ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿದೇಶಿ ನಾಯಕರಿಗೆ ನೀಡಲಾಗುವ ಶ್ರೀಲಂಕಾದ ಅತ್ಯುನ್ನತ ಗೌರವವನ್ನು ಸ್ವೀಕರಿಸಿದ ಪ್ರಧಾನಮಂತ್ರಿ

Posted On: 05 APR 2025 5:47PM by PIB Bengaluru

ಶ್ರೀಲಂಕಾದ ಅಧ್ಯಕ್ಷರಾದ ಗೌರವಾನ್ವಿತ ಅನುರಾ ಕುಮಾರ ದಿಸನಾಯಕ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ವಿದೇಶಿ ನಾಯಕರಿಗೆ ನೀಡುಲಾಗುವ ದೇಶದ ಅತ್ಯುನ್ನತ ಗೌರವವಾದ 'ಶ್ರೀಲಂಕಾ ಮಿತ್ರ ವಿಭೂಷಣ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು. ಇದೇ ಮೊದಲ ಬಾರಿಗೆ ಭಾರತೀಯ ನಾಯಕರೊಬ್ಬರು ಈ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತ-ಶ್ರೀಲಂಕಾ ಸ್ನೇಹವನ್ನು ಬಲಪಡಿಸುವಲ್ಲಿ ನೀಡಿದ ನಿರಂತರ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಪ್ರಧಾನಿಯವರಿಗೆ ಪ್ರದಾನ ಮಾಡಲಾಯಿತು.

2. ಭಾರತದ 1.4 ಶತಕೋಟಿ ಜನರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿಯವರು, ಭಾರತ ಮತ್ತು ಶ್ರೀಲಂಕಾ ನಡುವಿನ ವಿಶೇಷ ಸ್ನೇಹ ಮತ್ತು ಉಭಯ ದೇಶಗಳ ಜನರ ನಡುವಿನ ಸಂಪರ್ಕಕ್ಕೆ ಈ ಗೌರವವನ್ನು ಅರ್ಪಿಸಿದರು.

 

*****


(Release ID: 2119434) Visitor Counter : 17