ಪ್ರಧಾನ ಮಂತ್ರಿಯವರ ಕಛೇರಿ
ದಾದಿ ರತನ್ ಮೋಹಿನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ
ಅವರು ಬೆಳಕಿನ ದೀಪ, ಬುದ್ಧಿವಂತಿಕೆ ಮತ್ತು ಕರುಣೆಯ ಸ್ಫೂರ್ತಿಯಾಗಿ ಸ್ಮರಿಸಲ್ಪಡುತ್ತಾರೆ: ಪ್ರಧಾನಮಂತ್ರಿ
Posted On:
08 APR 2025 5:04PM by PIB Bengaluru
ಬ್ರಹ್ಮ ಕುಮಾರಿಯರ ಗೌರವಾನ್ವಿತ ಆಧ್ಯಾತ್ಮಿಕ ನಾಯಕಿ ದಾದಿ ರತನ್ ಮೋಹಿನಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ದಾದಿ ರತನ್ ಮೋಹಿನಿ ಅವರು ದಾರಿ ದೀಪ, ಬುದ್ಧಿವಂತಿಕೆ ಮತ್ತು ಕರುಣೆಯ ಜ್ಯೋತಿಯಾಗಿ ಸ್ಮರಿಸಲ್ಪಡುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದರು.
ಬ್ರಹ್ಮ ಕುಮಾರಿಯರ ಜಾಗತಿಕ ಆಧ್ಯಾತ್ಮಿಕ ಚಳವಳಿಯಲ್ಲಿ ದಾದಿ ರತನ್ ಮೋಹಿನಿ ಅವರ ಅತ್ಯುತ್ತಮ ನಾಯಕತ್ವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಅವರೊಂದಿಗಿನ ತಮ್ಮ ವೈಯಕ್ತಿಕ ಸಂವಹನವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ದಾದಿ ರತನ್ ಮೋಹಿನಿ ಅವರ ಜೀವನ ಮತ್ತು ಬೋಧನೆಗಳು, ಶಾಂತಿಯನ್ನು ಬಯಸುವ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸಲು ಬಯಸುವ ಎಲ್ಲರಿಗೂ ಮಾರ್ಗವನ್ನು ಬೆಳಗಿಸುವುದನ್ನು ಮುಂದುವರಿಸುತ್ತವೆ ಎಂದು ಹೇಳಿದರು.
ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ತಿಳಿಸಿದ್ದಾರೆ;
"ದಾದಿ ರತನ್ ಮೋಹಿನಿ ಅವರು ಅತ್ಯುನ್ನತ ಆಧ್ಯಾತ್ಮಿಕತೆಯನ್ನು ಹೊಂದಿದ್ದರು. ಅವರು ಬೆಳಕು, ಬುದ್ಧಿವಂತಿಕೆ ಮತ್ತು ಕರುಣೆಯ ದೀಪಸ್ತಂಭವಾಗಿ ಸ್ಮರಣೀಯರು. ಆಳವಾದ ನಂಬಿಕೆ, ಸರಳತೆ ಮತ್ತು ಸೇವೆಗೆ ಅಚಲವಾದ ಬದ್ಧತೆಯಲ್ಲಿ ಬೇರೂರಿರುವ ಅವರ ಜೀವನ ಪ್ರಯಾಣವು ಮುಂಬರುವ ದಿನಗಳಲ್ಲಿ ಹಲವಾರು ಜನರನ್ನು ಪ್ರೇರೇಪಿಸುತ್ತದೆ. ಅವರು ಬ್ರಹ್ಮ ಕುಮಾರಿಯರ ಜಾಗತಿಕ ಚಳವಳಿಗೆ ಅತ್ಯುತ್ತಮ ನಾಯಕತ್ವವನ್ನು ಒದಗಿಸಿದರು. ಅವರ ನಮ್ರತೆ, ತಾಳ್ಮೆ, ಚಿಂತನೆಯ ಸ್ಪಷ್ಟತೆ ಮತ್ತು ದಯೆ ಯಾವಾಗಲೂ ಎದ್ದು ಕಾಣುತ್ತಿತ್ತು. ಶಾಂತಿಯನ್ನು ಬಯಸುವ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸಲು ಬಯಸುವ ಎಲ್ಲರಿಗೂ ಅವರು ಮಾರ್ಗವನ್ನು ತೋರಿಸಿ ಬೆಳಗಿಸುತ್ತಲೇ ಇರುತ್ತಾರೆ. ಅವರೊಂದಿಗಿನ ನನ್ನ ಸಂವಹನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಅಭಿಮಾನಿಗಳು ಮತ್ತು ಬ್ರಹ್ಮ ಕುಮಾರಿಯರ ಜಾಗತಿಕ ಆಧ್ಯಾತ್ಮಿಕ ಚಳವಳಿಯೊಂದಿಗೆ ಇರುತ್ತವೆ. ಓಂ ಶಾಂತಿ."
*****
(Release ID: 2120111)
Visitor Counter : 24
Read this release in:
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam