ಪ್ರಧಾನ ಮಂತ್ರಿಯವರ ಕಛೇರಿ
ಡಾ. ಶಂಕರ್ ರಾವ್ ತತ್ವವಾಡಿಯವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ
Posted On:
13 MAR 2025 8:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಡಾ. ಶಂಕರ್ ರಾವ್ ತತ್ವವಾಡಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಡಾ. ಶಂಕರ್ ರಾವ್ ತತ್ವವಾಡಿಯವರು ರಾಷ್ಟ್ರ ನಿರ್ಮಾಣ ಮತ್ತು ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆ ನೀಡಿದ ವ್ಯಾಪಕ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುವುದು ಎಂದು ಶ್ರೀ ಮೋದಿಯವರು ಹೇಳಿದ್ದಾರೆ. "ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ದೊರೆತದ್ದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಅವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ನಿಖರವಾದ ಕಾರ್ಯಶೈಲಿ ಸದಾ ಸ್ಪೂರ್ತಿದಾಯಕ" ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ಡಾ. ಶಂಕರ್ ರಾವ್ ತತ್ವವಾಡಿಯವರ ನಿಧನದಿಂದ ನನಗೆ ತುಂಬಾ ನೋವಾಗಿದೆ. ರಾಷ್ಟ್ರ ನಿರ್ಮಾಣ ಮತ್ತು ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಅವರು ನೀಡಿದ ವ್ಯಾಪಕ ಕೊಡುಗೆಗಾಗಿ ದೇಶವು ಅವರನ್ನು ಸ್ಮರಿಸುತ್ತದೆ. ಅವರು ತಮ್ಮನ್ನು ಆರ್ ಎಸ್ ಎಸ್ ಗೆ ಸಮರ್ಪಿಸಿಕೊಂಡು ಅದರ ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಛಾಪು ಮೂಡಿಸಿದ್ದಾರೆ. ಅವರು ಪ್ರಖ್ಯಾತ ವಿದ್ವಾಂಸರೂ ಆಗಿದ್ದು, ಯುವಕರಲ್ಲಿ ಸದಾ ವಿಚಾರಣಾ ಮನೋಭಾವವನ್ನು ಪ್ರೋತ್ಸಾಹಿಸುತ್ತಿದ್ದರು. ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಜೊತೆಗಿನ ಅವರ ಒಡನಾಟವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅವರ ವಿವಿಧ ವಿದ್ವತ್ತುಗಳಲ್ಲಿ ವಿಜ್ಞಾನ, ಸಂಸ್ಕೃತ ಮತ್ತು ಆಧ್ಯಾತ್ಮಿಕತೆ ಕೂಡಾ ಸೇರಿವೆ.
ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಅವರೊಂದಿಗೆ ಮಾತನಾಡುವ ಅವಕಾಶ ನನಗೆ ದೊರೆತದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಅವರ ಸೈದ್ಧಾಂತಿಕ ಸ್ಪಷ್ಟತೆ ಮತ್ತು ನಿಖರವಾದ ಕಾರ್ಯವೈಖರಿ ಸದಾ ಎದ್ದು ಕಾಣುತ್ತದೆ ಎಂದು ಹೇಳಿದ್ದಾರೆ.
ಓಂ ಶಾಂತಿ
*****
(Release ID: 2111805)
Visitor Counter : 36
Read this release in:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam