ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವ್ಯಾಟ್ ಫೋಗೆ ಪ್ರಧಾನಮಂತ್ರಿ ಭೇಟಿ

प्रविष्टि तिथि: 04 APR 2025 3:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ಪ್ರಧಾನಮಂತ್ರಿ ಶ್ರೀಮತಿ ಪೇಟೊಂಗ್ಟಾರ್ನ್ ಶಿನವತ್ರಾ ಅವರೊಂದಿಗೆ ಇಂದು ವ್ಯಾಟ್ ಫೋ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ವಾಟ್ ಫ್ರಾ ಚೆಟುಫೋನ್ ವಿಮನ್ ಮಂಗ್ಖಲರಾಮ್ ರಾಜ್ವರಮಹಾವಿಹಾನ್ ಗೆ ಭೇಟಿ ನೀಡಿದರು.

ವಿಶ್ರಾಂತಿ ಭಂಗಿಯಲ್ಲಿರುವ ಬುದ್ಧನ ವಿಗ್ರಹಕ್ಕೆ ಪ್ರಧಾನಮಂತ್ರಿಯವರು ನಮನ ಸಲ್ಲಿಸಿದರು ಮತ್ತು ಹಿರಿಯ ಬೌದ್ಧ ಭಿಕ್ಕುಗಳಿಗೆ 'ಸಂಘದಾನ’ ಅರ್ಪಿಸಿದರು. ಪ್ರಧಾನಮಂತ್ರಿಯವರು ಅಶೋಕನ ಸಿಂಹ ಲಾಂಛನ (ಲಯನ್ ಕ್ಯಾಪಿಟೋಲ್ ಆಫ್ ಅಶೋಕ) ಪ್ರತಿಕೃತಿಯನ್ನು ವಿಶ್ರಾಂತ ಸ್ಥಿತಿಯ / ಒರಗಿಕೊಂಡಿರುವ ಬುದ್ಧನ ದೇಗುಲಕ್ಕೆ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅವರು ಉಭಯ ದೇಶಗಳ ನಡುವಿನ ಸದೃಢ ಮತ್ತು ಉತ್ಸಾಹಭರಿತ  ನಾಗರಿಕ ಸಂಬಂಧಗಳನ್ನು ಸ್ಮರಿಸಿದರು.

 

*****


(रिलीज़ आईडी: 2118898) आगंतुक पटल : 44
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Manipuri , Bengali , Assamese , Punjabi , Gujarati , Tamil , Telugu , Malayalam