ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್ಸ್ ಕಾಮಿಕ್ ಕ್ರಾನಿಕಲ್ಸ್

Posted On: 24 FEB 2025 7:21PM by PIB Bengaluru

ಎಐ-ಚಾಲಿತ ಕಥೆ ಹೇಳುವಿಕೆಯೊಂದಿಗೆ ಕಲ್ಪನೆಗಳನ್ನು ವಾಸ್ತವಕ್ಕೆ ಪರಿವರ್ತಿಸಿ

 

ಪರಿಚಯ

ವೇವ್ಸ್ ಕಾಮಿಕ್ ಕ್ರಾನಿಕಲ್ಸ್ ಸೃಜನಶೀಲತೆಯ ಜಗತ್ತನ್ನು ಅನಾವರಣಗೊಳಿಸಲು ಸಿದ್ಧವಾಗಿದೆ, ಕಥೆಗಾರರಿಗೆ ತಮ್ಮ ಆಲೋಚನೆಗಳನ್ನು ಎಐ-ಚಾಲಿತ ಸಾಧನಗಳನ್ನು ಬಳಸಿಕೊಂಡು ರೋಮಾಂಚಕ ಕಾಮಿಕ್ಸ್‌ ಗಳಾಗಿ ಪರಿವರ್ತಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಉದ್ಘಾಟನಾ ವಿಶ್ವ ಧ್ವನಿ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಭಾಗವಾಗಿ, ಈ ಸವಾಲು ಭಾಗವಹಿಸುವವರನ್ನು ಡ್ಯಾಶ್‌ಟೂನ್ ಸ್ಟುಡಿಯೋ ಮೂಲಕ ಎಐ-ರಚಿತ ಕಾಮಿಕ್ಸ್ ಅನ್ನು ರಚಿಸಲು ಮತ್ತು ಪ್ರಸ್ತುತಪಡಿಸಲು, ಡ್ಯಾಶ್‌ಟೂನ್ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ತಮ್ಮ ಕಥೆಗಳನ್ನು ಪ್ರದರ್ಶಿಸಲು ಆಹ್ವಾನಿಸುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಐಎಎಂಎಐ) ಆಯೋಜಿಸಿರುವ ಸ್ಪರ್ಧೆಯು 15 ಫೆಬ್ರವರಿ 2025 ರವರೆಗೆ ಈಗಾಗಲೇ 774 ನೋಂದಣಿಗಳನ್ನು ಸ್ವೀಕರಿಸಿದೆ, ಇದು ಡಿಜಿಟಲ್ ಸೃಜನಶೀಲತೆಯ ಹೆಚ್ಚುತ್ತಿರುವ ಉತ್ಸಾಹವನ್ನು ತೋರಿಸುತ್ತದೆ.

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್‌ ನಲ್ಲಿ ಮೇ 1 ರಿಂದ 4, 2025 ರವರೆಗೆ ನಡೆಯಲಿರುವ ವೇವ್ಸ್‌ ಶೃಂಗಸಭೆಯು, ಇಡೀ ಮಾಧ್ಯಮ ಮತ್ತು ಮನರಂಜನಾ ವಲಯದ ಸಮನ್ವಯಕ್ಕೆ ಸಿದ್ಧವಾಗಿರುವ ಒಂದು ವಿಶಿಷ್ಟ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಮತ್ತು ಅದನ್ನು ಭಾರತೀಯ ಮಾಧ್ಯಮ ಮತ್ತು ಮನರಂಜನಾ ವಲಯ ಮತ್ತು ಅದರ ಪ್ರತಿಭೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ನಾಲ್ಕು ಮೂಲಭೂತ ಸ್ತಂಭಗಳ ಸುತ್ತಲೂ ರಚನೆಯಾಗಿದೆ, ಅವುಗಳೆಂದರೆ: ಪ್ರಸಾರ ಮತ್ತು ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್‌ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು. ವೇವ್ಸ್‌ ಕಾಮಿಕ್ ಕ್ರಾನಿಕಲ್ಸ್ ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಸ್ತಂಭದ ಭಾಗವಾಗಿದೆ, ಇದು ಡೈನಾಮಿಕ್ ಡಿಜಿಟಲ್ ಭೂದೃಶ್ಯವನ್ನು ಶೋಧಿಸುತ್ತದೆ, ಉದಯೋನ್ಮುಖ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳನ್ನು ಅನ್ವೇಷಿಸುತ್ತದೆ, ವಿಕಸನಗೊಳ್ಳುತ್ತಿರುವ ಅಪ್ಲಿಕೇಶನ್ ಆರ್ಥಿಕತೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಪ್ರಭಾವಶಾಲಿ ಮಾರುಕಟ್ಟೆಯ ಬೆಳೆಯುತ್ತಿರುವ ಪ್ರಭಾವವನ್ನು ಪರಿಶೀಲಿಸುತ್ತದೆ. ಈ ಸ್ತಂಭವು ನೈತಿಕ ಕಂಟೆಂಟ್ ರಚನೆ ಮತ್ತು ಜವಾಬ್ದಾರಿಯುತ ಡಿಜಿಟಲ್ ಬಳಕೆಯನ್ನು ಉತ್ತೇಜಿಸುತ್ತಾ ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯಂತಹ ನಿಯಂತ್ರಕ ಸವಾಲುಗಳನ್ನು ಸಹ ಪರಿಹರಿಸುತ್ತದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಉಪಕ್ರಮವಾದ 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಸ್', ವೇವ್ಸ್ ಶೃಂಗಸಭೆಯ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ದೃಷ್ಟಿಕೋನಕ್ಕೆ ಕೇಂದ್ರವಾಗಿದೆ. 73,000 ಕ್ಕೂ ಹೆಚ್ಚು ನೋಂದಣಿಗಳೊಂದಿಗೆ, ವೇವ್ಸ್ ಕಾಮಿಕ್ ಕ್ರಾನಿಕಲ್ಸ್ ಸೇರಿದಂತೆ ಈ ಸವಾಲುಗಳು, ಸೃಷ್ಟಿಕರ್ತರು ತಮ್ಮ ಆಲೋಚನೆಗಳನ್ನು ಜೀವಂತಗೊಳಿಸಲು, ಕಲಾತ್ಮಕ ಅಭಿವ್ಯಕ್ತಿ, ತಾಂತ್ರಿಕ ಪ್ರಯೋಗ ಮತ್ತು ಸಾಂಸ್ಕೃತಿಕ ಕಥೆ ಹೇಳುವಿಕೆಯನ್ನು ಬೆಳೆಸಲು ಒಂದು ರೋಮಾಂಚಕ ವೇದಿಕೆಯನ್ನು ನೀಡುತ್ತವೆ.

ಅರ್ಹತಾ ಮಾನದಂಡಗಳು

ಮಾರ್ಗಸೂಚಿಗಳು

  • ಕಾಮಿಕ್‌ ನ ಉದ್ದಕ್ಕೆ ಯಾವುದೇ ಮಿತಿಯಿಲ್ಲ, ಆದರೆ ಮಾನ್ಯವಾದ ಸಲ್ಲಿಕೆಗಳು ಕನಿಷ್ಠ 60 ಪ್ಯಾನೆಲ್‌ ಗಳನ್ನು ಹೊಂದಿರಬೇಕು (ಒಂದು ಚಿತ್ರ ಅಥವಾ ದೃಶ್ಯವನ್ನು ಒಂದು ಪ್ಯಾನೆಲ್‌ ಎಂದು ಪರಿಗಣಿಸಲಾಗುತ್ತದೆ).
  • ಕಾಮಿಕ್ ವರ್ಟಿಕಲ್ ಸ್ಕ್ರಾಲ್ ಸ್ವರೂಪವನ್ನು ಅನುಸರಿಸಬೇಕು (ವೆಬ್‌‌ ಟೂನ್ ಸ್ವರೂಪ).
  • ಕಾಮಿಕ್ ಇಂಗ್ಲಿಷ್‌ ನಲ್ಲಿರಬೇಕು.
  • ಎಲ್ಲಾ ಕಾಮಿಕ್‌ ಗಳನ್ನು ಡ್ಯಾಶ್‌ಟೂನ್ ಸ್ಟುಡಿಯೋ ಬಳಸಿ ರಚಿಸಬೇಕು ಮತ್ತು ಡ್ಯಾಶ್‌ಟೂನ್ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ಪ್ರಕಟಿಸಬೇಕು. ಭಾಗವಹಿಸುವವರು ಪೋಸ್ಟ್-ಪ್ರೊಡಕ್ಷನ್ ಅಥವಾ ಸಂಕಲನಕ್ಕಾಗಿ ಇತರ ಪರಿಕರಗಳನ್ನು ಬಳಸಬಹುದು, ಆದರೆ ಅಂತಿಮ ಕಾಮಿಕ್ ಅನ್ನು ಡ್ಯಾಶ್‌ಟೂನ್ ಸ್ಟುಡಿಯೋದಲ್ಲಿ ಜೋಡಿಸಿ ಡ್ಯಾಶ್‌ಟೂನ್ ಅಪ್ಲಿಕೇಶನ್ ಮೂಲಕ ಪ್ರಕಟಿಸಬೇಕು.
  • ಭಾಗವಹಿಸುವವರು ತಮ್ಮ ಕಾಮಿಕ್ ಅನ್ನು ಬೇರೆಡೆ ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಬಳಸಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಮುಕ್ತರಾಗಿದ್ದಾರೆ.
  • ಸ್ವಂತಿಕೆಯು ಮುಖ್ಯವಾಗಿದೆ: ಪಾತ್ರಗಳು ಮತ್ತು ಕಥೆಗಳನ್ನು ಯಾವುದೇ ಹಕ್ಕುಸ್ವಾಮ್ಯದ  ವಸ್ತುಗಳಿಂದ ನಕಲಿಸಬಾರದು (ಅಭಿಮಾನಿ ಕಾಲ್ಪನಿಕತೆಗಳಿಗೆ ಅವಕಾಶವಿಲ್ಲ).
  • ಕಂಟೆಂಟ್ ನಿರ್ಬಂಧಗಳು: ಕಾಮುಕ್ಸ್‌ ಸಲ್ಲಿಕೆಗಳು ಇವುಗಳನ್ನು ಒಳಗೊಂಡಿರಬಾರದು:‌
    • ಎನ್‌ ಎಸ್‌ ಎಫ್‌ ಡಬ್ಲ್ಯುಅಥವಾ ಅಶ್ಲೀಲ ವಿಷಯ
    • ಜನಾಂಗೀಯ ಅಥವಾ ಜಾತಿವಾದಿ ವಿಷಯ
    • ರಾಜಕೀಯ ಅಥವಾ ಜಾಹೀರಾತು ವಿಷಯ
  • ಭಾಗವಹಿಸುವವರು ತಮ್ಮ ಆಯ್ಕೆಯ ಯಾವುದೇ ವಿಷಯದ ಕುರಿತು ಕಾಮಿಕ್ ಅನ್ನು ರಚಿಸಬಹುದು.
  • ಈ ಹಿಂದೆ ಪ್ರಕಟವಾದ ಅಥವಾ ಬಿಡುಗಡೆಯಾದ ಕೃತಿಗಳನ್ನು, ವೈಯಕ್ತಿಕವಾಗಿ ಅಥವಾ ಮೂರನೇ ವ್ಯಕ್ತಿಯಿಂದ ಹಂಚಿಕೊಳ್ಳಲಾಗಿದ್ದರೂ, ಸಲ್ಲಿಸುವಂತಿಲ್ಲ. ಎಲ್ಲಾ ಸಲ್ಲಿಕೆಗಳು ಹೊಸ, ಅಪ್ರಕಟಿತ ಕೃತಿಗಳಾಗಿರಬೇಕು ಮತ್ತು ಸಾರ್ವಜನಿಕವಾಗಿ ಹಂಚಿಕೊಂಡಿರಬಾರದು.

ಘಟನಾವಳಿ

ಮೌಲ್ಯಮಾಪನ ಮಾನದಂಡಗಳು

ಬಹುಮಾನಗಳು ಮತ್ತು ಮನ್ನಣೆ

ಹೆಚ್ಚುವರಿ ಪುರಸ್ಕಾರಗಳು

  • ಅಗ್ರ 3 ವಿಜೇತರು: ವೇವ್ಸ್ ಶೃಂಗಸಭೆಯಲ್ಲಿ ತಮ್ಮ ಕಾಮಿಕ್ಸ್ ಅನ್ನು ಪ್ರಸ್ತುತಪಡಿಸುವ ಅವಕಾಶ ಪಡೆಯುತ್ತಾರೆ.
  • ಅಗ್ರ 25 ಭಾಗವಹಿಸುವವರು: ಗೂಗಲ್‌ ಪ್ಲೇ ಮತ್ತು ಡ್ಯಾಶ್‌ಟೂನ್‌ ಪ್ರಾಯೋಜಿಸಿದ ಉಡುಗೊರೆಯನ್ನು ಸ್ವೀಕರಿಸುತ್ತಾರೆ, ಜೊತೆಗೆ ಐಎಎಂಎಐ ಮತ್ತು ಡ್ಯಾಶ್‌ಟೂನ್‌ ನಿಂದ ಶ್ರೇಷ್ಠತೆ ಮತ್ತು ಗುರುತಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ.
  • ಎಲ್ಲಾ ಭಾಗವಹಿಸುವವರು: ಪ್ರವೇಶವು ಮಾನ್ಯವಾದ ನಂತರ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಮುಕ್ತಾಯ

ವೇವ್ಸ್‌ ಕಾಮಿಕ್ ಕ್ರಾನಿಕಲ್ಸ್, ವೇವ್ಸ್ ಶೃಂಗಸಭೆಯ ಅಡಿಯಲ್ಲಿ ಪ್ರಮುಖ ಉಪಕ್ರಮವಾದ ಕ್ರಿಯೇಟ್‌ ಇನ್‌ ಇಂಡಿಯಾ ಚಾಲೆಂಜ್‌ ನ ಪ್ರಮುಖ ಅಂಶವಾಗಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನೇತೃತ್ವದ ಈ ಸವಾಲುಗಳು, ಮಾಧ್ಯಮ ಮತ್ತು ಮನರಂಜನೆ ವಲಯದಾದ್ಯಂತ ಸೃಜನಶೀಲತೆಯನ್ನು ಪ್ರೇರೇಪಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಪ್ರತಿಭೆಯನ್ನು ಪೋಷಿಸುವ ಗುರಿಯನ್ನು ಹೊಂದಿವೆ. ಶೃಂಗಸಭೆಯ ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಸ್ತಂಭದ ಭಾಗವಾಗಿ, ವೇವ್ಸ್ ಕಾಮಿಕ್ ಕ್ರಾನಿಕಲ್ಸ್ ಡ್ಯಾಶ್‌ಟೂನ್ ಸ್ಟುಡಿಯೋದಲ್ಲಿ ಎಐ-ಚಾಲಿತ ಸಾಧನಗಳನ್ನು ಬಳಸಿಕೊಳ್ಳಲು ಭಾಗವಹಿಸುವವರನ್ನು ಆಹ್ವಾನಿಸುತ್ತದೆ, ಇದು ಮೂಲ ಕಥೆ ಹೇಳುವಿಕೆಗೆ ಒಂದು ರೋಮಾಂಚಕ ವೇದಿಕೆಯನ್ನು ಒದಗಿಸುತ್ತದೆ. ಈ ಸ್ಪರ್ಧೆಯು ಹೊಸ ಪ್ರತಿಭೆಯನ್ನು ಆಚರಿಸುವುದಲ್ಲದೆ, ಕಲಾತ್ಮಕ ಮತ್ತು ತಾಂತ್ರಿಕ ಶ್ರೇಷ್ಠತೆಗಾಗಿ ಜಾಗತಿಕ ಕೇಂದ್ರವಾಗಿ ಭಾರತವನ್ನು ಸ್ಥಾಪಿಸುವ ಕ್ರಿಯೇಟ್‌ ಇನ್‌ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿದೆ.

ಉಲ್ಲೇಖಗಳು:

 

 

Click here to download PDF

 

*****

 


(Release ID: 2106047)