ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್‌ಗಾಗಿ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಏಪ್ರಿಲ್ 21, 22 ಮತ್ತು 23 ರಂದು ಮೂರು ದಿನಗಳವರೆಗೆ ಪುನರಾರಂಭಗೊಳ್ಳುತ್ತದೆ!


ಅರ್ಜಿಗಳನ್ನು ಸಲ್ಲಿಸಲು ಮತ್ತು ನೋಂದಾಯಿಸಿಕೊಳ್ಳಲು ಎಲ್ಲಾ ಮಾಧ್ಯಮ ವ್ಯಕ್ತಿಗಳಿಗೆ ಕೊನೆಯ ಕರೆ

 Posted On: 20 APR 2025 2:37PM |   Location: PIB Bengaluru

ಮಾಧ್ಯಮ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, 2025ರ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್‌) ಗಾಗಿ ಮಾಧ್ಯಮ ಪ್ರತಿನಿಧಿಗಳ ನೋಂದಣಿಯನ್ನು ಮೂರು ದಿನಗಳವರೆಗೆ - ಏಪ್ರಿಲ್ 21 (ಸೋಮವಾರ), ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ) ಪುನಃ ತೆರೆಯಲಾಗುತ್ತಿದೆ. ಮಾಧ್ಯಮ ವೃತ್ತಿಪರರು, ಛಾಯಾಗ್ರಾಹಕರು ಮತ್ತು ಡಿಜಿಟಲ್ ಕಂಟೆಂಟ್‌ ರಚನೆಕಾರರು ಅರ್ಜಿ ಸಲ್ಲಿಸಲು ಮತ್ತು ಮೇ 1-4, 2025 ರಂದು ಮುಂಬೈನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಮಾಧ್ಯಮ ಮತ್ತು ಮನರಂಜನೆ (ಎಂ&ಇ) ಕಾರ್ಯಕ್ರಮದ ಭಾಗವಾಗಲು ಇದು ಕೊನೆಯ ಅವಕಾಶವಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಆರ್ಥಿಕತೆಯನ್ನು ಬೆಳೆಸುವಲ್ಲಿ ನಿಮ್ಮ ವರದಿಗಯು ಪ್ರಮುಖ ಪಾತ್ರ ವಹಿಸುತ್ತದೆ.

ನೋಂದಣಿ ಲಿಂಕ್: https://app.wavesindia.org/register/media.

ನೀವು ಹಿಂದಿನ ಗಡುವನ್ನು ತಪ್ಪಿಸಿಕೊಂಡಿದ್ದರೆ, 'ಸಲ್ಲಿಸು' ಕ್ಲಿಕ್ ಮಾಡಲು ಇದು ನಿಮಗೆ ಕೊನೆಯ ಅವಕಾಶವಾಗಿದೆ ಮತ್ತು ವಿಶೇಷ ಅಧಿವೇಶನಗಳು, ನೆಟ್‌ವರ್ಕಿಂಗ್ ಅವಕಾಶಗಳು ಮತ್ತು ಮನರಂಜನೆಯ ಭವಿಷ್ಯವನ್ನು ರೂಪಿಸುವ ಉದ್ಯಮ ವೃತ್ತಿಪರರೊಂದಿಗೆ ಮುಖಾಮುಖಿಯಾಗುವ ಅವಕಾಶವನ್ನು ಪಡೆಯಿರಿ.

ಯಾರು ಅರ್ಜಿ ಸಲ್ಲಿಸಬಹುದು?

  • ಪತ್ರಕರ್ತರು (ಮುದ್ರಣ, ದೂರದರ್ಶನ, ರೇಡಿಯೋ)
  • ಛಾಯಾಗ್ರಾಹಕರು/ಕ್ಯಾಮೆರಾಪರ್ಸನ್
  • ಸ್ವತಂತ್ರ ಮಾಧ್ಯಮ ವೃತ್ತಿಪರರು
  • ಡಿಜಿಟಲ್ ಕಂಟೆಂಟ್ ರಚನೆಕಾರರು

ಅಗತ್ಯವಿರುವ ದಾಖಲೆಗಳು:

  • ಸರ್ಕಾರ ನೀಡಿದ ಗುರುತಿ  ಪತ್ರ
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಮಾಧ್ಯಮ ಸಂಬಂಧದ ಪುರಾವೆ
  • 10 ಕೆಲಸದ ಮಾದರಿಗಳು (ಲಿಂಕ್‌ ಗಳು ಅಥವಾ ಸ್ಕ್ರೀನ್‌ಶಾಟ್‌)
  • ವೀಸಾ (ಅಂತರರಾಷ್ಟ್ರೀಯ ಅರ್ಜಿದಾರರಿಗೆ)

ನೋಂದಣಿ ಪ್ರಾರಂಭವಾಗುವ ದಿನಾಂಕ: 21 ಏಪ್ರಿಲ್ 2025

ನೋಂದಣಿ ಮುಕ್ತಾಯವಾಗುವ ಕೊನೆಯ ದಿನಾಂಕ: 23ನೇ ಏಪ್ರಿಲ್ 2025 ರಾತ್ರಿ 11:59 ರೊಳಗೆ

ಅನುಮೋದಿತ ಪ್ರತಿನಿಧಿಗಳಿಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ ಮತ್ತು ನೈಜ-ಸಮಯದ ನವೀಕರಣಗಳಿಗಾಗಿ ಅಧಿಕೃತ ವ್ಯಾಟ್ಸ್‌ ಆಪ್‌ ಗುಂಪಿಗೆ ಸೇರಿಸಲಾಗುತ್ತದೆ.

ದಯವಿಟ್ಟು pibwaves.media[at]gmail[dot]com ನಲ್ಲಿ Waves Media Accreditation Query ವಿಷಯದೊಂದಿಗೆ ನಮ್ಮನ್ನು ಸಂಪರ್ಕಿಸಿ: ಅಥವಾ ನಮ್ಮ ಸಹಾಯವಾಣಿ ಸಂಖ್ಯೆ: 9643034368 ಗೆ ಕರೆ ಮಾಡಿ.

ಮಾಧ್ಯಮ ಪ್ರತಿನಿಧಿಗಳ ನೋಂದಣಿ ನೀತಿಯನ್ನು ಇಲ್ಲಿ ವೀಕ್ಷಿಸಿ

ವೇವ್ಸ್ ಸೇರಲು ನಿಮ್ಮ ಕೊನೆಯ ಅವಕಾಶವನ್ನು ಕಳೆದುಕೊಳ್ಳಬೇಡಿ!

ವೇವ್ಸ್‌ ಕುರಿತು

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here

PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್‌ ಆಗಿ

ವೇವ್ಸ್‌ ಗೆ ನೋಂದಾಯಿಸಿ now

 

*****


Release ID: (Release ID: 2123039)   |   Visitor Counter: Visitor Counter : 23