ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

2025-26ರ ಸಕ್ಕರೆ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾದ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಸಂಪುಟದ ಅನುಮೋದನೆ


ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ಗೆ 355 ರೂ.ಗಳ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು ಅನುಮೋದಿಸಲಾಗಿದೆ

ಈ ನಿರ್ಧಾರವು 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರಿಗೆ ಹಾಗು ಸಕ್ಕರೆ ಕಾರ್ಖಾನೆಗಳು ಮತ್ತು ಸಂಬಂಧಿತ ಪೂರಕ ಚಟುವಟಿಕೆಗಳಲ್ಲಿ ಕೆಲಸ ಮಾಡುವ 5 ಲಕ್ಷ ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ

Posted On: 30 APR 2025 4:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ, ಕಬ್ಬು ಬೆಳೆಗಾರರ (ಗನ್ನಕಿಸಾನ್) ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, 2025-26ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್ ಆರ್ ಪಿ)ಯನ್ನು 10.25% ಮೂಲ ಇಳುವರಿ ದರವಿದ್ದರೆ [ಅಂದರೆ ಸಕ್ಕರೆ ಉತ್ಪಾದನಾ ಪ್ರಮಾಣ] ಪ್ರತಿ ಕ್ವಿಂಟಾಲ್ ಗೆ 355 ರೂ.ಗಳಂತೆ ನೀಡಲು ಅನುಮೋದನೆ ನೀಡಿದೆ.  ಇಳುವರಿಯಲ್ಲಿ ಪ್ರತಿ 0.1% ಹೆಚ್ಚಳವಿದ್ದರೆ ಎಫ್ ಆರ್ ಪಿಯನ್ನು ಪ್ರತಿ ಕ್ವಿಂಟಾಲ್ ಗೆ ರೂ.3.46 ರಷ್ಟು ಹೆಚ್ಚು ಮಾಡುವುದು. ಮತ್ತು 0.1% ಸಕ್ಕರೆ ಇಳುವರಿ ಕಡಿಮೆ ಇದ್ದರೆ ರೂ.3.46ರಂತೆ ಕಡಿಮೆ ಮಾಡಲಾಗುವುದು.

ಆದಾಗ್ಯೂ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರವು 9.5% ಕ್ಕಿಂತ ಕಡಿಮೆ ಇಳುವರಿ ಇರುವ ಸಕ್ಕರೆ ಕಾರ್ಖಾನೆಗಳ ಸಂದರ್ಭದಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂದು ನಿರ್ಧರಿಸಿದೆ. ಅಂತಹ ರೈತರಿಗೆ 2025-26ರ ಸಕ್ಕರೆ ಋತುವಿನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ 329.05 ರೂ. ದೊರೆಯುತ್ತದೆ.

2025-26ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ (ಎ 2 + ಎಫ್ಎಲ್) ಪ್ರತಿ ಕ್ವಿಂಟಾಲ್ ಗೆ 173 ರೂ. 10.25% ಇಳುವರಿ ದರದಲ್ಲಿ ಪ್ರತಿ ಕ್ವಿಂಟಾಲ್ ಗೆ 355 ರೂ.ಗಳ ಈ ಎಫ್ ಆರ್ ಪಿ ಉತ್ಪಾದನಾ ವೆಚ್ಚಕ್ಕಿಂತ 105.2% ನಷ್ಟು ಹೆಚ್ಚಾಗಿದೆ. 2025-26ರ ಸಕ್ಕರೆ ಋತುವಿನ ಎಫ್ ಆರ್ ಪಿ ಪ್ರಸ್ತುತ ಸಕ್ಕರೆ ಋತುವಾದ 2024-25 ಕ್ಕಿಂತ 4.41% ಹೆಚ್ಚಾಗಿದೆ.

ಅನುಮೋದಿಸಲಾದ ಎಫ್ ಆರ್ ಪಿ 2025-26ರ ಸಕ್ಕರೆ ಋತುವಿನಲ್ಲಿ (2025ರ ಅಕ್ಟೋಬರ್ 1 ರಿಂದ ಪ್ರಾರಂಭವಾಗುವಂತೆ) ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸಲು ಅನ್ವಯಿಸುತ್ತದೆ. ಸಕ್ಕರೆ ಕ್ಷೇತ್ರವು ಪ್ರಮುಖ ಕೃಷಿ ಆಧಾರಿತ ವಲಯವಾಗಿದ್ದು, ಇದು ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರು ಹಾಗು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಸುಮಾರು 5 ಲಕ್ಷ ಕಾರ್ಮಿಕರ ಜೀವನೋಪಾಯದ ಮೇಲೆ ಹಾಗು ಪರೋಕ್ಷ ಉದ್ಯೋಗ ಹೊದಿರುವವರು ಮತ್ತು ಸಾರಿಗೆ ವಲಯದ ಮೇಲೆ ಪರಿಣಾಮ ಬೀರುತ್ತದೆ

ಹಿನ್ನೆಲೆ:

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರಗಳು ಹಾಗು ಇತರ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಎಫ್ಆರ್ಪಿಯನ್ನು ನಿರ್ಧರಿಸಲಾಗಿದೆ.

ಹಿಂದಿನ 2023-24 ರ ಸಕ್ಕರೆ ಋತುವಿನಲ್ಲಿ, ಪಾವತಿಸಬೇಕಾದ 1,11,782 ಕೋಟಿ ರೂ.ಗಳ ಕಬ್ಬಿನ ಬಾಕಿಯಲ್ಲಿ, 28.04.2025 ರವರೆಗೆ ಸುಮಾರು 1,11,703 ಕೋಟಿ ರೂ.ಗಳ ಕಬ್ಬಿನ ಬಾಕಿಯನ್ನು ರೈತರಿಗೆ ಪಾವತಿಸಲಾಗಿದೆ; ಹೀಗಾಗಿ, 99.92% ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ. ಪ್ರಸಕ್ತ 2024-25ನೇ ಸಾಲಿನ ಸಕ್ಕರೆ ಋತುವಿನಲ್ಲಿ, 97,270 ಕೋಟಿ ರೂ.ಗಳ ಕಬ್ಬಿನ ಬಾಕಿಯಲ್ಲಿ, 28.04.2025 ರವರೆಗೆ ಸುಮಾರು 85,094 ಕೋಟಿ ರೂ.ಗಳ ಕಬ್ಬಿನ ಬಾಕಿಯನ್ನು ರೈತರಿಗೆ ಪಾವತಿಸಲಾಗಿದೆ. ಹೀಗಾಗಿ, 87% ಕಬ್ಬಿನ ಬಾಕಿಯನ್ನು ಪಾವತಿಸಲಾಗಿದೆ.

 

*****


(Release ID: 2125517) Visitor Counter : 9