ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025: ಮಾಧ್ಯಮ, ಮನರಂಜನೆ ಮತ್ತು ತಂತ್ರಜ್ಞಾನಕ್ಕಾಗಿ ಅಪ್ರತಿಮ ಜಾಗತಿಕ ಪ್ರದರ್ಶನ
Posted On:
28 APR 2025 5:21PM
|
Location:
PIB Bengaluru
ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025, ವಿಶ್ವದ ಪ್ರಮುಖ ಮಾಧ್ಯಮ, ಮನರಂಜನೆ ಮತ್ತು ತಂತ್ರಜ್ಞಾನ ನಾವೀನ್ಯಕಾರರನ್ನು ಒಂದೆಡೆ ಸೇರಿಸುತ್ತದೆ. 15,000 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ವೇವ್ಸ್ 2025, ಉದ್ಯಮದ ದಿಗ್ಗಜರು, ಸೃಜನಶೀಲರು, ಹೂಡಿಕೆದಾರರು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರವರ್ತಕರು ಜಾಗತಿಕ ಮನರಂಜನೆಯ ಭವಿಷ್ಯವನ್ನು ಒಂದಾಗಿಸಲು, ಸಹಯೋಗಿಸಲು ಮತ್ತು ಅನ್ವೇಷಿಸಲು ಅಂತಿಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ನೆಟ್‌ಫ್ಲಿಕ್ಸ್, ಅಮೆಜಾನ್, ಗೂಗಲ್, ಮೆಟಾ, ಸೋನಿ, ರಿಲಯನ್ಸ್, ಅಡೋಬ್, ಟಾಟಾ, ಬಾಲಾಜಿ ಟೆಲಿಫಿಲ್ಮ್ಸ್, ಧರ್ಮ ಪ್ರೊಡಕ್ಷನ್ಸ್, ಸರೆಗಮ ಮತ್ತು ಯಶ್ ರಾಜ್ ಫಿಲ್ಮ್ಸ್ ಸೇರಿದಂತೆ 100 ಕ್ಕೂ ಹೆಚ್ಚು ಪ್ರಮುಖ ಪ್ರದರ್ಶಕರೊಂದಿಗೆ - ಜೆಟ್‌ಸಿಂಥೆಸಿಸ್, ಡಿಜಿಟಲ್ ರೇಡಿಯೋ ಮಾಂಡಿಯೇಲ್ (ಡಿ ಆರ್ ಎಂ), ಫ್ರೀ ಸ್ಟ್ರೀಮ್ ಟೆಕ್ನಾಲಜೀಸ್, ನ್ಯೂರಲ್ ಗ್ಯಾರೇಜ್ ಮತ್ತು ಫ್ರ್ಯಾಕ್ಟಲ್ ಪಿಕ್ಚರ್ ನಂತಹ ಮುಂದಿನ ಪೀಳಿಗೆಯ ನಾವೀನ್ಯಕಾರರೊಂದಿಗೆ – ವೇವ್ಸ್ ಮನರಂಜನಾ ವಲಯದಲ್ಲಿ ನಾವೀನ್ಯತೆ, ಸೃಜನಶೀಲತೆ ಮತ್ತು ಗಡಿಯಾಚೆಗಿನ ಸಹಯೋಗಕ್ಕೆ ನಿರ್ಣಾಯಕ ತಾಣವಾಗಲಿದೆ.
ಈ ಅಸಾಧಾರಣ ಶೃಂಗಸಭೆಯ ಹೃದಯಭಾಗದಲ್ಲಿ 1,470 ಚದರ ಮೀಟರ್ ವಿಸ್ತೀರ್ಣದಲ್ಲಿರುವ ಇಂಡಿಯಾ ಪೆವಿಲಿಯನ್ ಇದೆ, ಇದು "ಕಲಾ ಟು ಕೋಡ್" ಎಂಬ ಥೀಮ್ ಅಡಿಯಲ್ಲಿ ಭಾರತದ ಕ್ರಿಯಾತ್ಮಕ ಪರಂಪರೆಯನ್ನು ಆಚರಿಸುತ್ತದೆ. ಶ್ರುತಿ, ಕೃತಿ, ದೃಷ್ಟಿ ಮತ್ತು ಸೃಜನಶೀಲನ ಜಿಗಿತ ಎಂಬ ನಾಲ್ಕು ಅನುಭವ ವಲಯಗಳಲ್ಲಿ - ಪ್ರಾಚೀನ ಮೌಖಿಕ ಸಂಪ್ರದಾಯಗಳು ಮತ್ತು ದೃಶ್ಯ ಕಲೆಗಳಿಂದ ಅತ್ಯಾಧುನಿಕ ತಾಂತ್ರಿಕ ಪ್ರಗತಿಯವರೆಗೆ - ಭಾರತದ ಕಥೆ ಹೇಳುವಿಕೆಯ ವಿಕಸನದ ಮೂಲಕ ಸಂದರ್ಶಕರು ತಲ್ಲೀನತೆಯ ಪಯಣದಲ್ಲಿ ಪಾಲ್ಗೊಳ್ಳುತ್ತಾರೆ.
ಭಾರತ ಪೆವಿಲಿಯನ್ ಜೊತೆಗೆ, ವೇವ್ಸ್ 2025 ವಿಶೇಷ ರಾಜ್ಯ ಪೆವಿಲಿಯನ್ ಗಳನ್ನು ಒಳಗೊಂಡಿರುತ್ತದೆ, ಅಲ್ಲಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಗೋವಾ, ಗುಜರಾತ್, ತೆಲಂಗಾಣ, ಮಧ್ಯಪ್ರದೇಶ ಮತ್ತು ಇತರ ಹಲವಾರು ರಾಜ್ಯಗಳು ತಮ್ಮ ಸಾಂಸ್ಕೃತಿಕ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತವೆ.
ಇದಲ್ಲದೆ, ಎಂ ಎಸ್ ಎಂ ಇ ಪೆವಿಲಿಯನ್ ಮತ್ತು ಸ್ಟಾರ್ಟ್-ಅಪ್ ಬೂತ್ ಗಳು ಎಂ&ಇ ವಲಯದ ಉದಯೋನ್ಮುಖ ವ್ಯವಹಾರಗಳು ಮತ್ತು ನಾವೀನ್ಯಕಾರರಿಗೆ ಉದ್ಯಮದ ನಾಯಕರು, ಹೂಡಿಕೆದಾರರು ಮತ್ತು ಜಾಗತಿಕ ಮನರಂಜನೆ ಮತ್ತು ತಂತ್ರಜ್ಞಾನ ವಲಯಗಳ ಪ್ರಮುಖ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಅನನ್ಯ ಅವಕಾಶಗಳನ್ನು ಒದಗಿಸುತ್ತವೆ.
ವೇವ್ಸ್ 2025 ರ ಪ್ರಮುಖ ಆಕರ್ಷಣೆಯೆಂದರೆ ವಿಸ್ತಾರವಾದ ಗೇಮಿಂಗ್ ಅರೆನಾ, ಇದು ಗೇಮಿಂಗ್ ಮತ್ತು ಇ-ಸ್ಪೋರ್ಟ್ಸ್ ಉದ್ಯಮಗಳ ತ್ವರಿತ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ. ಮೈಕ್ರೋಸಾಫ್ಟ್ & ಎಕ್ಸ್ ಬಾಕ್ಸ್, ಡ್ರೀಮ್ 11, ಕ್ರಾಫ್ಟನ್, ನಜಾರಾ, ಎಂಪಿಎಲ್ ಮತ್ತು ಜಿಯೋಗೇಮ್ಸ್ ನಂತಹ ಪ್ರಮುಖ ಬ್ರ್ಯಾಂಡ್ ಗಳನ್ನು ಇದು ಒಳಗೊಂಡಿದೆ. ಈ ಅರೆನಾವು ಸಂವಾದಾತ್ಮಕ ಮನರಂಜನೆಯ ಭವಿಷ್ಯವನ್ನು ಕುರಿತ ಒಂದು ನೋಟವನ್ನು ನೀಡುತ್ತದೆ ಮತ್ತು ಜಾಗತಿಕ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಗೇಮಿಂಗ್ ಪ್ರಭಾವವನ್ನು ಪ್ರದರ್ಶಿಸುತ್ತದೆ.
2025 ರ ಮೇ 3 ಮತ್ತು 4 ರಂದು ಸಾರ್ವಜನಿಕ ದಿನಗಳೊಂದಿಗೆ, 2025 ರ ಮೇ 1 ರಿಂದ 4 ರವರೆಗೆ ವ್ಯವಹಾರ ದಿನಗಳಿಗಾಗಿ ತೆರೆದಿರುತ್ತದೆ. ವೇವ್ಸ್ 2025 ವಿಶೇಷ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ಮನರಂಜನೆ, ಮಾಧ್ಯಮ ಮತ್ತು ತಂತ್ರಜ್ಞಾನ ವಲಯಗಳ ಬಗ್ಗೆ ಅನನ್ಯವಾದ ಒಳನೋಟಗಳನ್ನು ನೀಡುತ್ತದೆ. ಪ್ರದರ್ಶನವು ಮೇ 1 ರಿಂದ 3 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಮತ್ತು ಮೇ 4, 2025 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಅದರ ಅಸಾಧಾರಣ ಪ್ರಮಾಣ, ಪ್ರಭಾವಶಾಲಿ ಪ್ರದರ್ಶಕರು ಮತ್ತು ಭವಿಷ್ಯದ ದೃಷ್ಟಿಕೋನದೊಂದಿಗೆ, ವೇವ್ಸ್ 2025 ಜಾಗತಿಕ ಮಾಧ್ಯಮ ಸಮ್ಮಿಲನಕ್ಕೆ - ಕಥೆ ಹೇಳುವಿಕೆ, ತಂತ್ರಜ್ಞಾನ ಮತ್ತು ಮನರಂಜನೆಯ ಭವಿಷ್ಯವನ್ನು ರೂಪಿಸಲು ಸಂಪ್ರದಾಯ ಮತ್ತು ನಾವೀನ್ಯತೆಗಳ ಸಂಗಮ ಸ್ಥಳ- ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.
ವೇವ್ಸ್ ಕುರಿತು
ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.
ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.
ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.
ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here
PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್ ಆಗಿ
ವೇವ್ಸ್ ಗೆ ನೋಂದಾಯಿಸಿ now
*****
Release ID:
(Release ID: 2125032)
| Visitor Counter:
5