ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪ್ರಾದೇಶಿಕ ಬೇರುಗಳಿಂದ ರಾಷ್ಟ್ರ ಮಟ್ಟದಲ್ಲಿ ಮಿನುಗುವವರೆಗೆ


ʻವೇವ್ಸ್-2025ʼ ಶೃಂಗದಲ್ಲಿ ಭಾರತದ ಅತ್ಯುತ್ತಮ ಸೃಷ್ಟಿಕರ್ತರಿಗೆ ಕಿರೀಟ ತೊಡಿಸಲಿರುವ ʻವಾಮ್ʼ!

 Posted On: 21 APR 2025 4:08PM |   Location: PIB Bengaluru

ಹಲವು ತಿಂಗಳ ಪ್ರಾದೇಶಿಕ ಸ್ಪರ್ಧೆಗಳು ಮತ್ತು ಸಾವಿರಾರು ನೋಂದಣಿಗಳ ಬಳಿಕ, ಭಾರತದಾದ್ಯಂತ 11 ನಗರಗಳಿಂದ ಅಂತಿಮ ಸ್ಪರ್ಧಿಗಳು ʻವೇವ್ಸ್ ಅನಿಮೆ & ಮಾಂಗಾ ಸ್ಪರ್ಧೆʼ (ವಾಮ್‌) ರಾಷ್ಟ್ರೀಯ ಫಿನಾಲೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಮುಂಬೈನ ʻಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ʼನಲ್ಲಿ ಮೇ 1 ರಿಂದ 4 ರವರೆಗೆ ಭಾರತದ ಮೊದಲ ಮಾಧ್ಯಮ ಮತ್ತು ಮನರಂಜನಾ ಶೃಂಗಸಭೆಯಾದ ʻವೇವ್ಸ್-2025ʼರಲ್ಲಿ ಪ್ರತಿಷ್ಠಿತ ಕಾರ್ಯಕ್ರಮ ನಡೆಯಲಿದೆ.

ʻವಾಮ್!ʼ ಅನ್ನು ʻಭಾರತದ ಮಾಧ್ಯಮ ಮತ್ತು ಮನರಂಜನಾ ಸಂಘʼ(ಎಂಇಎಐ) ಆಯೋಜಿಸುತ್ತಿದ್ದು, ʻವೇವ್ಸ್ʼ(ವಿಶ್ವ ದೃಶ್ಯ-‍ಶ್ರಾವ್ಯ ಮನರಂಜನಾ ಶೃಂಗಸಭೆʼ) ಭಾಗವಾಗಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇದನ್ನು ಬೆಂಬಲಿಸಿದೆ. ʻಎವಿಜಿಸಿ-ಎಕ್ಸ್ಆರ್ ವಲಯ-ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ʻಎಕ್ಸೆಂಡೆಡ್‌ ರಿಯಾಲಿಟಿʼಗೆ ವೇವ್ಸ್ ಭಾರತದ ಅತಿದೊಡ್ಡ ವೇದಿಕೆಯಾಗಿದೆ. ʻವೇವ್ಸ್ʼನ ಕೇಂದ್ರ ಬಿಂದುವೆಂದರೆ ಅದು ʻಭಾರತದಲ್ಲಿ ಸೃಷ್ಟಿಸಿ ಸವಾಲುʼ (ʻಕ್ರಿಯೇಟ್ ಇನ್ ಇಂಡಿಯಾ-ಸಿಐಸಿ). 1,100 ಅಂತಾರಾಷ್ಟ್ರೀಯ ಸ್ಪರ್ಧಿಗಳು ಸೇರಿದಂತೆ  ಸುಮಾರು 1 ಲಕ್ಷ ನೋಂದಣಿಗಳೊಂದಿಗೆ ʻಸಿಐಸಿʼಯ ಆವೃತ್ತಿ 1 ಹೊಸ ಇತಿಹಾಸ ನಿರ್ಮಿಸಿದೆ. ವಿವರವಾದ ಆಯ್ಕೆ ಪ್ರಕ್ರಿಯೆಯ ನಂತರ, 32 ವಿಶಿಷ್ಟ ಸ್ಪರ್ಧೆಗಳಿಂದ 750ಕ್ಕೂ ಹೆಚ್ಚು ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ.

ʻಸಿಐಸಿʼ ಅಡಿಯಲ್ಲಿನ ಅತ್ಯುತ್ತಮ ವಿಭಾಗಗಳಲ್ಲಿ ʻವಾಮ್‌!ʼ ಒಂದಾಗಿದೆ. ಕಳೆದ ದಶಕದಲ್ಲಿ, ʻಅನಿಮೆʼ ಮತ್ತು ʻಮಾಂಗಾʼ ವಿಭಾಗಗಳು ಭಾರತದಲ್ಲಿ ವೇಗವಾಗಿ ಬೆಳೆದಿವೆ. ಒಂದು ಪ್ರಮುಖ ಆಸಕ್ತಿಯಾಗಿ ಪ್ರಾರಂಭವಾದದ್ದು ಈಗ ಅದೊಂದು ಪ್ರಮುಖ ಸಾಂಸ್ಕೃತಿಕ ಅಲೆಯಾಗಿದೆ. ಭಾರತವು ಸುಮಾರು 180 ದಶಲಕ್ಷ ಅನಿಮೆ ಅಭಿಮಾನಿಗಳನ್ನು ಹೊಂದಿದ್ದು, ಚೀನಾದ ನಂತರ ಎರಡನೇ ಅತಿದೊಡ್ಡ ʻಅನಿಮೆʼ ಮಾರುಕಟ್ಟೆಯಾಗಿದೆ. ಈ ಬೆಳವಣಿಗೆಯು ಕೇವಲ ಅಭಿಮಾನಿಗಳಲ್ಲಿ ಮಾತ್ರವಲ್ಲ, ಸಂಖ್ಯೆಯಲ್ಲೂ ಇದೆ. 2023ರಲ್ಲಿ, ಭಾರತೀಯ ಅನಿಮೆ ಮಾರುಕಟ್ಟೆಯ ಮೌಲ್ಯ 1,642.5 ದಶಲಕ್ಷ ಡಾಲರ್ ಆಗಿತ್ತು. ಇದು 2032 ರ ವೇಳೆಗೆ 5,036 ದಶಲಕ್ಷ ಡಾಲರ್‌ ತಲುಪುವ ನಿರೀಕ್ಷೆಯಿದೆ.

ʻವಾಮ್‌!ʼ ಭಾರತೀಯ ಸೃಷ್ಟಿಕರ್ತರಿಗೆ ಮೂಲ ʻಐಪಿʼಗಳನ್ನು (ಬೌದ್ಧಿಕ ಆಸ್ತಿ) ಅಭಿವೃದ್ಧಿಪಡಿಸಲು ಮತ್ತು ಪರಿಚಯಿಸಲು ರಚನಾತ್ಮಕ ಅವಕಾಶಗಳನ್ನು ನೀಡುವ ಮೂಲಕ ಬೆಳೆಯುತ್ತಿರುವ ಸೃಜನಶೀಲ ಶಕ್ತಿಯನ್ನು ಬಳಸಿಕೊಳ್ಳಲಿದೆ. ಇದು ಮೂಲ, ಸಾಂಸ್ಕೃತಿಕವಾಗಿ ಬೇರೂರಿರುವ ʻಐಪಿʼಗಳನ್ನು ಉತ್ತೇಜಿಸುವ ಮೂಲಕ ಭಾರತದ ಮಾಧ್ಯಮ ಉದ್ಯಮದಲ್ಲಿನ ಅಂತರವನ್ನು ಭರ್ತಿ ಮಾಡಲಿದೆ. ಜಾಗತಿಕ ʻಅನಿಮೆʼಯ ಏರಿಕೆ ಮತ್ತು ಬೆಳೆಯುತ್ತಿರುವ ಡಿಜಿಟಲ್ ಸಾಕ್ಷರತೆಯೊಂದಿಗೆ, ʻವಾಮ್‌!ʼ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಆಲೋಚನೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸುತ್ತದೆ. ಇದು ಐಪಿಗಳನ್ನು ಅಭಿವೃದ್ಧಿಪಡಿಸಲು, ಉದ್ಯಮ ಮಾರ್ಗದರ್ಶನಕ್ಕೆ ಪ್ರವೇಶ ಮತ್ತು ಸರ್ಕಾರದಿಂದ ಬೆಂಬಲವನ್ನು ಒದಗಿಸಲು ಸ್ಪಷ್ಟ ಮಾರ್ಗವನ್ನು ಒದಗಿಸುತ್ತದೆ.

ದೃಷ್ಟಿಕೋನವನ್ನು ಜೀವಂತಗೊಳಿಸಲು, ಅನೇಕ ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು: ʻಮಾಂಗಾʼ (ವಿದ್ಯಾರ್ಥಿ ಮತ್ತು ವೃತ್ತಿಪರರು), ʻಅನಿಮೆʼ (ವಿದ್ಯಾರ್ಥಿ ಮತ್ತು ವೃತ್ತಿಪರರು), ʻವೆಬ್‌ಟೂನ್ʼ(ವಿದ್ಯಾರ್ಥಿ ಮತ್ತು ವೃತ್ತಿಪರರು), ಧ್ವನಿ ನಟನೆ ಮತ್ತು ʻಕಾಸ್‌ಪ್ಲೇʼ. ಸ್ಪರ್ಧಿಗಳನ್ನು ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಲ್ಲಿ ಎಚ್ಚರಿಕೆಯಿಂದ ಆಯ್ಕೆ ಮಾಡಲಾಯಿತು. ಗುವಾಹಟಿ, ಕೋಲ್ಕತಾ, ಭುವನೇಶ್ವರ, ವಾರಾಣಸಿ, ದೆಹಲಿ, ಮುಂಬೈ, ನಾಗ್ಪುರ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ 11 ನಗರಗಳಲ್ಲಿ ಸ್ಪರ್ಧೆಗಳು ನಡೆದವು. ಅನಿಮೇಷನ್, ಕಾಮಿಕ್ಸ್, ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳ ಉದ್ಯಮ ತಜ್ಞರನ್ನು ಒಳಗೊಂಡ ವಿಶೇಷ ತೀರ್ಪುಗಾರರು ಪ್ರತಿ ನಗರದ ವಿಜೇತರನ್ನು ಆಯ್ಕೆ ಮಾಡಿದರು. ಅವರ ಪರಿಣತಿಯು ಧ್ವನಿಗಳು ಮತ್ತು ಕಥೆ ಹೇಳುವ ಸಂಪ್ರದಾಯಗಳ ವೈವಿಧ್ಯತೆಯನ್ನು ಪ್ರತಿನಿಧಿಸುವ ಉನ್ನತ-ಸಾಮರ್ಥ್ಯದ ಪ್ರತಿಭೆಗಳ ಆಯ್ಕೆಯನ್ನು ಖಚಿತಪಡಿಸಿತು. ಪ್ರಾದೇಶಿಕ ಸುತ್ತುಗಳು ಭಾರತದ ಶ್ರೀಮಂತ ಭಾಷಾ ಮತ್ತು ಕಲಾತ್ಮಕ ವೈವಿಧ್ಯತೆಯನ್ನು ಎತ್ತಿ ತೋರಿಸಿದವು, ಸೃಜನಶೀಲ ಪ್ರತಿಭೆಗಳಿಗೆ ಯಾವುದೇ ಗಡಿಗಳಿಲ್ಲ ಎಂದು ಸಾಬೀತುಪಡಿಸಿತು.

ಬಲವಾದ ಅಡಿಪಾಯದೊಂದಿಗೆ, ರಾಷ್ಟ್ರೀಯ ಫಿನಾಲೆಯು ಕೇವಲ ಆಚರಣೆಯಾಗಿ ಉಳಿದಿಲ್ಲ - ಇದು ಉಡ್ಡಯನ ವೇದಿಕೆಯಾಗಿದೆ. ಸ್ಪರ್ಧಿಗಳಿಗೆ ಉದ್ಯಮ-ಸನ್ನದ್ಧ ವೃತ್ತಿಪರರಾಗಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಇದು ಲೈವ್ ಪಿಚಿಂಗ್ ಸೆಷನ್‌ಗಳು, ಉತ್ಪಾದನಾ ಸ್ಟುಡಿಯೋಗಳೊಂದಿಗೆ ಸಂಪರ್ಕ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ದೈತ್ಯರೊಂದಿಗೆ ಸಂಪರ್ಕ ಬೆಳೆಸುವ ಅವಕಾಶಗಳನ್ನು ಪ್ರದರ್ಶಿಸುತ್ತದೆ.

ಅಂತಿಮಗೊಳಿಸಾದ ಸೃಷ್ಟಿಕರ್ತರು ಈಗ ʻವಾಮ್‌ʼಗಾಗಿ ಮುಂಬೈಗೆ ತೆರಳುತ್ತಾರೆ! ʻವೇವ್ಸ್ -2025ʼರಲ್ಲಿ ನಡೆಯುವ ರಾಷ್ಟ್ರೀಯ ಫಿನಾಲೆಯಲ್ಲಿ ಸ್ಪರ್ಧಿಗಳು ತಮ್ಮ ಕೃತಿಗಳನ್ನು ಅಂತಾರಾಷ್ಟ್ರೀಯ ತೀರ್ಪುಗಾರರು ಮತ್ತು ನೇರ ಪ್ರೇಕ್ಷಕರಿಗೆ ಪ್ರಸ್ತುತಪಡಿಸುತ್ತಾರೆ. ಫಿನಾಲೆ ಹೆಚ್ಚಿನ ನಿರೀಕ್ಷೆಯ ಉತ್ಸಾಹವನ್ನು ನೀಡುತ್ತದೆ, ವಿಜೇತರು ಕೆಳಗಿನವುಗಳನ್ನು ಪಡೆಯುತ್ತಾರೆ:

  • ಟೋಕಿಯೊದಲ್ಲಿನಡೆಯುವ ʻಅನಿಮೆ ಜಪಾನ್-2026ʼಗೆ ಎಲ್ಲಾ ವೆಚ್ಚ-ಪಾವತಿಸಿದ ಪ್ರವಾಸ
  • ಗುಲ್ಮೋಹರ್ ಮೀಡಿಯಾದಿಂದ ಹಿಂದಿ, ಇಂಗ್ಲಿಷ್ ಮತ್ತು ಜಪಾನೀಸ್ ಭಾಷೆಗಳಲ್ಲಿ ಅನಿಮೆ ಡಬ್ಬಿಂಗ್
  • ʻಟೂನ್‌ಸೂತ್ರʼದಿಂದ ವೆಬ್ಟೂನ್ ಪ್ರಕಾಶನ

ʻವಾಮ್‌!ʼ ಇದು ಸ್ಪರ್ಧೆಗಿಂತ ಮಿಗಿಲಾದದ್ದು.  ಇದು ಭಾರತದ ಮಾಧ್ಯಮ ಕ್ಷೇತ್ರದಲ್ಲಿನ ಪ್ರಮುಖ ಅಂತರವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಸಾಂಸ್ಕೃತಿಕ ಆಂದೋಲನವಾಗಿದೆ: ಜಾಗತಿಕವಾಗಿ ಅಗಾಧತೆ, ಭಾರತೀಯ ಕಥೆಗಳಲ್ಲಿ ಬೇರೂರಿರುವ ಮೂಲ ವಿಷಯದ ಕೊರತೆಯನ್ನು ಇದು ಪರಿಹರಿಸಲಿದೆ. ʻವೇವ್ಸ್-2025ʼ ಸಮೀಪಿಸುತ್ತಿದ್ದಂತೆ, ಉತ್ಸಾಹವು ಹೆಚ್ಚಾಗುತ್ತದೆ. ಇದು ಪ್ರತಿಭೆ, ಸ್ವಂತಿಕೆ ಮತ್ತು ಕಥೆ ಹೇಳುವ ಪರಿವರ್ತಕ ಶಕ್ತಿಯ ಆಚರಣೆಯಾಗಿದೆ.

ಉಲ್ಲೇಖಗಳು

Click here to download PDF

 

*****


Release ID: (Release ID: 2123186)   |   Visitor Counter: Visitor Counter : 11