ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ಫಿಲ್ಮ್ ಪೋಸ್ಟರ್ ಮೇಕಿಂಗ್ ಚಾಲೆಂಜ್ ಟಾಪ್ 50 ಡಿಜಿಟಲ್ ಪೋಸ್ಟರ್ ವಿಜೇತರನ್ನು ಘೋಷಿಸಿದೆ
ಮುಂಬೈನ ವೇವ್ಸ್ ನಲ್ಲಿ ಅಂತಿಮ ಪ್ರಶಸ್ತಿಗಳನ್ನು ಬಹಿರಂಗ ಪಡಿಸಲಾಗುವುದು
ವೇವ್ಸ್ ನಲ್ಲಿ ಲೈವ್ ಹ್ಯಾಂಡ್ ಪೇಂಟ್ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ ಸ್ಪರ್ಧಿಸಲು 10 ಮಂದಿ ಆಯ್ಕೆ
Posted On:
19 APR 2025 1:00PM
|
Location:
PIB Bengaluru
ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ತನ್ನ ಫಿಲ್ಮ್ ಪೋಸ್ಟರ್ ಮೇಕಿಂಗ್ ಚಾಲೆಂಜ್ ನ ಟಾಪ್ 50 ಡಿಜಿಟಲ್ ಪೋಸ್ಟರ್ ವಿಜೇತರನ್ನು ಘೋಷಿಸಿದೆ. ಸ್ಪರ್ಧೆಯು ಉದಯೋನ್ಮುಖ ದೃಶ್ಯ ಕಥೆಗಾರರ ಉತ್ಸಾಹ ಮತ್ತು ನಾವೀನ್ಯತೆಯನ್ನು ಪ್ರತಿಬಿಂಬಿಸುವ 542 ಡಿಜಿಟಲ್ ಸಲ್ಲಿಕೆಗಳನ್ನು ಸ್ವೀಕರಿಸಿತು. ಕೈಯಿಂದ ಚಿತ್ರಿಸಿದ ಪೋಸ್ಟರ್ ತಯಾರಿಕೆ ಸ್ಪರ್ಧೆಯಲ್ಲಿ, ದೇಶಾದ್ಯಂತದ ವಿವಿಧ ಕಲಾ ಸಂಸ್ಥೆಗಳಿಂದ 10 ನಮೂದುಗಳನ್ನು ಆಯ್ಕೆ ಮಾಡಲಾಗಿದೆ. ಮುಂಬೈನಲ್ಲಿ ನಡೆಯಲಿರುವ ವೇವ್ ಶೃಂಗಸಭೆಯಲ್ಲಿ ನಡೆಯಲಿರುವ ಲೈವ್ ಫಿನಾಲೆ(ಫೈನಲ್)ಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಡಿಜಿಟಲ್ ಪೋಸ್ಟರ್ ತಯಾರಿಕೆ ಸ್ಪರ್ಧೆ
ಗುರುಗ್ರಾಮದ ಮ್ಯೂಸಿಯೊ ಕ್ಯಾಮೆರಾದ ಛಾಯಾಗ್ರಾಹಕ ಮತ್ತು ಸ್ಥಾಪಕ ನಿರ್ದೇಶಕ ಆದಿತ್ಯ ಆರ್ಯ ಮತ್ತು ದಕ್ಷಿಣ ದೆಹಲಿ ಮಹಿಳಾ ಪಾಲಿಟೆಕ್ನಿಕ್ ನ ಕಲಾವಿದ ಪ್ರಿಂಟ್ ಮೇಕರ್ ಮತ್ತು ಉಪ ಪ್ರಾಂಶುಪಾಲ ಆನಂದ ಮೋಯ್ ಬ್ಯಾನರ್ಜಿ ಮತ್ತು ಸಹ ಸಂಘಟಕರಾದ ಇಮೇಜನೇಷನ್ ಸ್ಟ್ರೀಟ್ ಆರ್ಟ್ ಮತ್ತು ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್-ನ್ಯಾಷನಲ್ ಫಿಲ್ಮ್ ಅಚೀವ್ಸ್ ಇಂಡಿಯಾ ಅವರನ್ನೊಳಗೊಂಡ ತೀರ್ಪುಗಾರರು ಕಠಿಣ ಬಹು ಹಂತದ ಮೌಲ್ಯಮಾಪನವನ್ನು ನಡೆಸಿದರು. 197 ಪೋಸ್ಟರ್ ಗಳ ಪ್ರಾಥಮಿಕ ಅಂತಿಮ ಪಟ್ಟಿಯಿಂದ, ಸೃಜನಶೀಲತೆ, ಸ್ವಂತಿಕೆ ಮತ್ತು ಕಥೆ ಹೇಳುವ ಪರಿಣಾಮದ ಆಧಾರದ ಮೇಲೆ ತೀರ್ಪುಗಾರರು ಅಂತಿಮ ಟಾಪ್ 50 ಅನ್ನು ಆಯ್ಕೆ ಮಾಡಿದರು.
ಅಗ್ರ 50 ರಲ್ಲಿ, ಮೂವರು ಅತ್ಯುತ್ತಮ ಅಂತಿಮ ಸ್ಪರ್ಧಿಗಳನ್ನು ಗುರುತಿಸಲಾಗಿದೆ (ವರ್ಣಮಾಲೆಯ ಕ್ರಮದಲ್ಲಿ):
- ಸಪ್ತೋಸಿಂಧು ಸೇನ್ ಗುಪ್ತಾ
- ಶಿವಾಂಗಿ ಶರ್ಮಾ ಕಶ್ಯಪ್
- ಸುರೇಶ್ ಡಿ ನಾಯರ್
2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವೇವ್ ಶೃಂಗಸಭೆಯಲ್ಲಿ ಅಗ್ರ ಮೂರು ಸ್ಥಾನಗಳ ಅಂತಿಮ ಶ್ರೇಯಾಂಕವನ್ನು ಪ್ರಕಟಿಸಲಾಗುವುದು. 50 ವಿಜೇತ ಪೋಸ್ಟರ್ ಗಳನ್ನು ಶೃಂಗಸಭೆಯಲ್ಲಿ ಡಿಜಿಟಲ್ ಆಗಿ ಪ್ರದರ್ಶಿಸಲಾಗುವುದು, ಭಾಗವಹಿಸುವವರಿಗೆ ಗೋಚರತೆ ಮತ್ತು ಗುರುತಿಸುವಿಕೆಗೆ ಮೌಲ್ಯಯುತ ವೇದಿಕೆಯನ್ನು ನೀಡುತ್ತದೆ.
ಕೈಯಿಂದ ಚಿತ್ರಿಸಿದ ಪೋಸ್ಟರ್ ಕಲೆಯನ್ನು ವೇವ್ಸ್ ನಲ್ಲಿ ನೇರ ಸ್ಪರ್ಧೆಯೊಂದಿಗೆ ಆಚರಿಸಲಾಗುವುದು
ಒಂದು ಕಾಲದಲ್ಲಿ ಭಾರತೀಯ ಸಿನೆಮಾದ ದೃಶ್ಯ ಗುರುತನ್ನು ವ್ಯಾಖ್ಯಾನಿಸಿದ ಸಾಂಪ್ರದಾಯಿಕ ಕಲಾ ಪ್ರಕಾರದ ಮೇಲೆ ಬೆಳಕು ಚೆಲ್ಲುವ ಲೈವ್ ಹ್ಯಾಂಡ್-ಪೇಂಟೆಡ್ ಫಿಲ್ಮ್ ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ವೇವ್ಸ್ ಆಯೋಜಿಸಲಿದೆ. ಎಂ.ಎಫ್.ಹುಸೇನ್ ಮತ್ತು ಎಸ್.ಎಂ.ಪಂಡಿತ್ ಅವರಂತಹ ಪ್ರಸಿದ್ಧ ಕಲಾವಿದರ ಉತ್ಸಾಹವನ್ನು ಪ್ರಚೋದಿಸುವ ಈ ವಿಭಾಗವು ಕೈಯಿಂದ ಚಿತ್ರಿಸಿದ ಪೋಸ್ಟರ್ ಗಳ ಶ್ರೀಮಂತ ಪರಂಪರೆಯನ್ನು ಗೌರವಿಸುತ್ತದೆ.
ಎಲ್ಲಾ ನಮೂದುಗಳಲ್ಲಿ, 10 ವಿದ್ಯಾರ್ಥಿ ಕಲಾವಿದರನ್ನು ವೇವ್ಸ್ ನಲ್ಲಿ ನೇರ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ. ನೈಜ ಸಮಯದಲ್ಲಿ ಕೈಯಿಂದ ಚಿತ್ರಿಸಿದ ಚಲನಚಿತ್ರ ಪೋಸ್ಟರ್ ಗಳನ್ನು ರಚಿಸುವುದರಿಂದ ಈ ಕಾರ್ಯಕ್ರಮವು ಅವರ ಕೌಶಲ್ಯಗಳನ್ನು ಪ್ರದರ್ಶಿಸುತ್ತದೆ. ಈ ಸಾಂಸ್ಕೃತಿಕವಾಗಿ ಮಹತ್ವದ ಮಾಧ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಮೊದಲ ಮೂರು ವಿಜೇತರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು.
ಫಿಲ್ಮ್ ಪೋಸ್ಟರ್ ಮೇಕಿಂಗ್ ಚಾಲೆಂಜ್ ಬಗ್ಗೆ
ವೇವ್ಸ್ ಫಿಲ್ಮ್ ಪೋಸ್ಟರ್ ಮೇಕಿಂಗ್ ಚಾಲೆಂಜ್ ಸಿನಿಮೀಯ ಕಲೆಯನ್ನು ಆಚರಿಸಲು, ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಲು ಮತ್ತು ದೃಶ್ಯ ಕಥೆ ಹೇಳುವ ಸಾಂಪ್ರದಾಯಿಕ ಮತ್ತು ಸಮಕಾಲೀನ ರೂಪಗಳನ್ನು ಬೆಸೆಯುವ ವಿಶಾಲ ಉಪಕ್ರಮದ ಭಾಗವಾಗಿದೆ. ಹೆಚ್ಚಿನ ಮಾಹಿತಿ ಮತ್ತು ವಿಜೇತರ ಸಂಪೂರ್ಣ ಪಟ್ಟಿಗಾಗಿ, ಭೇಟಿ ನೀಡಿ:
👉 https://www.nfdcindia.com/waves-poster-challenge-2025/
ವೇವ್ಸ್ ಬಗ್ಗೆ
ಮಾಧ್ಯಮ ಮತ್ತು ಮನರಂಜನಾ (ಎಂ ಮತ್ತು ಇ) ಕ್ಷೇತ್ರದ ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯನ್ನು ಭಾರತ ಸರ್ಕಾರವು 2025 ರ ಮೇ 1 ರಿಂದ 4 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.
ನೀವು ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಸೃಷ್ಟಿಕರ್ತರು ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ ಮತ್ತು ಇ ಭೂದೃಶ್ಯಕ್ಕೆ ಸಂಪರ್ಕಿಸಲು, ಸಹಕರಿಸಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅಂತಿಮ ಜಾಗತಿಕ ವೇದಿಕೆಯನ್ನು ನೀಡುತ್ತದೆ.
ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ಹೆಚ್ಚಿಸಲು ಸಜ್ಜಾಗಿದೆ, ವಿಷಯ ರಚನೆ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಳ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳು, ಜೆನೆರೇಟಿವ್ ಎಐ, ವರ್ಧಿತ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ವಿಸ್ತರಿತ ರಿಯಾಲಿಟಿ ಕ್ಷೇತ್ರಗಳು ಗಮನ ಹರಿಸಿವೆ.
ಪ್ರಶ್ನೆಗಳಿವೆಯೇ? ಇಲ್ಲಿ ಉತ್ತರಗಳನ್ನು ಹುಡುಕಿ
ಪಿಐಬಿ ಟೀಮ್ ವೇವ್ಸ್ ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್ ಡೇಟ್ ಆಗಿರಿ
ಬನ್ನಿ, ನಮ್ಮೊಂದಿಗೆ ಪ್ರಯಾಣಿಸಿ! ವೇವ್ಸ್ ಗಾಗಿ ಈಗ ನೋಂದಾಯಿಸಿ
*****
Release ID:
(Release ID: 2122924)
| Visitor Counter:
29
Read this release in:
Khasi
,
English
,
Urdu
,
Nepali
,
Hindi
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam