ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ ‘ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್’1100 ಅಂತಾರಾಷ್ಟ್ರೀಯ ಸ್ಪರ್ಧಿಗಳೊಂದಿಗೆ 85,000 ನೋಂದಣಿಗಳನ್ನು ದಾಟಿದೆ
2025ರ ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವೇವ್ಸ್ ‘ಕ್ರಿಯೇಟೋಸ್ಪಿಯರ್ʼನಲ್ಲಿ 32 ಚಾಲೆಂಜ್ ಗಳಿಂದ 750 ಫೈನಲಿಸ್ಟ್ ಗಳು ಭಾಗವಹಿಸಲಿದ್ದಾರೆ
Posted On:
01 APR 2025 3:54PM by PIB Bengaluru
2025ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಭಾಗವಾಗಿ ಪ್ರಾರಂಭಿಸಲಾದ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ (ಸಿಐಸಿ) ಸೀಸನ್-1, 1,100 ಅಂತರರಾಷ್ಟ್ರೀಯ ಸ್ಪರ್ಧಿಗಳು ಸೇರಿದಂತೆ 85,000 ನೋಂದಣಿಗಳನ್ನು ದಾಟಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. 32 ವೈವಿಧ್ಯಮಯ ಚಾಲೆಂಜ್ ಗಳಿಂದ, ನಿಖರವಾದ ಆಯ್ಕೆ ಪ್ರಕ್ರಿಯೆಯ ನಂತರ ಆಯ್ಕೆಯಾದ 750 ಕ್ಕೂ ಹೆಚ್ಚು ಫೈನಲಿಸ್ಟ್ ಗಳು, ತಮ್ಮ ವೈಯಕ್ತಿಕ ಚಾಲೆಂಜ್ ನ ಫಲಿತಾಂಶ, ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ಅನನ್ಯ ಅವಕಾಶವನ್ನು ಪಡೆಯುತ್ತಾರೆ, ಜೊತೆಗೆ ಪಿಚಿಂಗ್ ಸೆಷನ್ ಗಳು ಮತ್ತು ಮಾಸ್ಟರ್‌ಕ್ಲಾಸ್ ಗಳು, ಪ್ಯಾನಲ್ ಚರ್ಚೆಗಳು, ಸಮ್ಮೇಳನಗಳು ಇತ್ಯಾದಿಗಳ ಮೂಲಕ ಜಾಗತಿಕ ದಿಗ್ಗಜರಿಂದ ಕಲಿಯುವುದು ಸೇರಿದಂತೆ ಆಯಾ ವಲಯದ ವ್ಯಾಪಾರ ನಾಯಕರೊಂದಿಗೆ ನೆಟ್‌ವರ್ಕಿಂಗ್ ಅವಕಾಶಗಳನ್ನು ಪಡೆಯುತ್ತಾರೆ.
ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಗಳ ವಿಜೇತರಿಗೆ ಮುಂಬೈನಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ 'ವೇವ್ಸ್ ಕ್ರಿಯೇಟರ್ ಪ್ರಶಸ್ತಿ'ಗಳನ್ನು ನೀಡಿ ಗೌರವಿಸಲಾಗುವುದು.
ಈ ಚಾಲೆಂಜ್ ಗಳು ಸೃಜನಶೀಲ ಕ್ಷೇತ್ರಕ್ಕೆ ಪ್ರಬಲ ಪ್ರವೇಶವನ್ನು ಮಾಡಿವೆ, ಭಾರತ ಮತ್ತು ಅದರಾಚೆಗೆ ನಾವೀನ್ಯತೆ ಮತ್ತು ತೊಡಗಿಸಿಕೊಳ್ಳುವಿಕೆಯ ಅಲೆಯನ್ನು ಹುಟ್ಟುಹಾಕಿವೆ, ಜಾಗತಿಕ ಮಟ್ಟದಲ್ಲಿ ಸೃಜನಶೀಲ ಪ್ರತಿಭೆಗಳಿಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮುತ್ತಿವೆ. ಹೈ-ಎನರ್ಜಿ ರೀಲ್ ಮೇಕಿಂಗ್ ಸ್ಪರ್ಧೆ, ಪರಿಹಾರ-ಆಧಾರಿತ ಟ್ರೂತ್ ಟೆಲ್ ಹ್ಯಾಕಥಾನ್, ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಮತ್ತು ಕಾಲ್ಪನಿಕ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್‌ಶಿಪ್ ಸೇರಿದಂತೆ 32 ವೈವಿಧ್ಯಮಯ ಮತ್ತು ಕ್ರಿಯಾತ್ಮಕ ಚಾಲೆಂಜ್ ಗಳನ್ನು ಒಳಗೊಂಡಿರುವ ಸಿಐಸಿ, ಕ್ರಿಯೇಟರ್ಸ್ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಎ.ಐ. ಅವತಾರ್ ಕ್ರಿಯೇಟರ್ ಚಾಲೆಂಜ್, WAM! ಅನಿಮೆ ಚಾಲೆಂಜ್, ಇಸ್ಪೋರ್ಟ್ಸ್ ಟೂರ್ನಮೆಂಟ್, ಟ್ರೇಲರ್ ಮೇಕಿಂಗ್ ಸ್ಪರ್ಧೆ, ಥೀಮ್ ಮ್ಯೂಸಿಕ್ ಸ್ಪರ್ಧೆ ಮತ್ತು ಅತ್ಯಾಧುನಿಕ ಎಕ್ಸ್ ಆರ್ ಕ್ರಿಯೇಟರ್ ಹ್ಯಾಕಥಾನ್ ನಂತಹ ಇತರ ಪ್ರಮುಖ ಕಾರ್ಯಕ್ರಮಗಳು ಸಿಐಸಿಯನ್ನು ಮುಂದಿನ ಪೀಳಿಗೆಯ ಕಥೆಗಾರರು, ವಿನ್ಯಾಸಕರು ಮತ್ತು ಡಿಜಿಟಲ್ ನಾವೀನ್ಯಕಾರರಿಗೆ ನಿರ್ಣಾಯಕ ಚಿಮ್ಮುಹಲಗೆಯಾಗಿ ಸ್ಥಾಪಿಸುತ್ತವೆ.

ವಿಭಾಗಗಳು, ಗಡಿಗಳು ಮತ್ತು ತಲೆಮಾರುಗಳಾದ್ಯಂತ ಕ್ರಿಯೇಟರ್ ಗಳನ್ನು ಒಂದುಗೂಡಿಸುವ ಮೂಲಕ, ಸಿಐಸಿ ಭಾರತದ ಸೃಜನಶೀಲ ಶಕ್ತಿಯನ್ನು ಆಚರಿಸುವುದಲ್ಲದೆ - ಇದು ಕಥೆ ಹೇಳುವಿಕೆ ಮತ್ತು ಡಿಜಿಟಲ್ ಅಭಿವ್ಯಕ್ತಿಯ ಭವಿಷ್ಯದ ಬಗ್ಗೆ ಜಾಗತಿಕ ಸಂವಾದವನ್ನು ಹುಟ್ಟುಹಾಕಿದೆ. ಈ ಗಮನಾರ್ಹ ಅಡಿಪಾಯದೊಂದಿಗೆ, ಸಿಐಸಿ ಮುಂಬರುವ ಋತುಗಳಲ್ಲಿ ಹೊಸ ಎತ್ತರವನ್ನು ಏರಲು ಸಜ್ಜಾಗಿದೆ, ಕ್ರಿಯೇಟರ್ ಗಳನ್ನು ಸಬಲೀಕರಣಗೊಳಿಸುವ ಮತ್ತು ನಾಳಿನ ಸಾಂಸ್ಕೃತಿಕ ವಲಯವನ್ನು ರೂಪಿಸುವ ತನ್ನ ಧ್ಯೇಯವನ್ನು ಮುಂದುವರೆಸಿದೆ.
ವೇವ್ಸ್ ಕುರಿತು
ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯಕ್ಕೆ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಯನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.
ನೀವು ಉದ್ಯಮದ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಕ್ರಿಯೇಟರ್ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ & ಇ ವಲಯದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅಪ್ರತಿಮ ಜಾಗತಿಕ ವೇದಿಕೆಯನ್ನು ನೀಡುತ್ತದೆ.
ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಯಲ್ಲಿ ಕೇಂದ್ರವಾಗಿ ತನ್ನ ಸ್ಥಾನವನ್ನು ಹೆಚ್ಚಿಸಲು ಸಜ್ಜಾಗಿದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್) ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮ ಮತ್ತು ವಲಯಗಳನ್ನು ಕೇಂದ್ರೀಕರಿಸುತ್ತದೆ.
ನಿಮ್ಮಲ್ಲಿ ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here
PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್ ಆಗಿ.
ವೇವ್ಸ್ ಗೆ ನೋಂದಾಯಿಸಿ now
*****
(Release ID: 2117312)
Visitor Counter : 15
Read this release in:
Punjabi
,
Hindi
,
Telugu
,
English
,
Gujarati
,
Urdu
,
Nepali
,
Marathi
,
Bengali-TR
,
Manipuri
,
Assamese
,
Tamil
,
Malayalam