ಪ್ರಧಾನ ಮಂತ್ರಿಯವರ ಕಛೇರಿ
ಬೆಳವಣಿಗೆ ಮತ್ತು ಕಲಿಕೆಗಾಗಿ ಬೇಸಿಗೆ ರಜೆಯನ್ನು ಉಪಯೋಗಿಸಿಕೊಳ್ಳುವಂತೆ ಯುವಕರಿಗೆ ಪ್ರಧಾನಮಂತ್ರಿಯವರ ಕಿವಿಮಾತು
Posted On:
01 APR 2025 12:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಬೇಸಿಗೆ ರಜೆಯ ಈ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ತಮ್ಮ ಯುವ ಸ್ನೇಹಿತರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬೇಸಿಗೆ ರಜೆಯ ಸಮಯವನ್ನು ಆನಂದ, ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ.
ಲೋಕಸಭಾ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು Xನಲ್ಲಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಪ್ರಧಾನಿಯವರು:
"ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅದ್ಭುತವಾದ ಬೇಸಿಗೆ ರಜೆಯ ಅನುಭವ ಮತ್ತು ಸಂತೋಷದ ದಿನಗಳನ್ನು ಹಾರೈಸುತ್ತೇನೆ. ಕಳೆದ ಭಾನುವಾರದ #MannKiBaatನಲ್ಲಿ ನಾನು ಹೇಳಿದಂತೆ, ಬೇಸಿಗೆ ರಜಾದಿನಗಳು ಆನಂದಿಸಲು, ಕಲಿಯಲು ಮತ್ತು ಬೆಳೆಯಲು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಈ ಪ್ರಯತ್ನದಲ್ಲಿ ಇಂತಹ ಪ್ರಯಾಸಗಳು ಮಹತ್ತರವಾಗಿವೆ" ಎಂದು ಟ್ವೀಟ್ ಮಾಡಿದ್ದಾರೆ.
*****
(Release ID: 2117221)
Visitor Counter : 13
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam