ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯೋಗಕ್ಷೇಮ, ಸ್ವಾಸ್ಥ್ಯ ಮತ್ತು ಮಾನಸಿಕ ಶಾಂತಿಯ ವಿಷಯಗಳು ಬಂದಾಗ, ಸದ್ಗುರು ಜಗ್ಗಿ ವಾಸುದೇವ್ ಅವರು ಯಾವಾಗಲೂ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ: ಪ್ರಧಾನಮಂತ್ರಿ 

Posted On: 14 FEB 2025 8:12PM by PIB Bengaluru

ಸದ್ಗುರು ಜಗ್ಗಿ ವಾಸುದೇವ್ ಅವರು ಕ್ಷೇಮ ಮತ್ತು ಮಾನಸಿಕ ಶಾಂತಿಯ ವಿಚಾರದಲ್ಲಿ ಸದಾ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲೊಬ್ಬರು ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಳೆಯ ಪರೀಕ್ಷಾ ಪೇ ಚರ್ಚಾದ 4ನೇ ಸಂಚಿಕೆಯನ್ನು ಎಲ್ಲರೂ ವೀಕ್ಷಿಸುವಂತೆ ಕರೆ ನೀಡಿದರು. 

ಎಕ್ಸ್ ತಾಣದಲ್ಲಿ ಮೈಗೌ ಇಂಡಿಯಾ ಹೇಳಿರುವ ಸಂದೇಶಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ :

“ಕ್ಷೇಮ ಮತ್ತು ಮಾನಸಿಕ ಶಾಂತಿಯ ವಿಷಯಕ್ಕೆ ಬಂದಾಗ, @SadhguruJV ಯಾವಾಗಲೂ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ.  ನಾಳೆ ಫೆಬ್ರವರಿ 15, 2025 ರಂದು ಈ 'ಪರೀಕ್ಷಾ ಪೇ ಚರ್ಚಾ' ಸಂಚಿಕೆಯನ್ನು ವೀಕ್ಷಿಸಲು ನಾನು ಎಲ್ಲಾ ಪರೀಕ್ಷಾ ಯೋಧರು (#ExamWarriors ) ಮತ್ತು ಅವರ ಪೋಷಕರು ಮತ್ತು ಶಿಕ್ಷಕರನ್ನು ಕೇಳಿಕೊಳ್ಳುತ್ತೇನೆ."

 

 

*****

 


(Release ID: 2103621) Visitor Counter : 16