ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ(ಪಿ ಎಂ ಕೆ ಎಸ್ ವೈ-ಎಐಬಿಪಿ) ಅಡಿಯಲ್ಲಿ ಬಿಹಾರದ ಕೋಸಿ-ಮೆಚಿ ಇಂಟ್ರಾ-ಸ್ಟೇಟ್ ಲಿಂಕ್ ಯೋಜನೆಯನ್ನು ಸೇರಿಸಲು ಸಂಪುಟದ ಅನುಮೋದನೆ
ಯೋಜನೆಯ ಅಂದಾಜು ವೆಚ್ಚ 6,282.32 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಬಿಹಾರಕ್ಕೆ 3,652.56 ಕೋಟಿ ರೂ. ಕೇಂದ್ರ ನೆರವು ಸೇರಿದೆ, ಇದು ಮಾರ್ಚ್, 2029 ರೊಳಗೆ ಪೂರ್ಣಗೊಳ್ಳಲಿದೆ
ಅಸ್ತಿತ್ವದಲ್ಲಿರುವ ಪೂರ್ವ ಕೋಸಿ ಮುಖ್ಯ ಕಾಲುವೆ (ಇಕೆಎಂಸಿ) 41.30 ಕಿ.ಮೀ. ವರೆಗೆ ಪುನರ್ನಿರ್ಮಾಣ ಮತ್ತು ಮೆಚಿ ನದಿಯವರೆಗೆ 117.50 ಕಿ.ಮೀ. ಇಕೆಎಂಸಿ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತದೆ
ಬಿಹಾರದ ಅರಾರಿಯಾ, ಪುರ್ನಿಯಾ, ಕಿಶನಗಂಜ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ 2,10,516 ಹೆಕ್ಟೇರ್ ಪ್ರದೇಶಕ್ಕೆ ಖಾರಿಫ್ ಋತುವಿನಲ್ಲಿ ಹೆಚ್ಚುವರಿ ವಾರ್ಷಿಕ ನೀರಾವರಿ ಸೌಲಭ್ಯಗಳು
ಪೂರ್ವ ಕೋಸಿ ಮುಖ್ಯ ಕಾಲುವೆಯ ಅಸ್ತಿತ್ವದಲ್ಲಿರುವ ಪ್ರದೇಶಕ್ಕೆ ನೀರು ಪೂರೈಕೆಯಲ್ಲಿನ ಕೊರತೆಯನ್ನು ಪುನಃಸ್ಥಾಪಿಸಲಾಗುವುದು
ಮುಂಗಾರು ಅವಧಿಯಲ್ಲಿ ಮಹಾನಂದಾ ಪ್ರದೇಶಕ್ಕೆ 2050 ಮಿಲಿಯನ್ ಘನ ಮೀಟರ್ ಕೋಸಿ ನೀರನ್ನು ತಿರುಗಿಸಲಾಗುವುದು
Posted On:
28 MAR 2025 4:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬಿಹಾರದ ಕೋಸಿ-ಮೆಚಿ ಇಂಟ್ರಾ-ಸ್ಟೇಟ್ ಲಿಂಕ್ ಯೋಜನೆಯನ್ನು ಜಲಶಕ್ತಿ ಸಚಿವಾಲಯದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮದ (ಪಿ ಎಂ ಕೆ ಎಸ್ ವೈ-ಎಐಬಿಪಿ) ಅಡಿಯಲ್ಲಿ ಸೇರಿಸಲು ಅನುಮೋದನೆ ನೀಡಿದೆ.
6,282.32 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಮಾರ್ಚ್, 2029 ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಬಿಹಾರಕ್ಕೆ 3,652.56 ಕೋಟಿ ರೂಪಾಯಿಗಳ ಕೇಂದ್ರ ಸಹಾಯವನ್ನು ಸಿಸಿಇಎ ಅನುಮೋದಿಸಿದೆ.
ಕೋಸಿ-ಮೇಚಿ ಇಂಟ್ರಾ-ಸ್ಟೇಟ್ ಲಿಂಕ್ ಯೋಜನೆಯು ಕೋಸಿ ನದಿಯ ಹೆಚ್ಚುವರಿ ನೀರಿನ ಭಾಗವನ್ನು ಬಿಹಾರದಲ್ಲಿರುವ ಮಹಾನಂದಾ ಜಲಾನಯನ ಪ್ರದೇಶಕ್ಕೆ ನೀರಾವರಿ ವಿಸ್ತರಿಸಲು ಅಸ್ತಿತ್ವದಲ್ಲಿರುವ ಪೂರ್ವ ಕೋಸಿ ಮುಖ್ಯ ಕಾಲುವೆ (ಇಕೆಎಂಸಿ) ಯನ್ನು ಪುನರ್ನಿರ್ಮಿಸುವ ಮೂಲಕ ತಿರುಗಿಸಲು ಮತ್ತು ಇಕೆಎಂಸಿಯನ್ನು ಅದರ ಕೊನೆಯ ತುದಿ ಆರ್ ಡಿ 41.30 ಕಿ.ಮೀ. ನಿಂದ ಆರ್ ಡಿ 117.50 ಕಿ.ಮೀ.ವರೆಗಿನ ಮೇಚಿ ನದಿಯವರೆಗೆ ವಿಸ್ತರಿಸುವ ಮೂಲಕ ಬಿಹಾರದಲ್ಲಿ ಹರಿಯುವ ಕೋಸಿ ಮತ್ತು ಮೇಚಿ ನದಿಗಳನ್ನು ಬಿಹಾರದೊಳಗೆ ಜೋಡಿಸಲು ಉದ್ದೇಶಿಸಿದೆ.
ಜೋಡಣೆ ಯೋಜನೆಯು ಬಿಹಾರದ ಅರಾರಿಯಾ, ಪೂರ್ಣಿಯಾ, ಕಿಶನಗಂಜ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ ಖಾರಿಫ್ ಋತುವಿನಲ್ಲಿ 2,10,516 ಹೆಕ್ಟೇರ್ ಹೆಚ್ಚುವರಿ ವಾರ್ಷಿಕ ನೀರಾವರಿಯನ್ನು ಒದಗಿಸುತ್ತದೆ. ಈ ಯೋಜನೆಯು ಕೋಸಿ ನದಿಯ ಸುಮಾರು 2,050 ಮಿಲಿಯನ್ ಘನ ಮೀಟರ್ ಹೆಚ್ಚುವರಿ ನೀರನ್ನು ಪ್ರಸ್ತಾವಿತ ಸಂಪರ್ಕ ಕಾಲುವೆಯ ಮೂಲಕ ತಿರುಗಿಸುವ/ಬಳಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಅಸ್ತಿತ್ವದಲ್ಲಿರುವ ಇಕೆಎಂಸಿಯನ್ನು ಪುನರ್ನಿರ್ಮಿಸಿದ ನಂತರ, ಅಸ್ತಿತ್ವದಲ್ಲಿರುವ ಪೂರ್ವ ಕೋಸಿ ಮುಖ್ಯ ಕಾಲುವೆಯ 1.57 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಕೊರತೆಯಿರುವ ಪೂರೈಕೆಯನ್ನು ಪುನಃಸ್ಥಾಪಿಸಲಾಗುತ್ತದೆ.
ಹಿನ್ನೆಲೆ:
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ ಎಂ ಕೆ ಎಸ್ ವೈ) ಯನ್ನು 2015-16ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ಜಮೀನಿನಲ್ಲಿ ನೀರಿನ ಭೌತಿಕ ಪ್ರವೇಶವನ್ನು ಹೆಚ್ಚಿಸುವುದು ಮತ್ತು ಖಚಿತ ನೀರಾವರಿ ಅಡಿಯಲ್ಲಿ ಕೃಷಿ ಪ್ರದೇಶವನ್ನು ವಿಸ್ತರಿಸುವುದು, ಜಮೀನಿನಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವುದು, ಸುಸ್ಥಿರ ಜಲ ಸಂರಕ್ಷಣಾ ಅಭ್ಯಾಸಗಳನ್ನು ಪರಿಚಯಿಸುವುದು ಇತ್ಯಾದಿಗಳ ಗುರಿಯೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
ಭಾರತ ಸರ್ಕಾರವು ಒಟ್ಟಾರೆ 93,068.56 ಕೋಟಿ ರೂ. (37,454 ಕೋಟಿ ರೂ. ಕೇಂದ್ರ ನೆರವು) ವೆಚ್ಚದೊಂದಿಗೆ 2021-26ನೇ ಸಾಲಿನಲ್ಲಿ ಪಿ ಎಂ ಕೆ ಎಸ್ ವೈ ಅನುಷ್ಠಾನಕ್ಕೆ ಅನುಮೋದನೆ ನೀಡಿತು. ಪಿ ಎಂ ಕೆ ಎಸ್ ವೈ ನ ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ (ಎಐಬಿಪಿ) ಘಟಕವು ಪ್ರಮುಖ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಮೂಲಕ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಪಿ ಎಂ ಕೆ ಎಸ್ ವೈ- ಎಐಬಿಪಿ ಅಡಿಯಲ್ಲಿ ಇಲ್ಲಿಯವರೆಗೆ 63 ಯೋಜನೆಗಳು ಪೂರ್ಣಗೊಂಡಿವೆ ಮತ್ತು ಏಪ್ರಿಲ್ 2016 ರಿಂದ 26.11 ಲಕ್ಷ ಹೆಕ್ಟೇರ್ ಹೆಚ್ಚುವರಿ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. 2012-22 ರಿಂದ ಪಿ ಎಂ ಕೆ ಎಸ್ ವೈ 2.0 ರ ಎಐಬಿಪಿ ಘಟಕದ ನಂತರ ಒಂಬತ್ತು ಯೋಜನೆಗಳನ್ನು ಸೇರಿಸಲಾಗಿದೆ. ಕೋಸಿ-ಮೆಚಿ ಇಂಟ್ರಾ-ಸ್ಟೇಟ್ ಲಿಂಕ್ ಯೋಜನೆಯ ಪಟ್ಟಿಯಲ್ಲಿ ಸೇರಿಸಲಾದ ಹತ್ತನೇ ಯೋಜನೆಯಾಗಿದೆ.
*****
(Release ID: 2116218)
Visitor Counter : 60
Read this release in:
Odia
,
Telugu
,
English
,
Urdu
,
Hindi
,
Nepali
,
Marathi
,
Assamese
,
Punjabi
,
Gujarati
,
Tamil
,
Malayalam