ಗೃಹ ವ್ಯವಹಾರಗಳ ಸಚಿವಾಲಯ
ಪರಮ ಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ದಿನವಾದ 2025ರ ಏಪ್ರಿಲ್ 26 ರಂದು ಶೋಕಾಚರಣೆ
प्रविष्टि तिथि:
24 APR 2025 4:50PM by PIB Bengaluru
ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯು 2025ರ ಏಪ್ರಿಲ್ 26̧ ಶನಿವಾರದಂದು ನಡೆಯಲಿದೆ. ಆ ದಿನದಂದು ದೇಶಾದ್ಯಂತ ಶೋಕಾಚರಣೆ ಆಚರಿಸಲಾಗುತ್ತದೆ. ಭಾರತದಾದ್ಯಂತ ರಾಷ್ಟ್ರ ಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳಲ್ಲಿ 2025ರ ಏಪ್ರಿಲ್ 26 ರಂದು ಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುವುದು ಮತ್ತು ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮ ಇರುವುದಿಲ್ಲ.
ಕ್ರೈಸ್ತ ಧರ್ಮಗುರುಗಳಾದ ಪರಮ ಪೂಜ್ಯ ಪೋಪ್ ಫ್ರಾನ್ಸಿಸ್ ಅವರ ನಿಧನದ ಗೌರವಾರ್ಥ ಭಾರತ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿತ್ತು. 2025ರ ಏಪ್ರಿಲ್ 22 ಮತ್ತು ಏಪ್ರಿಲ್ 23 ರಂದು ಎರಡು ದಿನಗಳ ಶೋಕಾಚರಣೆ ಬಳಿಕ ಅಂತ್ಯಕ್ರಿಯೆಯ ದಿನದಂದು ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುತ್ತದೆ.
*****
(रिलीज़ आईडी: 2124275)
आगंतुक पटल : 38
इस विज्ञप्ति को इन भाषाओं में पढ़ें:
Gujarati
,
Assamese
,
Khasi
,
English
,
Urdu
,
हिन्दी
,
Marathi
,
Nepali
,
Bengali
,
Punjabi
,
Tamil
,
Telugu
,
Malayalam