ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪರೀಕ್ಷಾ ಪೇ ಚರ್ಚಾ (PPC) 2025


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 10 ರಂದು ಬೆಳಗ್ಗೆ 11 ಗಂಟೆಗೆ ದೂರದರ್ಶನ (ಡಿಡಿ) ಸೇರಿದಂತೆ ಅನೇಕ ವೇದಿಕೆಗಳಲ್ಲಿ ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ

ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಮಂತ್ರಿ ಮೋದಿಯವರಿಂದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 36 ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ

ಮಾನಸಿಕ ಆರೋಗ್ಯದಿಂದ ತಂತ್ರಜ್ಞಾನದವರೆಗೆ, ವಿದ್ಯಾರ್ಥಿಗಳಿಗೆ ಹೆಚ್ಚು ತೊಡಗಿಸಿಕೊಳ್ಳುವ ಮತ್ತು ಸಂವಾದಾತ್ಮಕ ರೀತಿಯಲ್ಲಿ ಮಾರ್ಗದರ್ಶನ ನೀಡಲು ವಿಶಿಷ್ಠ ಹಾಗೂ ಉನ್ನತ ತಜ್ಞರು ಪರೀಕ್ಷಾ ಪೇ ಚರ್ಚಾ 2025ಗೆ ಸೇರಲು ಸಜ್ಜಾಗಿದ್ದಾರೆ

ಪರೀಕ್ಷಾ ಪೇ ಚರ್ಚಾ 2025 ರಾಷ್ಟ್ರವ್ಯಾಪಿ 5 ಕೋಟಿ ಭಾಗವಹಿಸುವಿಕೆಯೊಂದಿಗೆ ದಾಖಲೆಯನ್ನು ಸ್ಥಾಪಿಸುತ್ತದೆ

Posted On: 06 FEB 2025 12:08PM by PIB Bengaluru

ಬಹು ನಿರೀಕ್ಷಿತ ಪರೀಕ್ಷಾ ಪೇ ಚರ್ಚಾ 2025 (PPC 2025) ಫೆಬ್ರವರಿ 10, ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ, ಪರೀಕ್ಷೆಯ ತಯಾರಿ, ಒತ್ತಡ ನಿರ್ವಹಣೆ ಮತ್ತು ವೈಯಕ್ತಿಕ ಬೆಳವಣಿಗೆಯ ಕುರಿತು ಒಳನೋಟಗಳನ್ನು ನೀಡಲಿದ್ದಾರೆ.

ಈ ವರ್ಷ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ  36 ವಿದ್ಯಾರ್ಥಿಗಳನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮಂಡಳಿ  ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ, ಸಿಬಿಎಸ್ಇ (CBSE) ಮತ್ತು ನವೋದಯ ವಿದ್ಯಾಲಯದಿಂದ ಆಯ್ಕೆ ಮಾಡಲಾಗಿದೆ. ಕೆಲವು ವಿದ್ಯಾರ್ಥಿಗಳು ಪ್ರೇರಣಾ ಶಾಲೆಯ ಕಾರ್ಯಕ್ರಮದ ಹಳೆಯ ವಿದ್ಯಾರ್ಥಿಗಳು, ಕಲಾ ಉತ್ಸವ ಮತ್ತು ವೀರ ಗಾಥಾ ವಿಜೇತರೂ ಇದ್ದಾರೆ. ಈ ವಿದ್ಯಾರ್ಥಿಗಳನ್ನು ಪ್ರಧಾನಮಂತ್ರಿಯೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಆಯ್ಕೆ ಮಾಡಲಾಗಿದೆ - ಈ ಆವೃತ್ತಿಯು ಭಾರತದ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ನಿಜವಾದ ಪ್ರತಿಬಿಂಬವಾಗಿದೆ.

ಹೊಸ ಆಯಾಮವನ್ನು ಸೇರಿಸುವ ಮೂಲಕ, PPC 2025 ಎಂಟು ಸಂಚಿಕೆಗಳನ್ನು ವ್ಯಾಪಿಸಿರುವ ಅತ್ಯಾಕರ್ಷಕ ಹೊಸ ಸ್ವರೂಪದಲ್ಲಿ ತೆರೆದುಕೊಳ್ಳುತ್ತದೆ. ಪ್ರಧಾನಮಂತ್ರಿಯವರ ಜೊತೆಗಿನ ಮೊದಲ ಸಂವಾದವನ್ನು ದೂರದರ್ಶನ, ಸ್ವಯಂ, ಸ್ವಯಂ ಪ್ರಭಾ, ಪಿಎಮ್ಒ (PMO) ಯೂಟ್ಯೂಬ್ ಚಾನೆಲ್ ಮತ್ತು ಶಿಕ್ಷಣ ಸಚಿವಾಲಯ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ, ರಾಷ್ಟ್ರಾದ್ಯಂತದ ವೀಕ್ಷಕರು ಈ ಸಮೃದ್ಧ ಅನುಭವದಲ್ಲಿ ಭಾಗವಹಿಸಬಹುದು.

PPC ಜನಾಂದೋಲನ ಆಗುವುದರೊಂದಿಗೆ, ನಮ್ಮ ಮಕ್ಕಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಮಹತ್ವದ ಸಮುದಾಯದ ತೊಡಗಿಸಿಕೊಳ್ಳುವಿಕೆಯ ಮೂಲಕ ತಿಳಿಸಲಾಗುತ್ತಿದೆ. ಅಂತೆಯೇ, 8ನೇ ಆವೃತ್ತಿ, ಅಂದರೆ, PPC 2025 ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿದೆ, ಅವರು ತಮ್ಮ ಅನುಭವಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳುತ್ತಾರೆ, ಜೀವನ ಮತ್ತು ಕಲಿಕೆಯ ಪ್ರಮುಖ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಈ ಸಂಚಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಮಟ್ಟದ ಶಾಲಾ ಸ್ಪರ್ಧೆಗಳಿಂದ ಆಯ್ಕೆ ಪ್ರಕ್ರಿಯೆಯ ಮೂಲಕ ಸೇರಿಸಲಾಯಿತು.  ಈ ಸಂಚಿಕೆಗಳು, ವಿವಿಧ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತವೆ:

  • ಕ್ರೀಡೆ ಮತ್ತು ಶಿಸ್ತು: ಎಮ್ ಸಿ ಮೇರಿ ಕೋಮ್, ಅವನಿ ಲೆಖರಾ ಮತ್ತು ಸುಹಾಸ್ ಯತಿರಾಜ್ ಅವರು ಶಿಸ್ತಿನ ಮೂಲಕ ಗುರಿ ನಿಗದಿ ಪಡಿಸುವುದು , ಸ್ಥಿತಿಸ್ಥಾಪಕತ್ವ ಮತ್ತು ಒತ್ತಡ ನಿರ್ವಹಣೆಯ ಬಗ್ಗೆ ಮಾತನಾಡುತ್ತಾರೆ.
  • ಮಾನಸಿಕ ಆರೋಗ್ಯ: ದೀಪಿಕಾ ಪಡುಕೋಣೆ ಭಾವನಾತ್ಮಕ ಯೋಗಕ್ಷೇಮ ಮತ್ತು ಸ್ವಯಂ ಅಭಿವ್ಯಕ್ತಿಯ ಪ್ರಾಮುಖ್ಯತೆಯನ್ನು ಚರ್ಚಿಸಲಿದ್ದಾರೆ.
  • ಪೋಷಣೆ: ಶೋನಾಲಿ ಸಬೆರ್ವಾಲ್ ಮತ್ತು ರುಜುತಾ ದಿವೇಕರ್ ಆರೋಗ್ಯಕರ ಆಹಾರ ಪದ್ಧತಿ ಮತ್ತು ಶೈಕ್ಷಣಿಕ ಯಶಸ್ಸಿನಲ್ಲಿ ಗುಣಮಟ್ಟದ ನಿದ್ರೆಯ ಪಾತ್ರದ ಬಗ್ಗೆ ಒತ್ತಿ ಹೇಳಲಿದ್ದಾರೆ . ಆಹಾರ ರೈತ ಎಂದು ಕರೆಯಲ್ಪಡುವ ರೇವಂತ್ ಹಿಮತ್ಸಿಂಕಾ ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವ ಒಳನೋಟಗಳನ್ನು ಒದಗಿಸುತ್ತಾರೆ.
  • ತಂತ್ರಜ್ಞಾನ ಮತ್ತು ಹಣಕಾಸು: ಗೌರವ್ ಚೌಧರಿ (ತಾಂತ್ರಿಕ ಗುರೂಜಿ) ಮತ್ತು ರಾಧಿಕಾ ಗುಪ್ತಾ ಅವರು ತಂತ್ರಜ್ಞಾನವನ್ನು ಚುರುಕಾದ ಕಲಿಕೆ ಮತ್ತು ಆರ್ಥಿಕ ಸಾಕ್ಷರತೆಯ ಸಾಧನವಾಗಿ ಅನ್ವೇಷಿಸುತ್ತಾರೆ.
  • ಸೃಜನಶೀಲತೆ ಮತ್ತು ಸಕಾರಾತ್ಮಕತೆ: ವಿಕ್ರಾಂತ್ ಮಾಸ್ಸೆ ಮತ್ತು ಭೂಮಿ ಪೆಡ್ನೇಕರ್ ಅವರು ನಕಾರಾತ್ಮಕ ಆಲೋಚನೆಗಳನ್ನು ದೃಶ್ಯೀಕರಿಸಲು ಮತ್ತು ಬಿಡುಗಡೆ ಮಾಡಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸುವ ಮೂಲಕ ಧನಾತ್ಮಕ ಮನಸ್ಥಿತಿಯನ್ನು ಬೆಳೆಸುತ್ತಾರೆ.
  • ಸಾವಧಾನತೆ ಮತ್ತು ಮಾನಸಿಕ ಶಾಂತಿ: ವಿದ್ಯಾರ್ಥಿಗಳಿಗೆ ಮಾನಸಿಕ ಸ್ಪಷ್ಟತೆ ಮತ್ತು ಗಮನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಸದ್ಗುರುಗಳು ಪ್ರಾಯೋಗಿಕ ಸಾವಧಾನತೆ ತಂತ್ರಗಳನ್ನು ಹಂಚಿಕೊಳ್ಳುತ್ತಾರೆ.
  • ಯಶಸ್ಸಿನ ಕಥೆಗಳು: UPSC, IIT-JEE, CLAT, CBSE, NDA, ICSE ಮುಂತಾದ ವಿವಿಧ ಪರೀಕ್ಷೆಗಳ ಅಗ್ರಶ್ರೇಯಾಂಕಿತರು PPC ಯ ಹಿಂದಿನ ಆವೃತ್ತಿಯ ಭಾಗವಹಿಸುವವರ ಜೊತೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ತಮ್ಮ ತಯಾರಿ ತಂತ್ರಗಳನ್ನು ಹೇಗೆ ಪ್ರಭಾವಿಸಿದೆ ಮತ್ತು ಅವರನ್ನು ಪ್ರೇರೇಪಿಸಿತು ಎಂಬುದನ್ನು ಹಂಚಿಕೊಳ್ಳುತ್ತಾರೆ.

2018ರಲ್ಲಿ ಪ್ರಾರಂಭವಾದಾಗಿನಿಂದ, ಪರೀಕ್ಷಾ ಪೇ ಚರ್ಚಾ ರಾಷ್ಟ್ರವ್ಯಾಪಿ ಆಂದೋಲನವಾಗಿ ವಿಕಸನಗೊಂಡಿದೆ ಮತ್ತು ಈ ವರ್ಷದ ಆವೃತ್ತಿಯು 5 ಕೋಟಿಗೂ ಹೆಚ್ಚು ಭಾಗವಹಿಸುವಿಕೆಯೊಂದಿಗೆ ಹಿಂದಿನ ದಾಖಲೆಗಳನ್ನು ಮುರಿದಿದೆ, ಇದು ಇಲ್ಲಿಯವರೆಗಿನ ಅತ್ಯಂತ ಆಕರ್ಷಕ ಮತ್ತು ಪ್ರಭಾವಶಾಲಿ ಆವೃತ್ತಿಯಾಗಿದೆ.

ಶಿಕ್ಷಣ ಸಚಿವಾಲಯವು ಎಲ್ಲಾ ಹಿನ್ನೆಲೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಈ ವೇದಿಕೆಯನ್ನು ಪ್ರವೇಶಿಸಬಹುದೆಂದು ಖಚಿತಪಡಿಸಿಕೊಳ್ಳಲು ವಿಶೇಷ ಪ್ರಯತ್ನಗಳನ್ನು ಮಾಡಿದೆ, ಪರೀಕ್ಷಾ ಪೇ ಚರ್ಚಾವನ್ನು ಯುವ ಮನಸ್ಸುಗಳನ್ನು ಪೋಷಿಸುವ, ಶೈಕ್ಷಣಿಕ ಯಶಸ್ಸು ಮತ್ತು ವೈಯಕ್ತಿಕ ಬೆಳವಣಿಗೆಯತ್ತ ಮಾರ್ಗದರ್ಶನ ನೀಡುವ ಪರಿವರ್ತಕ ಉಪಕ್ರಮವಾಗಿದೆ.

ತಾಜಾ ಮಾಹಿತಿ, ಭಾಗವಹಿಸುವಿಕೆಯ ವಿವರಗಳು ಮತ್ತು ವಿಶೇಷ ಒಳನೋಟಗಳಿಗಾಗಿ, ಶಿಕ್ಷಣ ಸಚಿವಾಲಯ ಮತ್ತು ವಾರ್ತಾ ಮತ್ತು ಪ್ರಸಾರ  ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ  ಸಂಪರ್ಕದಲ್ಲಿರಿ.

 

*****


(Release ID: 2100246) Visitor Counter : 13