengali
,
Assamese
,
Gujarati
,
Tamil
,
Telugu