ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್ಸ್ 2025 "ರೀಲ್ ಮೇಕಿಂಗ್" ಚಾಲೆಂಜ್

Posted On: 11 FEB 2025 3:48PM by PIB Bengaluru

ಒಂದೊಂದೇ ರೀಲ್‌ಗಳಲ್ಲಿ ಕಥೆ ಹೇಳುವಿಕೆಯ ಭವಿಷ್ಯವನ್ನು ರೂಪಿಸುವುದು

 

ಪರಿಚಯ

ವೇವ್ಸ್ 2025 "ರೀಲ್ ಮೇಕಿಂಗ್" ಚಾಲೆಂಜ್ ಒಂದು ಅನನ್ಯ ಸ್ಪರ್ಧೆಯಾಗಿದ್ದು, ಇದು ರಚನೆಕಾರರು ಮತ್ತು ಉತ್ಸಾಹಿಗಳಿಗೆ ಮೆಟಾ ಉಪಕರಣಗಳನ್ನು ಬಳಸಿಕೊಂಡು 30-90 ಸೆಕೆಂಡುಗಳಲ್ಲಿ ಫಿಲ್ಮ್ ಫಾರ್ಮ್ಯಾಟ್ ಮೂಲಕ ತಮ್ಮ ಕಥೆ ಹೇಳುವ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಭಾಗಿತ್ವದಲ್ಲಿ ಭಾರತದ ಇಂಟೆರ್ ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಯೋಜಿಸಿರುವ ಈ ಸವಾಲಿಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆಬ್ರವರಿ 5, 2025 ರವರೆಗೆ ಭಾರತ ಮತ್ತು 20 ದೇಶಗಳಿಂದ 3,379 ನೋಂದಣಿಗಳು ಬಂದಿವೆ. ಇದು ಡಿಜಿಟಲ್ ರಚನೆಕಾರರಿಗೆ ಪ್ರಯೋಗ, ಹೊಸತನ ಮತ್ತು ಕಿರು-ರೂಪದ ಕಂಟೆಂಟ್‌ ಗಳಿಗಾಗಿ ವೇದಿಕೆಯನ್ನು ಒದಗಿಸುತ್ತದೆ.

ಈ ಸವಾಲು ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್‌ ನ ಭಾಗವಾಗಿದೆ, ಇದು ವರ್ಲ್ಡ್ ಆಡಿಯೊ ವಿಷುಯಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆ (ವೇವ್ಸ್) ಅಡಿಯಲ್ಲಿ ಪ್ರಮುಖ ಉಪಕ್ರಮವಾಗಿದ್ದು, ಇದು 2025 ರ ಮೇ 1 ರಿಂದ 4 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್ ನಲ್ಲಿ ನಡೆಯಲಿದೆ. ವೇವ್ಸ್ ಮಾಧ್ಯಮ ಮತ್ತು ಮನರಂಜನೆ (ಎಂ&ಇ) ಉದ್ಯಮದಲ್ಲಿ ಚರ್ಚೆ, ಸಹಯೋಗ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಪ್ರಮುಖ ಜಾಗತಿಕ ವೇದಿಕೆಯಾಗಿದೆ. ಉದ್ಯಮದ ನಾಯಕರು ಮತ್ತು ಭಾಗೀದಾರರನ್ನು ಒಟ್ಟುಗೂಡಿಸುವ ಮೂಲಕ, ಶೃಂಗಸಭೆಯು ಉದಯೋನ್ಮುಖ ಅವಕಾಶಗಳನ್ನು ಅನ್ವೇಷಿಸುತ್ತದೆ, ಸವಾಲುಗಳನ್ನು ಎದುರಿಸುತ್ತದೆ ಮತ್ತು ಜಾಗತಿಕ ಸೃಜನಶೀಲ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. 31 ಸ್ಪರ್ಧೆಗಳಲ್ಲಿ 70,000 ಕ್ಕೂ ಹೆಚ್ಚು ನೋಂದಣಿಗಳೊಂದಿಗೆ, ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಸೃಜನಶೀಲತೆ, ಪ್ರತಿಭೆ ಮತ್ತು ಅಂತರರಾಷ್ಟ್ರೀಯ ಭಾಗವಹಿಸುವಿಕೆ ಉತ್ತೇಜಿಸುವುದನ್ನು ಮುಂದುವರೆಸಿದೆ.

ವೇವ್ಸ್ 2025: ವಿಶ್ವಾದ್ಯಂತದ ಕ್ರಿಯೇಟರ್ಗಳನ್ನು ಒಂದುಗೂಡಿಸುವುದು

ವೇವ್ಸ್ 2025 ರ ಅಡಿಯಲ್ಲಿ ಪ್ರಮುಖ ಉಪಕ್ರಮವಾಗಿ ಪ್ರಾರಂಭಿಸಲಾದ “ರೀಲ್ ಮೇಕಿಂಗ್” ಚಾಲೆಂಜ್, ಮಾಧ್ಯಮ ಮತ್ತು ಮನರಂಜನೆಗಾಗಿ ಜಾಗತಿಕ ಕೇಂದ್ರವಾಗಿ ಭಾರತದ ಹೊರಹೊಮ್ಮುವಿಕೆಯನ್ನು ಒತ್ತಿಹೇಳುತ್ತದೆ ಮತ್ತು ಅದರ ಡಿಜಿಟಲ್ ಕ್ರಿಯೇಟರ್ ಆರ್ಥಿಕತೆಯ ತ್ವರಿತ ಬೆಳವಣಿಗೆಯನ್ನು ಒತ್ತಿಹೇಳುತ್ತದೆ. ಇದು ಭಾರತ ಸರ್ಕಾರದ "ಕ್ರಿಯೇಟ್‌ ಇನ್‌ ಇಂಡಿಯಾ" ದೃಷ್ಟಿಗೆ ಹೊಂದಿಕೆಯಾಗುತ್ತದೆ, ಇದು ದೇಶಾದ್ಯಂತ ಮತ್ತು ಅದರಾಚೆಗೆ ಪ್ರತಿಭೆಗಳನ್ನು ಉತ್ತೇಜಿಸುತ್ತದೆ.

ಈ ಚಾಲೆಂಜ್ ಅಫ್ಘಾನಿಸ್ತಾನ, ಅಲ್ಬೇನಿಯಾ, ಅಮೆರಿಕಾ, ಅಂಡೋರಾ, ಆಂಟಿಗುವಾ ಮತ್ತು ಬಾರ್ಬುಡಾ, ಬಾಂಗ್ಲಾದೇಶ, ಯುಎಇ, ಆಸ್ಟ್ರೇಲಿಯಾ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಗಮನಾರ್ಹ ಅಂತರರಾಷ್ಟ್ರೀಯ ಭಾಗವಹಿಸುವಿಕೆಯನ್ನು ಕಂಡಿದೆ. ಈ ಜಾಗತಿಕ ವ್ಯಾಪ್ತಿಯು ಸೃಜನಾತ್ಮಕ ವಲಯದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ ಮತ್ತು ಪ್ರಪಂಚದಾದ್ಯಂತದ ಕಂಟೆಂಟ್ ರಚನೆಕಾರರಿಗೆ ವೇವ್ಸ್‌‌ ಪ್ರಮುಖ ವೇದಿಕೆಯಾಗಿ ಬೆಳೆಯುತ್ತಿರುವುದನ್ನು ತೋರಿಸುತ್ತದೆ.

ದೇಶೀಯವಾಗಿ, ತವಾಂಗ್ (ಅರುಣಾಚಲ ಪ್ರದೇಶ), ದಿಮಾಪುರ್ (ನಾಗಾಲ್ಯಾಂಡ್), ಕಾರ್ಗಿಲ್ (ಲಡಾಖ್), ಲೇಹ್, ಶೋಪಿಯಾನ್ (ಕಾಶ್ಮೀರ), ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು), ಟೆಲಿಯಮೋರಾ (ತ್ರಿಪುರ), ಕಾಸರಗೋಡು (ಕೇರಳ) ಮತ್ತು ಗ್ಯಾಮಗಟಕ್‌ (ಸಿಕ್ಕಿಂ)  ಸೇರಿದಂತೆ ಭಾರತದಾದ್ಯಂತದ ವಿವಿಧ ಮತ್ತು ದೂರದ ಸ್ಥಳಗಳಿಂದ ಈ ಸವಾಲಿಗೆ ನಮೂದುಗಳನ್ನು ಸ್ವೀಕರಿಸಲಾಗಿದೆ. ಸಣ್ಣ ಪಟ್ಟಣಗಳು ​​ಮತ್ತು ಉದಯೋನ್ಮುಖ ಸೃಜನಶೀಲ ಕೇಂದ್ರಗಳಿಂದ ವೇವ್ಸ್‌ ನ “ರೀಲ್ ಮೇಕಿಂಗ್”ಸವಾಲಿಗೆ ಬಲವಾದ ಪ್ರತಿಕ್ರಿಯೆಯು ಭಾರತದ ಶ್ರೀಮಂತ ಕಥೆ ಹೇಳುವ ಸಂಪ್ರದಾಯಗಳು ಮತ್ತು ಬೆಳೆಯುತ್ತಿರುವ ಡಿಜಿಟಲ್ ಕ್ರಿಯೇಟರ್‌ ಪೂರಕ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ.

20 ವರ್ಷಕ್ಕಿಂತ ಮೇಲ್ಪಟ್ಟ ಭಾಗವಹಿಸುವವರು ಭಾರತದ ಪ್ರಸ್ತುತ ತಾಂತ್ರಿಕ ಮತ್ತು ಮೂಲಸೌಕರ್ಯ ಪ್ರಗತಿಗಳನ್ನು ಎತ್ತಿ ತೋರಿಸುವ "ವಿಕಸಿತ ಭಾರತ" ಮತ್ತು "ಭಾರತ@2047"ನಂತಹ ವಿಷಯಗಳ ಮೇಲೆ ರೀಲ್‌ ಗಳನ್ನು ರಚಿಸುತ್ತಾರೆ. ಈ ವಿಷಯಗಳು ಕಥೆಗಾರರಿಗೆ 30-60 ಸೆಕೆಂಡುಗಳ ಚಲನಚಿತ್ರದ ಮೂಲಕ ಭಾರತದ ನಾವೀನ್ಯತೆಯ ಪ್ರಯಾಣವನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ಒದಗಿಸುತ್ತವೆ, ದೇಶದ ಪ್ರಗತಿಗಾಗಿ ಅವರ ಸೃಜನಶೀಲತೆ ಮತ್ತು ದೃಷ್ಟಿಯನ್ನು ಪ್ರದರ್ಶಿಸುತ್ತವೆ.

ಥೀಮ್ ಗಳು

  • ಆಹಾರ: ಸ್ಟ್ರೀಟ್ ಫುಡ್ ನಿಂದ ಪ್ರಾದೇಶಿಕ ವಿಶೇಷತೆಗಳವರೆಗೆ ಭಾರತದ ಶ್ರೀಮಂತ ಪಾಕಪದ್ಧತಿಯ ಪರಂಪರೆಯನ್ನು ಸಂಭ್ರಮಿಸಿ.
  • ಪ್ರಯಾಣ: ಭಾರತದ ಉಸಿರುಬಿಗಿಹಿಡಿಯುವ ಭೂದೃಶ್ಯಗಳು, ಸಾಂಪ್ರದಾಯಿಕ ತಾಣಗಳು ಮತ್ತು ಗುಪ್ತ ರತ್ನಗಳನ್ನು ಸೆರೆಹಿಡಿಯಿರಿ.
  • ಫ್ಯಾಷನ್: ಸಾಂಪ್ರದಾಯಿಕ ಮತ್ತು ಆಧುನಿಕ ಭಾರತೀಯ ಫ್ಯಾಷನ್‌ ಗಳ ಸಮ್ಮಿಲನವನ್ನು ಅನ್ವೇಷಿಸಿ.
  • ನೃತ್ಯ ಮತ್ತು ಸಂಗೀತ: ಶಾಸ್ತ್ರೀಯ ಪ್ರದರ್ಶನಗಳಿಂದ ಸಮಕಾಲೀನ ಬೀಟ್‌ ಗಳವರೆಗೆ ಭಾರತದ ರೋಮಾಂಚಕ ಲಯಗಳನ್ನು ಪ್ರದರ್ಶಿಸಿ.
  • ಗೇಮಿಂಗ್: ಭಾರತದ ವಿಕಾಸಗೊಳ್ಳುತ್ತಿರುವ ಗೇಮಿಂಗ್ ಸಂಸ್ಕೃತಿ ಮತ್ತು ಮನರಂಜನೆಯ ಮೇಲೆ ಅದರ ಪ್ರಭಾವದಲ್ಲಿ ಮಿಂದೇಳಿ.
  • ಯೋಗ ಮತ್ತು ಸ್ವಾಸ್ಥ್ಯ: ಯೋಗ, ಆಯುರ್ವೇದ ಮತ್ತು ಸ್ವಾಸ್ಥ್ಯ ಅಭ್ಯಾಸಗಳ ಮೂಲಕ ಸಮಗ್ರ ಜೀವನದ ಸಾರವನ್ನು ಎತ್ತಿ ತೋರಿಸಿ.
  • ರಸ್ತೆ ಪ್ರವಾಸಗಳು: ಭಾರತೀಯ ರಸ್ತೆ ಪ್ರವಾಸಗಳು, ರಮಣೀಯ ಮಾರ್ಗಗಳು ಮತ್ತು ಪ್ರಯಾಣದ ಸಾಹಸಗಳ ರೋಮಾಂಚನವನ್ನು ಹಂಚಿಕೊಳ್ಳಿ.
  • ತಂತ್ರಜ್ಞಾನ: ಭವಿಷ್ಯವನ್ನು ರೂಪಿಸುವ ಎಆರ್, ವಿಆರ್ ಮತ್ತು ಡಿಜಿಟಲ್ ಆವಿಷ್ಕಾರಗಳೊಂದಿಗೆ ಸೃಜನಶೀಲತೆಯನ್ನು ತೋರಿಸಿ.

ನಿಯಮಗಳು

ರೀಲ್ ಮಾರ್ಗಸೂಚಿಗಳು

ಪುರಸ್ಕಾರಗಳು ಮತ್ತು ಮಾನ್ಯತೆ

  • 2025ರಲ್ಲಿ ಮೆಟಾ-ಆಯೋಜಿಸುವ ಕಾರ್ಯಕ್ರಮ ಮತ್ತು ರೀಲ್ಸ್ ಮಾಸ್ಟರ್‌ ಕ್ಲಾಸ್‌ ಗೆ ವಿಶೇಷ ಆಹ್ವಾನ.
  • ವೇವ್ಸ್‌ ಕಾರ್ಯಕ್ರಮಕ್ಕೆ ಎಲ್ಲಾ ವೆಚ್ಚಗಳನ್ನು ಪಾವತಿಸಿದ ಪ್ರವೇಶ.
  • ವಿಜೇತ ರೀಲ್‌ ಗಳನ್ನು ವೇವ್ಸ್‌ ಅಧಿಕೃತ ಜಾಲತಾಣದ ಪ್ರತಿಷ್ಠಿತ ವೇವ್ಸ್ ಹಾಲ್ ಆಫ್ ಫೇಮ್‌‌ ನಲ್ಲಿ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಗಳಲ್ಲಿ ಪ್ರದರ್ಶಿಸಲಾಗುತ್ತದೆ.
  • ಅಂತರರಾಷ್ಟ್ರೀಯ ಮಟ್ಟದ ಕಂಟೆಂಟ್ ರಚನೆಕಾರರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಂತಿಮ ಸ್ಪರ್ಧಿಗಳಿಗೆ ಸಚಿವಾಲಯ ಬೆಂಬಲ ನೀಡುತ್ತದೆ.

 

ಉಲ್ಲೇಖಗಳು:

https://wavesindia.org/challenges-2025

https://eventsites.iamai.in/Waves/reelmaking/

https://pib.gov.in/PressReleaseIframePage.aspx?PRID=2099990

 Click here to download PDF

 

*****

 

 


(Release ID: 2101890) Visitor Counter : 27