WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ ಬಜಾರ್ 9 ಭಾಷೆಗಳಲ್ಲಿನ 15 ಯೋಜನೆಗಳ ತನ್ನ ಮೊದಲ 'ಟಾಪ್ ಸೆಲೆಕ್ಟ್' ಶ್ರೇಣಿಯನ್ನು ಅನಾವರಣಗೊಳಿಸಿದೆ

 Posted On: 25 APR 2025 4:10PM |   Location: PIB Bengaluru

ದೇಶದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಹರಡಿರುವ ಪ್ರತಿಭೆಗಳೊಂದಿಗೆ ಭಾರತವು ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಪ್ರಬಲ ಸ್ಥಾನವನ್ನು ಹೊಂದಿದೆ, ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮೂಲಕ ಆಕರ್ಷಕ ವಿಷಯಗಳನ್ನು ಸೃಷ್ಟಿಸುತ್ತಿದೆ. 2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್), ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ಒಂದು ಮೈಲಿಗಲ್ಲಾಗಲಿದೆ. ಈ ಶೃಂಗಸಭೆಯು ವಿಷಯ (ಕಂಟೆಂಟ್)‌ ಸೃಷ್ಟಿ, ಹೂಡಿಕೆ ತಾಣ ಮತ್ತು 'ಕ್ರಿಯೇಟ್ ಇನ್ ಇಂಡಿಯಾ' ಅವಕಾಶಗಳನ್ನು ಬಳಸಿಕೊಳ್ಳಲು ಹಾಗೂ ಜಾಗತಿಕ ಸಂಪರ್ಕಕ್ಕಾಗಿ ಭಾರತವನ್ನು ಒಂದು ನಿಲುಗಡೆ ತಾಣವಾಗಿ ಉತ್ತೇಜಿಸುತ್ತದೆ.

ವೇವ್ಸ್ ಬಜಾರ್ ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಪ್ರಮುಖ ಜಾಗತಿಕ ಮಾರುಕಟ್ಟೆಯಾಗಿದ್ದು, ಸಂಪರ್ಕ, ಸಹಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಕ್ರಿಯಾತ್ಮಕ ವೇದಿಕೆಯಾಗಿದೆ. ಇದು ಚಲನಚಿತ್ರ ನಿರ್ಮಾಪಕರು ಮತ್ತು ಉದ್ಯಮ ವೃತ್ತಿಪರರಿಗೆ ಖರೀದಿದಾರರು, ಮಾರಾಟಗಾರರು ಮತ್ತು ವ್ಯಾಪಕ ಶ್ರೇಣಿಯ ಯೋಜನೆಗಳು ಮತ್ತು ಪ್ರೊಫೈಲ್‌ ಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಒದಗಿಸುತ್ತದೆ, ಜೊತೆಗೆ ಅವರ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಅವರ ವೃತ್ತಿಪರ ಜಾಲವನ್ನು ವಿಸ್ತರಿಸಲು ಅವಕಾಶವನ್ನು ಒದಗಿಸುತ್ತದೆ.

ವೀಕ್ಷಣಾ ಕೊಠಡಿಯು ವೇವ್ಸ್ ಬಜಾರ್‌ ನಲ್ಲಿ ಸ್ಥಾಪಿಸಲಾದ ಮೀಸಲಾದ ಭೌತಿಕ ವೇದಿಕೆಯಾಗಿದ್ದು, ಇದು 2025 ರ ಮೇ 1 ರಿಂದ 4 ರವರೆಗೆ ನಡೆಯಲಿದೆ. ಇದು ಪ್ರಪಂಚದಾದ್ಯಂತ ಇತ್ತೀಚೆಗೆ ಪೂರ್ಣಗೊಂಡ ಚಲನಚಿತ್ರಗಳು ಮತ್ತು ನಿರ್ಮಾಣ ಹಂತದ ಯೋಜನೆಗಳನ್ನು ಪ್ರದರ್ಶಿಸಲು ಒಂದು ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಈ ಚಲನಚಿತ್ರಗಳು ಚಲನಚಿತ್ರೋತ್ಸವಗಳು, ಜಾಗತಿಕ ಮಾರಾಟ, ವಿತರಣಾ ಪಾಲುದಾರಿಕೆಗಳು ಮತ್ತು ಮುಕ್ತಾಯಗೊಳಿಸಲು ಹಣಕಾಸಿಗಾಗಿ ಅವಕಾಶಗಳನ್ನು ಹುಡುಕುತ್ತಿರುತ್ತವೆ.

ಚಲನಚಿತ್ರ ಪ್ರೋಗ್ರಾಮರ್‌ ಗಳು, ವಿತರಕರು, ವಿಶ್ವ ಮಾರಾಟ ಏಜೆಂಟರು, ಹೂಡಿಕೆದಾರರು ಮತ್ತು ಇತರ ಉದ್ಯಮ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾದ ವೀಕ್ಷಣಾ ಕೊಠಡಿಯು ಸುರಕ್ಷಿತ ವಾತಾವರಣವನ್ನು ಒದಗಿಸುತ್ತದೆ, ಅಲ್ಲಿ ವೇವ್ಸ್ ಬಜಾರ್‌ ಗೆ ಹಾಜರಾಗುವ ಪ್ರತಿನಿಧಿಗಳು ಈ ಚಲನಚಿತ್ರಗಳನ್ನು ವೀಕ್ಷಿಸಬಹುದು, ವಿವರವಾದ ಯೋಜನೆಯ ಮಾಹಿತಿಯನ್ನು ಪಡೆಯಬಹುದು ಮತ್ತು ನಮ್ಮ ವಿಶೇಷ ವೀಕ್ಷಣಾ ಕೊಠಡಿ ಸಾಫ್ಟ್‌ವೇರ್ ಮೂಲಕ ಚಲನಚಿತ್ರ ನಿರ್ಮಾಪಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಹುದು.

ಮೊದಲ ವೇವ್ಸ್ ಬಜಾರ್‌ ಗಾಗಿ, ಭಾರತ, ಶ್ರೀಲಂಕಾ, ಅಮೆರಿಕ, ಸ್ವಿಟ್ಜರ್‌ಲ್ಯಾಂಡ್, ಬಲ್ಗೇರಿಯಾ, ಜರ್ಮನಿ, ಮಾರಿಷಸ್ ಮತ್ತು ಯುಎಇ ಸೇರಿದಂತೆ 8 ದೇಶಗಳ ಒಟ್ಟು 100 ಚಲನಚಿತ್ರಗಳು ವೀಕ್ಷಣಾ ಕೊಠಡಿ ಗ್ರಂಥಾಲಯದಲ್ಲಿ ವೀಕ್ಷಿಸಲು ಲಭ್ಯವಿರುತ್ತವೆ. ಒಟ್ಟಾರೆ ಪ್ರದರ್ಶನ ಶ್ರೇಣಿಯು ಎನ್‌ ಎಫ್‌ ಡಿ ಸಿ ನಿರ್ಮಾಣ ಮತ್ತು ಸಹ-ನಿರ್ಮಾಣದ ಚಲನಚಿತ್ರಗಳ 18 ಶೀರ್ಷಿಕೆಗಳನ್ನು ಒಳಗೊಂಡಿದೆ ಮತ್ತು ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ (ಎನ್‌ ಎಫ್‌ ಎ ಐ) ನಿಂದ ಪುನಃಸ್ಥಾಪಿಸಲಾದ 8 ಕ್ಲಾಸಿಕ್‌ ಗಳನ್ನು ಸೇರಿಸಲಾಗಿದೆ. ಇದು ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್‌ ಟಿ ಐ ಐ, ಪುಣೆ) ಮತ್ತು ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಸ್ ಆರ್‌ ಎಫ್‌ ಟಿ ಐ, ಕೋಲ್ಕತ್ತಾ) 19 ವಿದ್ಯಾರ್ಥಿ ಯೋಜನೆಗಳನ್ನು ಸಹ ಒಳಗೊಂಡಿದೆ.

ವೀಕ್ಷಣಾ ಕೊಠಡಿಯಿಂದ ವೇವ್ಸ್ ಬಜಾರ್ ಟಾಪ್ ಸೆಲೆಕ್ಟ್ ವಿಭಾಗಕ್ಕೆ ಆಯ್ಕೆಯಾದ ಈ 15 ಯೋಜನೆಗಳಲ್ಲಿ 9 ಫೀಚರ್ ಪ್ರಾಜೆಕ್ಟ್‌ ಗಳು, 2 ಸಾಕ್ಷ್ಯಚಿತ್ರಗಳು, 2 ಕಿರುಚಿತ್ರಗಳು ಮತ್ತು 2 ವೆಬ್-ಸರಣಿಗಳು ಸೇರಿವೆ, ಇವುಗಳು ತಮ್ಮ ಚಲನಚಿತ್ರಗಳನ್ನು ನಿರ್ಮಾಪಕರು, ಮಾರಾಟ ಏಜೆಂಟರು, ವಿತರಕರು, ಉತ್ಸವ ಪ್ರೋಗ್ರಾಮರ್‌ ಗಳು ಮತ್ತು ಸಂಭಾವ್ಯ ಹೂಡಿಕೆದಾರರಿಗೆ ಮೇ 2, 2025 ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯುವ ಮುಕ್ತ ಅಧಿವೇಶನದಲ್ಲಿ ಪ್ರದರ್ಶಿಸುತ್ತವೆ.

ವೇವ್ಸ್ ಬಜಾರ್ 2025 ಟಾಪ್ ಸೆಲೆಕ್ಟ್

1. ದ ವೇಜ್‌ ಕಲೆಕ್ಟರ್‌ | ತಮಿಳು | ಭಾರತ | ಫಿಕ್ಷನ್‌

ನಿರ್ದೇಶಕ - ಇನ್ಫಂಟ್ ಸೂಸೈ | ನಿರ್ಮಾಪಕರು - ಭಗವತಿ ಪೆರುಮಾಳ್

2. ಪುಟುಲ್ | ಹಿಂದಿ | ಭಾರತ | ಫಿಕ್ಷನ್‌

ನಿರ್ದೇಶಕ - ರಾಧೇಶ್ಯಾಮ್ ಪಿಪಲ್ವಾ | ನಿರ್ಮಾಪಕ - ಶರದ್ ಮಿತ್ತಲ್

3. ದೂಸ್ರಾ ಬೈಅಹ್ (ಲೆವಿರ್) | ಹರ್ಯಾಣವಿ, ಹಿಂದಿ | ಭಾರತ | ಫಿಕ್ಷನ್‌

ನಿರ್ದೇಶಕ - ಭಗತ್ ಸಿಂಗ್ ಸೈನಿ | ನಿರ್ಮಾಪಕ - ಪರ್ವೀನ್ ಸೈನಿ

4. ಪಂಖುಡಿಯಾನ್ (ಪೆಟಲ್ಸ್‌ ಇನ್‌ ದ ವೈಂಡ್) | ಹಿಂದಿ | ಭಾರತ | ಫಿಕ್ಷನ್‌

‌ನಿರ್ದೇಶಕ - ಅಬ್ದುಲ್ ಅಜೀಜ್ | ನಿರ್ಮಾಪಕರು - ಅಬ್ದುಲ್ ಅಜೀಜ್, ಜ್ಯೋತ್ಸನಾ ರಾಜಪುರೋಹಿತ್

5. ಖಿಡ್ಕಿ ಗಾವ್ (ಇಫ್‌ ಆನ್‌ ಎ ವಿಂಟರ್ಸ್‌ ನೈಟ್) | ಮಲಯಾಳಂ | ಭಾರತ | ಫಿಕ್ಷನ್‌ ‌

ನಿರ್ದೇಶಕ - ಸಂಜು ಸುರೇಂದ್ರನ್ | ನಿರ್ಮಾಪಕ - ಡಾ. ಸುರೇಂದ್ರನ್ ಎಂ ಎನ್

6. ಸುಚನಾ – ದ ಬಿಗಿನಿಂಗ್‌ | ಬಾಂಗ್ಲಾ | ಭಾರತ | ಫಿಕ್ಷನ್‌

ನಿರ್ದೇಶಕ - ಪೌಸಾಲಿ ಸೇನ್‌ ಗುಪ್ತಾ | ನಿರ್ಮಾಪಕ - ಅವಿನಂದ ಸೇನ್ ಗುಪ್ತಾ

7. ಸ್ವಾಹಾ -ಇನ್‌ ದ ನೇಮ್‌ ಆಫ್ ಫೈರ್‌ | ಮಗಾಹಿ | ಭಾರತ | ಫಿಕ್ಷನ್‌

‌ನಿರ್ದೇಶಕ - ಅಭಿಲಾಷ್ ಶರ್ಮಾ | ನಿರ್ಮಾಪಕ - ವಿಕಾಶ್ ಶರ್ಮ

8. ಗೋಟಿಪುವಾ – ಬಿಯಾಂಡ್‌ ಬಾರ್ಡರ್ಸ್‌ | ಇಂಗ್ಲೀಷ್, ಹಿಂದಿ, ಒಡಿಯಾ | ಭಾರತ | ಸಾಕ್ಷ್ಯಚಿತ್ರ

ನಿರ್ದೇಶಕ ಮತ್ತು ನಿರ್ಮಾಪಕ - ಚಿಂತನ್ ಪರೇಖ್

9. ಫ್ರಮ್‌ ಇಂಡಿಯಾ | ಇಂಗ್ಲೀಷ್ | ಅಮೆರಿಕಾ | ಕಿರು ಸಾಕ್ಷ್ಯಚಿತ್ರ

ನಿರ್ದೇಶಕ ಮತ್ತು ನಿರ್ಮಾಪಕ - ಮಂದರ್ ಆಪ್ಟೆ

10. ಥರ್ಡ್‌ ಫ್ಲೋರ್ | ಹಿಂದಿ | ಭಾರತ | ಕಿರುಚಿತ್ರ

‌ನಿರ್ದೇಶಕ - ಅಮನದೀಪ್ ಸಿಂಗ್ | ನಿರ್ಮಾಪಕ - ಅಮನದೀಪ್ ಸಿಂಗ್

11. ಜಹಾ | ಹಿಂದಿ | ಭಾರತ | ಫಿಕ್ಷನ್‌

ನಿರ್ದೇಶಕ ಮತ್ತು ನಿರ್ಮಾಪಕ - ರಾಹುಲ್ ಶೆಟ್ಟಿ

12. ಪ್ಲಾನೆಟ್ ಇಂಡಿಯಾ | ಇಂಗ್ಲೀಷ್, ಹಿಂದಿ | ಭಾರತ | ಟಿವಿ ಕಾರ್ಯಕ್ರಮ

ನಿರ್ದೇಶಕ - ಕಾಲಿನ್ ಬಟ್‌ಫೀಲ್ಡ್ | ನಿರ್ಮಾಪಕ - ತಮ್ಸೀಲ್ ಹುಸೇನ್

13. ಭಾರ್ತಿ ಔರ್ ಬಿಬೋ | ಹಿಂದಿ | ಭಾರತ | ಅನಿಮೇಷನ್ ವೆಬ್-ಸರಣಿ/ಟಿವಿ

‌ನಿರ್ದೇಶಕರು - ಸ್ನೇಹಾ ರವಿಶಂಕರ್ ನಿರ್ಮಾಪಕರು - ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ & ಪಪ್ಪೆಟಿಕಾ ಮೀಡಿಯಾ ಪ್ರೈ.ಲಿ. ಲಿಮಿಟೆಡ್

14.ಅಚ್ಚಪ್ಪಾಸ್‌ ಆಲ್ಬಮ್ (ಗ್ರಾಂಪಾಸ್ ಆಲ್ಬಮ್) | ಮಲಯಾಳಂ | ಭಾರತ | ಫಿಕ್ಷನ್‌ ‌ನಿರ್ದೇಶಕರು - ದೀಪ್ತಿ ಪಿಳ್ಳೆ ಶಿವನ್ | ನಿರ್ಮಾಪಕರು - ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ

15. ದುನಿಯಾ ನಾ ಮಾನೆ (ದ ಅನ್‌ಎಕ್ಸ್‌ಪೆಕ್ಟೆಡ್) | ಹಿಂದಿ | ಭಾರತ | ಫಿಕ್ಷನ್‌ ‌

ನಿರ್ದೇಶಕ ಮತ್ತು ನಿರ್ಮಾಪಕ - ವಿ.ಶಾಂತಾರಾಮ್

ವೇವ್ಸ್ಕುರಿತು

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here

PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್‌ ಆಗಿ

ವೇವ್ಸ್‌ ಗೆ ನೋಂದಾಯಿಸಿ now

 

*****

 

 

 


Release ID: (Release ID: 2124364)   |   Visitor Counter: 13