ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉಪಕ್ರಮಗಳ ಪಟ್ಟಿ: ಪ್ರಧಾನಮಂತ್ರಿ ಅವರು 6ನೇ ಬಿಮ್‌ ಸ್ಟೆಕ್‌ ಶೃಂಗಸಭೆಯಲ್ಲಿ ಭಾಗಿ

Posted On: 04 APR 2025 2:32PM by PIB Bengaluru

ವ್ಯವಹಾರ 

* ಬಿಮ್ ಸ್ಟೆಕ್‌ ಚೇಂಬರ್‌ ಆಫ್‌ ಕಾಮರ್ಸ್‌ ಸ್ಥಾಪನೆ. 

* ಪ್ರತಿವರ್ಷ ಬಿಮ್ ಸ್ಟೆಕ್‌ ವಾಣಿಜ್ಯ ಶೃಂಗಸಭೆ ಆಯೋಜನೆ 

* ಬಿಮ್ ಸ್ಟೆಕ್‌ ಪ್ರದೇಶದಲ್ಲಿ ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರದ ಸಾಧ್ಯತೆಗಳ ಕುರಿತು ಕಾರ್ಯಸಾಧ್ಯತಾ ಅಧ್ಯಯನ.

ಮಾಹಿತಿ ತಂತ್ರಜ್ಞಾನ 

* ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಭವವನ್ನು ಹಂಚಿಕೊಳ್ಳಲು ಬಿಮ್ ಸ್ಟೆಕ್‌  ರಾಷ್ಟ್ರಗಳ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾಯೋಗಿಕ ಅಧ್ಯಯನ

* ಬಿಮ್ ಸ್ಟೆಕ್‌ ಪ್ರದೇಶದಲ್ಲಿ ಯುಪಿಐ ಮತ್ತು ಪಾವತಿ ವ್ಯವಸ್ಥೆಗಳ ನಡುವಿನ ಸಂಪರ್ಕ. 

ವಿಪತ್ತು ನಿರ್ವಹಣೆ ಮತ್ತು ಉಪಶಮನ 

* ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿಯಲ್ಲಿ ಸಹಕರಿಸಲು ಭಾರತದಲ್ಲಿ ಬಿಮ್‌ಸ್ಟೆಕ್ ವಿಪತ್ತು ನಿರ್ವಹಣೆಗಾಗಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದು.

* ಈ ವರ್ಷ ಭಾರತದಲ್ಲಿ  ಬಿಮ್‌ಸ್ಟೆಕ್ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ನಡುವಿನ ನಾಲ್ಕನೇ ಜಂಟಿ ಅಭ್ಯಾಸ ನಡೆಸುವುದು. 

ಭದ್ರತೆ 

* ಭಾರತದಲ್ಲಿ ಗೃಹ ಸಚಿವರ ಕಾರ್ಯತಂತ್ರದ ಮೊದಲ ಸಭೆಯನ್ನು ನಡೆಸುವುದು. 

ಬಾಹ್ಯಾಕಾಶ 

* ಬಿಮ್ ಸ್ಟೆಕ್ ರಾಷ್ಟ್ರಗಳಿಗೆ ಮಾನವಸಂಪನ್ಮೂಲ ತರಬೇತಿಗಾಗಿ ತಳಮಟ್ಟದ ಕೇಂದ್ರಗಳನ್ನು ಸ್ಥಾಪಿಸುವುದು, ನ್ಯಾನೋ ಉಪಗ್ರಹಗಳ ಉತ್ಪಾದನೆ ಮತ್ತು ಉಡಾವಣೆ ಮತ್ತು ದೂರಸಂವೇದಿ ದತ್ತಾಂಶದ ಬಳಕೆ.

ಸಾಮರ್ಥ್ಯವೃದ್ಧಿ ಮತ್ತು ತರಬೇತಿ 

* ಬೋಧಿ", ಅಂದರೆ, "ಮಾನವ ಸಂಪನ್ಮೂಲ ಮೂಲಸೌಕರ್ಯದ ಸಂಘಟಿತ ಅಭಿವೃದ್ಧಿಗಾಗಿ ಬಿಮ್‌ಸ್ಟೆಕ್" ಉಪಕ್ರಮ. ಇದರಡಿಯಲ್ಲಿ ಬಿಮ್‌ಸ್ಟೆಕ್  ರಾಷ್ಟ್ರಗಳ 300 ಯುವಕರಿಗೆ ಪ್ರತಿ ವರ್ಷ ಭಾರತದಲ್ಲಿ ತರಬೇತಿ ನೀಡಲಾಗುವುದು. 

* ಭಾರತದ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಬಿಮ್‌ಸ್ಟೆಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಯೋಜನೆಯ ವಿಸ್ತರಣೆ.

* ಬಿಮ್‌ಸ್ಟೆಕ್ ದೇಶಗಳ ಯುವ ರಾಯಭಾರಿಗಳಿಗೆ ಪ್ರತಿ ವರ್ಷ ತರಬೇತಿ ಕಾರ್ಯಕ್ರಮ.

* ಬಿಮ್‌ಸ್ಟೆಕ್ ದೇಶಗಳಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಬೆಂಬಲಿಸಲು ಟಾಟಾ ಸ್ಮಾರಕ ಕೇಂದ್ರ.

* ಸಾಂಪ್ರದಾಯಿಕ ಔಷಧದಲ್ಲಿ ಸಂಶೋಧನೆ ಮತ್ತು ಪ್ರಸರಣಕ್ಕಾಗಿ ಶ್ರೇಷ್ಠತಾ ಕೇಂದ್ರದ ಸ್ಥಾಪನೆ.

*ರೈತರ ಅನುಕೂಲಕ್ಕಾಗಿ ಜ್ಞಾನ ಮತ್ತು ಉತ್ತಮ ಪದ್ದತಿಗಳ ವಿನಿಮಯ, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಭಾರತದಲ್ಲಿ ಶ್ರೇಷ್ಠತಾ ಕೇಂದ್ರ. 

ಇಂಧನ 

* ಬೆಂಗಳೂರಿನಲ್ಲಿರುವ ಬಿಮ್ ಸ್ಟೆಕ್‌ ಇಂಧನ ಕೇಂದ್ರದ ಕಾರ್ಯಾರಂಭ. 

* ವಿದ್ಯುತ್ ಗ್ರಿಡ್ ಅಂತರಸಂಪರ್ಕದ ಕಾರ್ಯಕ್ಕೆ ವೇಗ. 

ಯುವಜನತೆಯನ್ನು ತೊಡಗಿಸಿಕೊಳ್ಳುವುದು 

* ಈ ವರ್ಷ  ಬಿಮ್ ಸ್ಟೆಕ್‌ ಯುವ ನಾಯಕರ ಶೃಂಗಸಭೆ ಆಯೋಜನೆ. 

* ಬಿಮ್ ಸ್ಟೆಕ್ ಹ್ಯಾಕಥಾನ್ ಮತ್ತು ಯುವ ವೃತ್ತಿಪರ ಸಂದರ್ಶಕರ ಕಾರ್ಯಕ್ರಮ ಆರಂಭಿಸಲಾಗುವುದು

ಕ್ರೀಡೆ 

* ಈ ವರ್ಷ ಭಾರತದಲ್ಲಿ “ಬಿಮ್ ಸ್ಟೆಕ್‌ ಅಥ್ಲೆಟಿಕ್ಸ್ ಕೂಟ’’ ಆಯೋಜನೆ. 

* 2027 ರಲ್ಲಿ ಮೊದಲ ಬಿಮ್ ಸ್ಟೆಕ್‌ ಕ್ರೀಡಾಕೂಟದ ಆತಿಥ್ಯ

ಸಂಸ್ಕೃತಿ 

*ಈ ವರ್ಷ ಭಾರತದಲ್ಲಿ ನಡೆಯಲಿರುವ ಬಿಮ್ ಸ್ಟೆಕ್‌  ಸಾಂಪ್ರದಾಯಿಕ ಸಂಗೀತ ಉತ್ಸವ

ಸಂಪರ್ಕ 

* ಸಾಮರ್ಥ್ಯ ವೃದ್ಧಿ, ಸಂಶೋಧನೆ, ನಾವೀನ್ಯತೆ ಮತ್ತು ಕಡಲ ನೀತಿಗಳಲ್ಲಿ ಸಮನ್ವಯವನ್ನು ಹೆಚ್ಚಿಸಲು ಭಾರತದಲ್ಲಿ ಸುಸ್ಥಿರ ಕಡಲ ಸಾರಿಗೆ ಕೇಂದ್ರದ ಸ್ಥಾಪನೆ.

 

*****


(Release ID: 2118812) Visitor Counter : 16