ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಥಾಯ್ಲೆಂಡ್ ಮಾಜಿ ಪ್ರಧಾನಮಂತ್ರಿಯವರ ಭೇಟಿ
Posted On:
03 APR 2025 6:48PM by PIB Bengaluru
ಬ್ಯಾಂಕಾಕ್ ನಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಯ್ಲೆಂಡ್ ನ ಮಾಜಿ ಪ್ರಧಾನಮಂತ್ರಿ ಶ್ರೀ ತಕ್ಷಿನ್ ಶಿನವತ್ರ ಅವರನ್ನು ಭೇಟಿಯಾದರು. ರಕ್ಷಣೆ, ವ್ಯಾಪಾರ, ಸಂಸ್ಕೃತಿ ಮತ್ತಿತರ ವಲಯಗಳಲ್ಲಿ ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಹಕಾರದ ಅಪಾರ ಸಾಮರ್ಥ್ಯದ ಕುರಿತು ಉಭಯರು ಚರ್ಚಿಸಿದರು.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಹೇಳಿದ್ದಾರೆ:
"ಥಾಯ್ಲೆಂಡ್ ನ ಮಾಜಿ ಪ್ರಧಾನಿ ಶ್ರೀ ತಕ್ಷಿನ್ ಶಿನವತ್ರ ಅವರನ್ನು ಭೇಟಿಯಾಗಲು ಸಂತೋಷವಾಯಿತು. ಆಡಳಿತ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಅವರು ಅಪಾರ ಅನುಭವ ಹೊಂದಿದ್ದಾರೆ. ಅವರು ಭಾರತದ ಉತ್ತಮ ಸ್ನೇಹಿತರೂ ಆಗಿದ್ದು ಅಟಲ್ ಜಿ ಅವರೊಂದಿಗೆ ಬಹಳ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಭಾರತ-ಥಾಯ್ಲೆಂಡ್ ಸಹಕಾರ ಹಾಗೂ ಅದು ನಮ್ಮ ನಮ್ಮ ದೇಶಗಳ ಜನರಿಗೆ ಹೇಗೆ ಅನುಕೂಲವಾಗಲಿದೆ ಎಂಬ ಬಗ್ಗೆ ಶ್ರೀ ಶಿನವತ್ರ ಮತ್ತು ನಾನು ಸುದೀರ್ಘವಾಗಿ ಚರ್ಚಿಸಿದೆವು. ರಕ್ಷಣೆ, ವ್ಯಾಪಾರ, ಸಂಸ್ಕೃತಿ ಮತ್ತು ಇತರ ಕ್ಷೇತ್ರಗಳಲ್ಲಿನ ಅಗಾಧ ಸಾಮರ್ಥ್ಯದ ಕುರಿತು ನಾವು ಮಾತುಕತೆ ನಡೆಸಿದೆವು.
@ThaksinLive”
*****
(Release ID: 2118566)
Read this release in:
Odia
,
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam