ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಏಪ್ರಿಲ್ 21ರಂದು 17ನೇ ನಾಗರಿಕ ಸೇವಾ ದಿನದಂದು ದೇಶದ ನಾಗರಿಕ ಸೇವಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ 17ನೇ ನಾಗರಿಕ ಸೇವಾ ದಿನದಂದು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ
ನಾಗರಿಕ ಸೇವಾ ದಿನವು ಭಾರತದಾದ್ಯಂತದ ನಾಗರಿಕ ಸೇವಕರಿಗೆ ನಾಗರಿಕರ ಉದ್ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಮತ್ತು ಸಾರ್ವಜನಿಕ ಸೇವೆ ಮತ್ತು ಅವರ ಕೆಲಸದಲ್ಲಿ ಉತ್ಕೃಷ್ಟತೆಗೆ ತಮ್ಮ ಬದ್ಧತೆಯನ್ನು ನವೀಕರಿಸಲು ಒಂದು ಸಂದರ್ಭವಾಗಿದೆ
Posted On:
20 APR 2025 12:39PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಏಪ್ರಿಲ್ 21ರಂದು 17ನೇ ನಾಗರಿಕ ಸೇವಾ ದಿನದಂದು ದೇಶದ ನಾಗರಿಕ ಸೇವಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿಲ್ಲೆಗಳು ಮತ್ತು ಕೇಂದ್ರ/ ರಾಜ್ಯ ಸರ್ಕಾರಗಳಿಗೆ ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳು ಮತ್ತು ನಾವಿನ್ಯತೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮಗ್ರ ಅಭಿವೃದ್ಧಿ ಮತ್ತು ಗುರುತಿಸಲಾದ ಆದ್ಯತೆಯ ಕಾರ್ಯಕ್ರಮಗಳು ಮತ್ತು ಆವಿಷ್ಕಾರಗಳ ಅನುಷ್ಠಾನದ ಯಶೋಗಾಥೆಗಳನ್ನು ಒಳಗೊಂಡ ಇ-ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಶಸ್ತಿ ಪ್ರದಾನ ಮಾಡುವ ಮೊದಲು ಪ್ರಶಸ್ತಿ ವಿಜೇತ ಉಪಕ್ರಮಗಳ ಚಲನಚಿತ್ರವನ್ನು ಸಹ ಪ್ರದರ್ಶಿಸಲಾಗುವುದು. ರಾಷ್ಟ್ರೀಯ ನಾಗರಿಕ ಸೇವಾ ದಿನಾಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವುದು ಇದು 7ನೇ ಬಾರಿ.
ನಾಗರಿಕ ಸೇವಾ ದಿನವು ಭಾರತದಾದ್ಯಂತದ ನಾಗರಿಕ ಸೇವಕರಿಗೆ ನಾಗರಿಕರ ಉದ್ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಲು ಮತ್ತು ಸಾರ್ವಜನಿಕ ಸೇವೆಗೆ ತಮ್ಮ ಬದ್ಧತೆಯನ್ನು ನವೀಕರಿಸಲು ಮತ್ತು ತಮ್ಮ ಕೆಲಸದಲ್ಲಿ ಉತ್ಕೃಷ್ಟತೆಯನ್ನು ನವೀಕರಿಸಲು ಒಂದು ಸಂದರ್ಭವಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ರಲ್ಲಿ ದೆಹಲಿಯ ಮೆಟ್ಕಾಫ್ ಹೌಸ್ ನಲ್ಲಿ ಆಡಳಿತ ಸೇವಾ ಅಧಿಕಾರಿಗಳ ಪ್ರೊಬೇಷನರಿಗಳನ್ನು ಉದ್ದೇಶಿಸಿ ಮಾತನಾಡಿದ ದಿನದ ನೆನಪಿಗಾಗಿ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ನಾಗರಿಕ ಸೇವಾ ದಿನದ ಅಂಗವಾಗಿ, ಸರ್ಕಾರವು ನವದೆಹಲಿಯ ವಿಜ್ಞಾನ ಭವನದಲ್ಲಿ ಒಂದು ದಿನದ ನಾಗರಿಕ ಸೇವಾ ದಿನದ ಸಮ್ಮೇಳನವನ್ನು ಆಯೋಜಿಸುತ್ತಿದೆ.
ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಿಲ್ಲೆಗಳು ಮತ್ತು ಸಂಸ್ಥೆಗಳು ಮಾಡಿದ ಅಸಾಧಾರಣ ಮತ್ತು ನವೀನ ಕಾರ್ಯಗಳನ್ನು ಗುರುತಿಸಲು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಪ್ರಧಾನ ಮಂತ್ರಿ ಪ್ರಶಸ್ತಿಗಳ ಯೋಜನೆಯನ್ನು ಸ್ಥಾಪಿಸಲಾಗಿದೆ. ಪ್ರಧಾನ ಮಂತ್ರಿ ಪ್ರಶಸ್ತಿ ಯೋಜನೆ 2024 ಗಾಗಿ, 2025 ರ ನಾಗರಿಕ ಸೇವಾ ದಿನದಂದು ನೀಡಲಾಗುವ ಪ್ರಶಸ್ತಿಗಳಿಗೆ ಈ ಕೆಳಗಿನ ಆದ್ಯತೆಯ ಕಾರ್ಯಕ್ರಮಗಳನ್ನು ಗುರುತಿಸಲಾಗಿದೆ: (ಎ) ವರ್ಗ 1 - ಜಿಲ್ಲೆಗಳ ಸಮಗ್ರ ಅಭಿವೃದ್ಧಿ (ಬಿ) ವರ್ಗ 2 - ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮ (ಸಿ) ವರ್ಗ 3 - ನಾವೀನ್ಯತೆ. ಸಮಗ್ರ ಮೌಲ್ಯಮಾಪನದ ನಂತರ 1588 ನಾಮನಿರ್ದೇಶನಗಳಿಂದ 14 ಪ್ರಶಸ್ತಿ ವಿಜೇತರನ್ನು ಅಂತಿಮಗೊಳಿಸಲಾಗಿದೆ. ಪ್ರಧಾನ ಮಂತ್ರಿಗಳ ಪ್ರಶಸ್ತಿಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ: (i) ಟ್ರೋಫಿ, (ii) ಸ್ಕ್ರಾಲ್ (ಕರಡುಪ್ರತಿ) ಮತ್ತು (iii) ಯೋಜನೆ/ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅಥವಾ ಸಾರ್ವಜನಿಕ ಕಲ್ಯಾಣದ ಯಾವುದೇ ಕ್ಷೇತ್ರದಲ್ಲಿನ ಸಂಪನ್ಮೂಲಗಳ ಅಂತರವನ್ನು ನೀಗಿಸಲು ಬಳಸಲು ಪ್ರಶಸ್ತಿ ಪಡೆದ ಜಿಲ್ಲೆ/ಸಂಸ್ಥೆಗೆ 20 ಲಕ್ಷ ರೂ.ಗಳ ಪ್ರೋತ್ಸಾಹಧನವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಂಪುಟ ಕಾರ್ಯದರ್ಶಿ ಡಾ.ಟಿ.ವಿ.ಸೋಮನಾಥನ್ ಅವರ ಅಧ್ಯಕ್ಷತೆಯಲ್ಲಿ 'ನಾಗರಿಕ ಸೇವೆಗಳ ಸುಧಾರಣೆಗಳು- ಸವಾಲುಗಳು ಮತ್ತು ಅವಕಾಶಗಳು' ಕುರಿತ ಸಮಗ್ರ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ನಗರ ಸಾರಿಗೆಯನ್ನು ಬಲಪಡಿಸುವುದು, ಆಯುಷ್ಮಾನ್ ಭಾರತ್ ಪಿಎಂ - ಜನ ಆರೋಗ್ಯ ಯೋಜನೆ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರದ ಮೂಲಕ ಸ್ವಸ್ಥ ಭಾರತವನ್ನು ಉತ್ತೇಜಿಸುವುದು, ಮಿಷನ್ ಸಾಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಠಿಕಾಂಶವನ್ನು ಉತ್ತೇಜಿಸುವುದು, ಮಹತ್ವಾಕಾಂಕ್ಷೆಯ ಬ್ಲಾಕ್ ಗಳ ಕಾರ್ಯಕ್ರಮ ಕುರಿತು ನಾಲ್ಕು ಪ್ರತ್ಯೇಕ ಅಧಿವೇಶನಗಳನ್ನು ನಡೆಸಲಾಗುವುದು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮತ್ತು ವಿದ್ಯುತ್ ಸಚಿವರಾದ ಶ್ರೀ ಮನೋಹರ್ ಲಾಲ್ ಅವರು ನಗರ ಸಾರಿಗೆಯನ್ನು ಬಲಪಡಿಸುವ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಆಯುಷ್ಮಾನ್ ಭಾರತ್ ಪಿಎಂ ಜನ ಆರೋಗ್ಯ ಯೋಜನೆ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರದ ಮೂಲಕ ಸ್ವಸ್ಥ ಭಾರತವನ್ನು ಉತ್ತೇಜಿಸುವ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ಮಿಷನ್ ಸಾಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಠಿಕಾಂಶವನ್ನು ಉತ್ತೇಜಿಸುವ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ. ನೀತಿ ಆಯೋಗದ ಸಿಇಓ ಶ್ರೀ ಬಿ.ವಿ.ಆರ್. ಸುಬ್ರಮಣ್ಯಂ ಅವರು ಮಹತ್ವಾಕಾಂಕ್ಷೆಯ ಬ್ಲಾಕ್ ಗಳ ಕಾರ್ಯಕ್ರಮದ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು, ಸಹಾಯಕ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕೇಂದ್ರ ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ನಿವಾಸಿ ಆಯುಕ್ತರು, ಕೇಂದ್ರ ಸೇವೆಗಳ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
*****
(Release ID: 2123041)
Visitor Counter : 16
Read this release in:
Tamil
,
Malayalam
,
Assamese
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia