WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್, ಅನಿಮೇಷನ್ ಫಿಲ್ಮ್ ಮೇಕರ್ಸ್ ಚಾಲೆಂಜ್‌ ನಲ್ಲಿ 42 ಅದ್ಭುತ ಅನಿಮೇಷನ್ ಚಲನಚಿತ್ರಗಳನ್ನು ಮುನ್ನೆಲೆಗೆ ತರುತ್ತದೆ


ಅನಿಮೇಷನ್ ಚಲನಚಿತ್ರಗಳು: 18 ಕಿರುಚಿತ್ರಗಳು, 12 ಚಲನಚಿತ್ರಗಳು, 9 ಟಿವಿ ಸರಣಿಗಳು ಮತ್ತು 3 ಎಆರ್/ವಿಆರ್ ಯೋಜನೆಗಳು ವೇವ್ಸ್ ಶೃಂಗಸಭೆಯಲ್ಲಿ ಸ್ಥಾನ ಪಡೆದಿವೆ

 Posted On: 28 APR 2025 2:41PM |   Location: PIB Bengaluru

ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ 2025ರ 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೀಸನ್-1' ರ ಭಾಗವಾಗಿ ನಡೆದ ಅನಿಮೇಷನ್ ಫಿಲ್ಮ್ ಮೇಕರ್ಸ್ ಸ್ಪರ್ಧೆಯ (ಎ ಎಫ್‌ ಸಿ) 42 ಅಂತಿಮ ಸ್ಪರ್ಧಿಗಳನ್ನು ಏಪ್ರಿಲ್ ಎರಡನೇ ವಾರದಲ್ಲಿ ಘೋಷಿಸಲಾಯಿತು. ಆರಂಭದಿಂದಲೂ ರಾಷ್ಟ್ರೀಯ ಮಟ್ಟದ ಸವಾಲನ್ನು ಆಯೋಜಿಸುವಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಸಹಕರಿಸಿದ ಡ್ಯಾನ್ಸಿಂಗ್ ಆಟಮ್ಸ್ ಸ್ಟುಡಿಯೋಸ್, 2025ರ ಮೇ 1-4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವೇವ್ಸ್ ಶೃಂಗಸಭೆಯಲ್ಲಿ ಪ್ರದರ್ಶಿಸಲಾಗುವ ಅತ್ಯುತ್ತಮ 42 ಪ್ರಾಜೆಕ್ಟ್‌ ಗಳ ಬಗ್ಗೆ ಸಮಗ್ರ ಸೃಜನಶೀಲ ಕ್ಯಾಟಲಾಗ್ ಅನ್ನು ಹೊರತಂದಿದೆ. ಈ ವಿಶಿಷ್ಟ ಉಪಕ್ರಮವು ಪ್ರತಿಭಾನ್ವಿತ ಸೃಜನಶೀಲರನ್ನು ಸಮಾನ ಮನಸ್ಕ ವ್ಯಕ್ತಿಗಳು, ನಿರ್ಮಾಪಕರು ಮತ್ತು ವಿತರಕರೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ, ಇದು ಭೌಗೋಳಿಕ ಗಡಿಗಳನ್ನು ಮೀರಿ ಸೃಜನಶೀಲರು ಮತ್ತು ಉದ್ಯಮದ ನಡುವೆ ಸಹಯೋಗವನ್ನು ಉತ್ತೇಜಿಸುತ್ತದೆ.

ಒಂಬತ್ತು ತಿಂಗಳ ಕಠಿಣ ಸ್ಪರ್ಧೆಯ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಹೊರಹೊಮ್ಮಿದ ಈ ಅತ್ಯುತ್ತಮ 42 ಯೋಜನೆಗಳು ಸಾಂಪ್ರದಾಯಿಕ ಅನಿಮೇಷನ್, ವಿ ಎಫ್‌ ಎಕ್ಸ್‌, ವರ್ಧಿತ ರಿಯಾಲಿಟಿ (ಎಆರ್)/ವರ್ಚುವಲ್ ರಿಯಾಲಿಟಿ (ವಿಆರ್) ಮತ್ತು ವರ್ಚುವಲ್ ನಿರ್ಮಾಣವನ್ನು ಒಳಗೊಂಡಂತೆ ಅನಿಮೇಷನ್‌ ನ ಮೂಲ ಕಥೆ ಹೇಳುವಿಕೆಯ ಮೇಲೆ ಗಮನ ಹರಿಸಿವೆ. ಸೃಜನಶೀಲ ಕ್ಯಾಟಲಾಗ್ ವೈವಿಧ್ಯಮಯ ಶ್ರೇಣಿಯ ನವೀನ ಯೋಜನೆಗಳನ್ನು ಒಳಗೊಂಡಿದೆ, ಅವುಗಳೆಂದರೆ - 12 ಚಲನಚಿತ್ರಗಳು, 18 ಕಿರುಚಿತ್ರಗಳು, ಟಿವಿ ಸರಣಿಗಳು: 9 ಟಿವಿ/ಸೀಮಿತ ಸರಣಿಗಳು ಮತ್ತು 3 ಎಆರ್/ವಿಆರ್ ಅನುಭವಗಳು. ಆಯ್ಕೆಯಾದ 42 ಚಲನಚಿತ್ರ ಯೋಜನೆಗಳನ್ನು ಈ ವಿಶಿಷ್ಟ ಉಪಕ್ರಮದ ಮೂಲಕ ಉದ್ಯಮದ ಪಾಲುದಾರರಿಗೆ ಪ್ರದರ್ಶಿಸಲಾಗುತ್ತದೆ.

ಆಯ್ಕೆಯಾದ 18 ಕಿರು ಅನಿಮೇಷನ್ ಚಲನಚಿತ್ರ ನಿರ್ಮಾತೃಗಳು ಮತ್ತು ಅವರ ಯೋಜನೆಗಳು ಕೆಳಗಿನಂತಿವೆ:

1) ಶ್ರೇಯಾ ಸಚ್‌ದೇವ್ - ವಾಣಿ

2) ಶ್ರೀಕಾಂತ್ ಎಸ್ ಮೆನನ್ - ಒಡಿಯನ್

3) ಪ್ರಶಾಂತ್ ಕುಮಾರ್ ನಾಗದಾಸಿ – ಬೆಸ್ಟ್‌ ಫ್ರೆಂಡ್ಸ್

4) ಶ್ವೇತಾ ಸುಭಾಷ್ ಮರಾಠೆ - ಮೆಲ್ಟಿಂಗ್ ಶೇಮ್

5) ಅನಿಕಾ ರಾಜೇಶ್ - ಅಚಪ್ಪಂ

6) ಮಾರ್ತಾಂಡ ಆನಂದ ಉಗಳಮುಗ್ಲೆ - ಚಂದೋಮಾಮ

7) ಕಿರುತಿಕಾ ರಾಮಸುಬ್ರಮಣಿಯನ್ – ಎ ಡ್ರೀಮ್ಸ್‌ ಡ್ರೀಮ್

8) ಹರೀಶ್ ನಾರಾಯಣ ಅಯ್ಯರ್ - ಕರಾಬಿ

9) ತ್ರಿಪರ್ಣ ಮೈತಿ - ದಿ ಚೇರ್

10) ಅರುಂಧತಿ ಸರ್ಕಾರ್ – ಸೋ ಕ್ಲೋಸ್‌ ಯೆಟ್‌ ಸೋ ಫಾರ್

11) ಗಡಂ ಜಗದೀಶ್ ಪ್ರಸಾದ್ ಯಾದವ್ – ಸಿಂಫನಿ‌ ಆಫ್‌ ಡಾರ್ಕ್‌ನೆಸ್

12) ವೆಟ್ರಿವೇಲ್ – ದಿ ಲಾಸ್ಟ್‌ ಟ್ರೆಸರ್‌

13) ಗಾರ್ಗಿ ಗೌಥೆ - ಗೋಡ್ವಾ

14) ಶ್ರೀಯಾ ವಿನಾಯಕ್ ಪೋರೆ - ಕಾಳಿ (ಬಡ್)

15) ಹರ್ಷಿತಾ ದಾಸ್ - ಲೂನಾ

16) ಸಾಂಡ್ರಾ ಮೇರಿ - ಮಿಸ್ಸಿಂಗ್

17) ರಿಚಾ ಭೂತಾನಿ – ಕ್ಲೈಮೇಟ್ ಸ್ಕೇಪ್

18) ಹಿರಾಕ್ ಜ್ಯೋತಿನಾಥ್ – ಟೇಲ್ಸ್‌ ಫ್ರಂ ಟೀ ಹೌಸ್

ಅನಿಮೇಷನ್ ಚಲನಚಿತ್ರಗಳ 12 ಅಂತಿಮ ಸ್ಪರ್ಧಿಗಳು ಮತ್ತು ಅವರ ಯೋಜನೆಗಳು:

1) ಕ್ಯಾಥರಿನಾ ಡಯಾನ್ ವೈರಸ್ವತಿ ಎಸ್ - ಫ್ಲೈ!

2) ಶುಭಂ ತೋಮರ್ - ಮಹ್ಜುನ್

3) ಶ್ರೀಕಾಂತ್ ಭೋಗಿ - ರುದ್ರ

4) ಅನಿರ್ಬನ್ ಮಜುಂದಾರ್- ಬಾಬರ್ ಔರ್ ಬನ್ನೊ – ಎ ಫ್ರೆಂಡ್‌ಶಿಪ್‌ ಸಾಗಾ

5) ನಂದನ್ ಬಾಲಕೃಷ್ಣನ್ - ದಿ ಡ್ರೀಮ್ ಬಲೂನ್

6) ಜಾಕ್ವೆಲಿನ್ ಸಿ ಚಿಂಗ್ - ಲೈಕ್ಕೆ ಅಂಡ್‌ ದಿ ಟ್ರೋಲ್ಸ್‌

7) ರೋಹಿತ್ ಸಂಖ್ಲಾ - ದ್ವಾರಕ ದಿ ಲಾಸ್ಟ್ ಸಿಟಿ ಆಫ್ ಶ್ರೀ ಕೃಷ್ಣ

8) ಭಗತ್ ಸಿಂಗ್ ಸೈನಿ - ರೆಡ್ ವುಮನ್

9) ಅಭಿಜೀತ್ ಸಕ್ಸೇನಾ - ಅರೈಸ್, ಅವೇಕ್

10) ವಂಶಿ ಬಂಡಾರು - ಆಯುರ್ವೇದ ಕ್ರಾನಿಕಲ್ಸ್ – ಸರ್ಚ್‌ ಫಾರ್‌ ದಿ ಲಾಸ್ಟ್‌ ಲೈಟ್‌

11) ಪಿಯೂಷ್ ಕುಮಾರ್ – ರಾಂಗ್‌ ಪ್ರೋಗ್ರಾಮಿಂಗ್‌ .. ದ ಅನ್‌ಲೀಷಡ್‌ ವಾರ್‌ ಆಫ್‌ ಎಐ

12) ಖಂಬೋರ್ ಬಟೇ - ಖರ್ಜಾನಾ - ಲಪಲಾಂಗ್ – ಎ ಖಾಸಿ ಫೋಕ್ಲೋರ್‌ ರಿಇಮ್ಯಾಜಿನಡ್‌

ಆಯ್ಕೆಯಾದ 9 ಅನಿಮೇಷನ್ ಟಿವಿ/ಸೀಮಿತ ಸರಣಿಯ ನಿರ್ಮಾತೃಗಳು ಮತ್ತು ಅವರ ಯೋಜನೆಗಳು:

1) ಜ್ಯೋತಿ ಕಲ್ಯಾಣ ಸುರ - ಜಾಕಿ & ಜಿಲಾಲ್

2) ತುಹಿನ್ ಚಂದ - ಚುಪಿ : ಸೈಲೆನ್ಸ್‌ ಬಿಹೈಂಡ್‌ ಲಾ

3) ಕಿಶೋರ್ ಕುಮಾರ್ ಕೇದಾರಿ - ಏಜ್ ಆಫ್ ದಿ ಡೆಕ್ಕನ್: ದಿ ಲೆಜೆಂಡ್ ಆಫ್ ಮಲಿಕ್ ಅಂಬರ್

4) ಭಾಗ್ಯಶ್ರೀ ಶತಪತಿ - ಪಾಶ

5) ರಿಷವ್ ಮೊಹಂತಿ - ಖಟ್ಟಿ

6) ಸುಕಂಕನ್ ರಾಯ್ - ಸೌಂಡ್ ಆಫ್ ಜಾಯ್

7) ಆತ್ರೇಯೀ ಪೊದ್ದಾರ್, ಸಂಗೀತಾ ಪೊದ್ದಾರ್ ಮತ್ತು ಬಿಮಲ್ ಪೊದ್ದಾರ್ - ಮೊರೆ ಕಾಕಾ

8) ಪ್ರಸೇನ್‌ಜಿತ್ ಸಿಂಘಾ - ದಿ ಕ್ವೈಟ್ ಚೋಸ್

9) ಸೆಗುನ್ ಸ್ಯಾಮ್ಸನ್, ಒಮೊಟುಂಡೆ ಅಕಿಯೋಡ್ – ಮಾಪು

3 ಎಆರ್/ವಿಆರ್ ಅನುಭವ ಸೃಷ್ಟಿಕರ್ತರು ಮತ್ತು ಅವರ ಯೋಜನೆಗಳು:

1) ಸುಂದರ್ ಮಹಾಲಿಂಗಂ - ಅಶ್ವಮೇಧ - ದಿ ಅನ್‌ಸೀಲ್ಡ್ ಫೇಟ್

2) ಅನುಜ್ ಕುಮಾರ್ ಚೌಧರಿ - ಲಿಮಿನಲಿಸಂ

3) ಇಶಾ ಚಂದನಾ – ಟಾಕ್ಸಿಕ್‌ ಎಫೆಕ್ಸ್‌ ಆಫ್‌ ಸಬ್‌ಸ್ಟೆನ್ಸ್‌ ಅಬ್ಯುಸ್‌ ಆನ್‌ ಹ್ಯೂಮನ್‌ ಬಾಡಿ

ಮೊದಲ ಬಾರಿಗೆ, ಎಲ್ಲಾ 42 ಯೋಜನೆಗಳನ್ನು ಒಂದೇ ಸೃಜನಶೀಲ ಕ್ಯಾಟಲಾಗ್‌ ನಲ್ಲಿ ತರುವುದು ನಾವು ಪತ್ತೆಮಾಡಿದ ಸಂಪೂರ್ಣ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಡ್ಯಾನ್ಸಿಂಗ್ ಅಟಿಮ್ಸ್ ಸ್ಟುಡಿಯೋಸ್ ಸ್ಥಾಪಕಿ ಮತ್ತು ಸಿಇಒ ಸರಸ್ವತಿ ಬುಯಾಲಾ ಹೇಳುತ್ತಾರೆ. ಉದ್ಯಮದ ಅನುಭವಿಗಳು ಮತ್ತು ಮಾಧ್ಯಮ ಮತ್ತು ಮನರಂಜನೆಯ ಪ್ರಭಾವಿ ವ್ಯಕ್ತಿಗಳನ್ನು ಒಳಗೊಂಡ ವೇವ್ಸ್ ಸಲಹಾ ಮಂಡಳಿಯು ಈ ಯೋಜನೆಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವಲ್ಲಿ ಮತ್ತು ನಿರ್ಮಾಣ ಮತ್ತು ವಿತರಣೆಯಲ್ಲಿ ಮಾರ್ಗದರ್ಶನ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಈ ಕ್ರಿಯಾತ್ಮಕ ವಿಭಾಗಗಳಿಂದ ಉತ್ಪತ್ತಿಯಾಗುವ ಜಾಗತಿಕ ಆದಾಯವು ಅನಿಮೇಷನ್ ಉದ್ಯಮದ ಅಗಾಧ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ ಎಂದು ಶ್ರೀಮತಿ ಬುಯಾಲಾ ತಿಳಿಸಿದರು. 2024 ರಲ್ಲಿ, ಜಾಗತಿಕ ಅನಿಮೇಷನ್ ಮಾರುಕಟ್ಟೆ ಗಣನೀಯ ಬೆಳವಣಿಗೆಯನ್ನು ಕಂಡಿತು. ಆನ್‌ಲೈನ್ ಸ್ಟ್ರೀಮಿಂಗ್, ಉತ್ಸವಗಳು ಸೇರಿದಂತೆ ವಿವಿಧ ವೇದಿಕೆಗಳ ಮೂಲಕ ಕಿರುಚಿತ್ರಗಳು ಅಂದಾಜು 20 ಶತಕೋಟಿ ಡಾಲರ್‌ ಆದಾಯವನ್ನು ನೀಡಿವೆ, ಶೈಕ್ಷಣಿಕ ವಿಷಯವು 2032 ರ ವೇಳೆಗೆ 70 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ. ಅತಿದೊಡ್ಡ ವಿಭಾಗವನ್ನು ಪ್ರತಿನಿಧಿಸುವ ಫೀಚರ್ ಫಿಲ್ಮ್ಸ್, ಜಾಗತಿಕ ಬಾಕ್ಸ್ ಆಫೀಸ್ ಮತ್ತು ಪೂರಕ ಮಾರುಕಟ್ಟೆಗಳ ಮೂಲಕ ಸುಮಾರು 30 ಬಿಲಿಯನ್ ಡಾಲರ್ ನಿಂದ 32.3 ಬಿಲಿಯನ್ ಡಾಲರ್  ವರೆಗೆ ಗಳಿಸಿತು. ಅನಿಮೇಷನ್ ಟಿವಿ ಸರಣಿಯು ಸ್ಟ್ರೀಮಿಂಗ್ ಸೇವೆಗಳಿಂದ ಪ್ರೇರಿತವಾದ ಉತ್ಕರ್ಷವನ್ನು ಕಂಡಿತು, ನಿರ್ಮಾಣ ಮತ್ತು ಪರವಾನಗಿಯಲ್ಲಿ ಸುಮಾರು 512 ಬಿಲಿಯನ್ ಡಾಲರ್ ಆದಾಯಕ್ಕೆ ಕಾರಣವಾಯಿತು. ಎಆರ್/ವಿಆರ್ ಮತ್ತು ಎಆರ್/ವಿಆರ್ ಅನಿಮೇಷನ್ ಸೇರಿದಂತೆ ತಲ್ಲೀನಗೊಳಿಸುವ ಮನರಂಜನಾ ಮಾರುಕಟ್ಟೆಯು ಬೆಳೆಯುತ್ತಿರುವ ವಲಯವಾಗಿದೆ. ಇದು ಗಮನಾರ್ಹ ಬೆಳವಣಿಗೆಯ ಮುನ್ಸೂಚನೆಗಳೊಂದಿಗೆ ಅಂದಾಜು 22.12 ಬಿಲಿಯನ್ ಡಾಲರ್‌ ಮತ್ತು 79.36 ಬಿಲಿಯನ್ ಡಾಲರ್‌ ತಲುಪಿದೆ. ಎಆರ್/ವಿಆರ್ ತಂತ್ರಜ್ಞಾನಗಳು ಗೇಮಿಂಗ್, ಆರೋಗ್ಯ ರಕ್ಷಣೆ, ಚಿಲ್ಲರೆ ವ್ಯಾಪಾರ, ಶಿಕ್ಷಣ ಮತ್ತು ಉತ್ಪಾದನೆ ಸೇರಿದಂತೆ ಹಲವಾರು ಕ್ಷೇತ್ರಗಳನ್ನು  ಪರಿವರ್ತಿಸುತ್ತಿವೆ, ಇದು ತಲ್ಲೀನಗೊಳಿಸುವ ಅನುಭವಗಳ ಬೇಡಿಕೆ ಮತ್ತು ಗಣನೀಯ ಹೂಡಿಕೆಯಿಂದ ಉತ್ತೇಜಿಸಲ್ಪಟ್ಟಿದೆ. ಉತ್ತರ ಅಮೆರಿಕಾ ಗಮನಾರ್ಹ ಪಾಲನ್ನು ಹೊಂದಿದ್ದರೂ, ಏಷ್ಯಾ ಪೆಸಿಫಿಕ್ ಪ್ರದೇಶವು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ವೇವ್ಸ್ 2025 ಅನಿಮೇಷನ್ ಫಿಲ್ಮ್‌‌ ಮೇಕರ್ಸ್ ಚಾಲೆಂಜ್ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ನೋಡಿ: Click here to view the catalogue on the 42 finalists of Animation Filmmakers Challenge.

 

ವೇವ್ಸ್‌ ಕುರಿತು

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here

PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್‌ ಆಗಿ

ವೇವ್ಸ್‌ ಗೆ ನೋಂದಾಯಿಸಿ now

 

*****


Release ID: (Release ID: 2124863)   |   Visitor Counter: 12